ಶಿಕ್ಷಣ, ಕೌಶಲ್ಯ ಮತ್ತು ಸಾಂಸ್ಕೃತಿಕ ಸಹಯೋಗದ ಬಲವರ್ಧನೆಗಾಗಿ ನವೀಕೃತ ಒಪ್ಪಂದಕ್ಕೆ ಸಹಿ ಹಾಕಿದ ಕರ್ನಾಟಕ ಸರ್ಕಾರ ಮತ್ತು ಬ್ರಿಟಿಷ್ ಕೌನ್ಸಿಲ್

0
57

ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ಸಹಯೋಗವನ್ನು ಬಲಪಡಿಸಲು ಕರ್ನಾಟಕ ಸರ್ಕಾರದ ಅಧಿಕಾರಿಗಳು ಮತ್ತು ಬ್ರಿಟಿಷ್ ಕೌನ್ಸಿಲ್ ನಾಯಕತ್ವವು ನವೀಕರಿಸಿದ ಒಪ್ಪಂದಕ್ಕೆ ಸಹಿ ಹಾಕಿದೆ.

ಬೆಂಗಳೂರು : ಕರ್ನಾಟಕ ಸರ್ಕಾರ ಮತ್ತು ಯುಕೆಯ ಸಾಂಸ್ಕೃತಿಕ ಸಂಬಂಧಗಳು ಮತ್ತು ಶೈಕ್ಷಣಿಕ ಅವಕಾಶಗಳ ಅಂತರರಾಷ್ಟ್ರೀಯ ಸಂಸ್ಥೆಯಾದ ಬ್ರಿಟಿಷ್ ಕೌನ್ಸಿಲ್ ಇಂದು ರ‍್ನಾಟಕದ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ (ಕೆಎಸ್ಎಚ್ಇಸಿ) ಕಚೇರಿಯಲ್ಲಿ ಒಡಂಬಡಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿವೆ. ಈ ಒಪ್ಪಂದವು ಎರಡೂ ಸಂಸ್ಥೆಗಳ ನಡುವಿನ ದೀರ್ಘಾಕಾಲಿಕ ಪಾಲುದಾರಿಕೆಯನ್ನು ಬಲಪಡಿಸುತ್ತದೆ ಮತ್ತು ಉನ್ನತ ಶಿಕ್ಷಣ, ಇಂಗ್ಲಿಷ್ ಮತ್ತು ಶಾಲಾ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಡಿಜಿಟಲ್ ಗ್ರಂಥಾಲಯಗಳು ಮತ್ತು ಕಲೆ ಮತ್ತು ಸೃಜನಶೀಲ ರ‍್ಥಿಕತೆಯ ಸಹಯೋಗದ ಬಲರ‍್ಧನೆಯ ಗುರಿಯನ್ನು ಹೊಂದಿದೆ.

ರ‍್ನಾಟಕ ಉನ್ನತ ಶಿಕ್ಷಣ ಇಲಾಖೆಯ ಕರ‍್ಯರ‍್ಶಿ ಖುಷ್ಬೂ ಗೋಯೆಲ್ ಚೌಧರಿ, ಐಎಎಸ್ ಮತ್ತು ಬ್ರಿಟಿಷ್ ಕೌನ್ಸಿಲ್ನ ದಕ್ಷಿಣ ಭಾರತದ ನರ‍್ದೇಶಕರಾದ ಜನಕ ಪುಷ್ಪನಾಥನ್ ಅವರು ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಮಾರಂಭದಲ್ಲಿ ರ‍್ನಾಟಕ ರ‍್ಕಾರ, ರ‍್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ (ಕೆಎಸ್ಎಚ್ಇಸಿ), ಬ್ರಿಟಿಷ್ ಕೌನ್ಸಿಲ್ ನಾಯಕತ್ವದ ಹಿರಿಯ ಅಧಿಕಾರಿಗಳು ಮತ್ತು ರಾಜ್ಯಾದ್ಯಂತದ ಪ್ರಮುಖ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಭಾಗವಹಿಸಿದ್ದರು.

ಈ ಒಪ್ಪಂದವು ಗುಣಮಟ್ಟದ ಶಿಕ್ಷಣ, ಅಂತರರಾಷ್ಟ್ರೀಯ ಮಾನದಂಡದ ಮೌಲ್ಯಮಾಪನಗಳು, ಕೌಶಲ್ಯ ಮತ್ತು ರ‍್ಹತೆಗಳು ಮತ್ತು ಭಾರತ ಮತ್ತು ಯುಕೆ ನಡುವಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಅವಕಾಶಗಳನ್ನು ವಿಸ್ತರಿಸುವ ಮೂಲಕ ಜಾಗತಿಕ ಜ್ಞಾನ ಕೇಂದ್ರವಾಗುವ ಸರ್ಕಾರ ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಈ ಒಪ್ಪಂದದ ಅಡಿಯಲ್ಲಿ, ಬ್ರಿಟಿಷ್ ಕೌನ್ಸಿಲ್ ಮತ್ತು ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಪಾಲುದಾರಿಕೆಗಳು, ಶಿಕ್ಷಕರ ವೃತ್ತಿಪರ ಅಭಿವೃದ್ಧಿ, ಯುವಜನರಿಗೆ ಕೌಶಲ್ಯ-ಕೇಂದ್ರಿತ ಕರ‍್ಯಕ್ರಮಗಳು ಮತ್ತು ಬ್ರಿಟಿಷ್ ಕೌನ್ಸಿಲ್ ಡಿಜಿಟಲ್ ಲೈಬ್ರರಿ ಮತ್ತು ಗ್ರಂಥಾಲಯ ಪಾಲುದಾರಿಕೆಗಳ ಮೂಲಕ ಡಿಜಿಟಲ್ ಕಲಿಕಾ ಸಂಪನ್ಮೂಲಗಳಿಗೆ ವಿಸ್ತೃತ ಪ್ರವೇಶ ಸೇರಿದಂತೆ ಇಂಗ್ಲಿಷ್ ಮತ್ತು ಶಾಲಾ ಶಿಕ್ಷಣ ಉಪಕ್ರಮಗಳಿಗೆ ಸಹಕಾರದೊಂದಿಗೆ ವಿಶಾಲ ಭಾರತ-ಯುಕೆ ವಿಷನ್ 2035 ಕ್ಕೆ ಅನುಗುಣವಾಗಿ ಕಲಾ ಸಹಯೋಗ ಮತ್ತು ಸೃಜನಶೀಲ ರ‍್ಥಿಕ ಉಪಕ್ರಮಗಳನ್ನು ಉತ್ತೇಜನ ದೊರೆಯುತ್ತದೆ.

ಗ್ಲೋಬಲ್ ವೇಲ್ಸ್ ಕರ‍್ಯಕ್ರಮದ ಮೂಲಕ ಅಂತರರಾಷ್ಟ್ರೀಯ ಶೈಕ್ಷಣಿಕ ಸಹಯೋಗದ ವಿಸ್ತರಣೆ ಈ ಕರ‍್ಯಕ್ರಮದ ಪ್ರಮುಖ ಅಂಶವಾಗಿದೆ. ರ‍್ನಾಟಕದ ಆರು ವಿಶ್ವವಿದ್ಯಾಲಯಗಳು ವೇಲ್ಸ್ನ ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗದ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಪಾಲುದಾರಿಕೆ ನಿಧಿಯನ್ನು ಯಶಸ್ವಿಯಾಗಿ ಪಡೆದುಕೊಂಡಿವೆ. ಈ ಉಪಕ್ರಮವು ಎರಡೂ ಪ್ರದೇಶಗಳಲ್ಲಿನ ಸಂಸ್ಥೆಗಳ ನಡುವೆ ಸಂಶೋಧನಾ ಸಹಯೋಗ, ಸಾರ‍್ಥ್ಯ ವೃದ್ಧಿ, ಅಂತರರಾಷ್ಟ್ರೀಯ ಶಿಕ್ಷಣ ಮತ್ತು ಜ್ಞಾನ ವಿನಿಮಯವನ್ನು ಬೆಂಬಲಿಸುತ್ತದೆ.

ಅಂತಿಮ ಅನುದಾನವನ್ನು ರ‍್ನಾಟಕದ ಆರು ವಿಶ್ವವಿದ್ಯಾಲಯಗಳಾದ ದಾವಣಗೆರೆ ವಿಶ್ವವಿದ್ಯಾಲಯ, ಡಾ. ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ, ರ‍್ನಾಟಕ ವಿಶ್ವವಿದ್ಯಾಲಯ ಧಾರವಾಡ, ಮಂಗಳೂರು ವಿಶ್ವವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಗಳಿಗೆ ನೀಡಲಾಯಿತು.

ಉಃP 4,500 ಮೌಲ್ಯದ ಒಟ್ಟು ಎಂಟು ಅನುದಾನಗಳನ್ನು ನೀಡಲಾಯಿತು, ಇದರಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎರಡು ಬಾರಿ ಅನುದಾನವನ್ನು ಪಡೆದುಕೊಂಡಿವೆ.

ರ‍್ನಾಟಕ ಮತ್ತು ವೇಲ್ಸ್ ನಡುವಿನ ಸಂಬಂಧಗಳಿಗೆ ಪೂರಕವಾಗಿ ಈ ಘೋಷಣೆಯನ್ನು ಮಾಡಲಾಗಿದ್ದು, ಇದರಲ್ಲಿ ಇತ್ತೀಚೆಗೆ ಬ್ರಿಟಿಷ್ ಕೌನ್ಸಿಲ್ ಆಯೋಜಿಸಿದ ಕರ್ನಾಟಕ ವೇಲ್ಸ್ಗೆ ವಿಶ್ವವಿದ್ಯಾಲಯದ ನಾಯಕರ ನಿಯೋಗವೂ ಸೇರಿದೆ. ಈ ಭೇಟಿಯು ಸಂಸ್ಥೆಗಳ ಸಹಯೋಗದ ಸಂಶೋಧನೆಯ ಅನ್ವೇಷಣೆ, ವೇಲ್ಸ್-ಭಾರತ ಉನ್ನತ ಶಿಕ್ಷಣ ದುಂಡುಮೇಜಿನಲ್ಲಿ ಭಾಗವಹಿಸುವಿಕೆ ಮತ್ತು ದರ‍್ಘಕಾಲಿಕ ಶೈಕ್ಷಣಿಕ ಪಾಲುದಾರಿಕೆಗಳ ಬಲರ‍್ಧನೆಗೆ ಅನುವು ಮಾಡಿಕೊಟ್ಟಿತು.

ಕರ್ನಾಟಕ ಸರ್ಕಾರ ಗೌರವಾನ್ವಿತ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರು ಹೀಗೆ ಹೇಳಿದರು: “ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಉತ್ತಮ ಮತ್ತು ಹೆಚ್ಚು ಜಾಗತಿಕವಾಗಿಸಲು ರ‍್ನಾಟಕ ರ‍್ಕಾರವು ಬಲವಾದ ಅಂತರರಾಷ್ಟ್ರೀಯ ಪಾಲುದಾರಿಕೆಗಳನ್ನು ನರ‍್ಮಿಸಲು ಸರ‍್ಪಿತವಾಗಿದೆ. ಬ್ರಿಟಿಷ್ ಕೌನ್ಸಿಲ್ನೊಂದಿಗೆ ಕೆಲಸ ಮಾಡುವುದರಿಂದ ಯುವಜನರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ, ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಉದ್ಯೋಗಗಳನ್ನು ಪಡೆಯುವ ಸಾಧ್ಯತೆಗಳನ್ನು ಸುಧಾರಿಸುತ್ತದೆ. ಈ ಪಾಲುದಾರಿಕೆಗಳು ಸಂಶೋಧನೆಯನ್ನು ಉತ್ತೇಜಿಸುತ್ತವೆ, ನಾವೀನ್ಯತೆಯನ್ನು ಪ್ರೋತ್ಸಾಹಿಸುತ್ತವೆ ಮತ್ತು ರಾಜ್ಯದ ದರ‍್ಘಕಾಲೀನ ರ‍್ಥಿಕ ಬೆಳವಣಿಗೆಗೆ ಬೆಂಬಲ ನೀಡುತ್ತವೆ.”

ಬ್ರಿಟಿಷ್ ಕೌನ್ಸಿಲ್ನ ಭಾರತದ ರಾಷ್ಟ್ರ ನರ‍್ದೇಶಕಿಯಾದ ಅಲಿಸನ್ ಬ್ಯಾರೆಟ್ ಎಂಬಿಇ, “ರ‍್ನಾಟಕ ರ‍್ಕಾರದೊಂದಿಗಿನ ನಮ್ಮ ನಿರಂತರ ಪಾಲುದಾರಿಕೆಯು ಶಿಕ್ಷಣ, ಕೌಶಲ್ಯ ಮತ್ತು ಸಾಂಸ್ಕೃತಿಕ ವಿನಿಮಯದ ಮೂಲಕ ಯುವಜನರಿಗೆ ಅವಕಾಶಗಳನ್ನು ವಿಸ್ತರಿಸುವ ಹಂಚಿಕೆಯ ಬದ್ಧತೆಯನ್ನು ಪ್ರತಿಫಲಿಸುತ್ತದೆ. ಭಾರತ-ಯುಕೆ ವಿಷನ್ 2035 ರ ಮಹತ್ವಾಕಾಂಕ್ಷೆಗಳೊಂದಿಗೆ ಹೊಂದಿಕೊಂಡಂತೆ, ಈ ಸಹಯೋಗವು ಸಾಂಸ್ಥಿಕ ಪಾಲುದಾರಿಕೆಗಳನ್ನು ಮತ್ತಷ್ಟು ಬಲಪಡಿಸುತ್ತದೆ, ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣವನ್ನು ಬೆಂಬಲಿಸುತ್ತದೆ ಮತ್ತು ಗುಣಮಟ್ಟದ ಕಲಿಕಾ ಸಂಪನ್ಮೂಲಗಳಿಗೆ ಲಭ್ಯತೆಗೆ ವಿಸ್ತರಿಸುತ್ತದೆ. ಗ್ಲೋಬಲ್ ವೇಲ್ಸ್ ಪಾಲುದಾರಿಕೆಗಳು ಮತ್ತು ರ‍್ನಾಟಕದ ವಿಶ್ವವಿದ್ಯಾಲಯಗಳೊಂದಿಗೆ ನಮ್ಮ ನಿರಂತರ ಒಳಗೊಳ್ಳುವಿಕೆಯಂತಹ ಉಪಕ್ರಮಗಳ ಮೂಲಕ, ಭಾರತ ಮತ್ತು ಯುಕೆ ಎರಡರಲ್ಲೂ ವಿದ್ಯರ‍್ಥಿಗಳು, ಶಿಕ್ಷಕರು ಮತ್ತು ಸಂಸ್ಥೆಗಳಿಗೆ ಆಳವಾದ ಜ್ಞಾನ ವಿನಿಮಯವನ್ನು ಸಕ್ರಿಯಗೊಳಿಸಲು ಮತ್ತು ರ‍್ಥಪರ‍್ಣ ಅವಕಾಶಗಳನ್ನು ಸೃಷ್ಟಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.”

ಬ್ರಿಟಿಷ್ ಕೌನ್ಸಿಲ್ನ ದಕ್ಷಿಣ ಭಾರತದ ನರ‍್ದೇಶಕಿ ಜನಕ ಪುಷ್ಪನಾಥನ್ ಅವರು “ರಾಜ್ಯದಲ್ಲಿ ಉನ್ನತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಬಲರ‍್ಧನೆಗಾಗಿ ರ‍್ನಾಟಕ ರ‍್ಕಾರದೊಂದಿಗೆ ತನ್ನ ಸಹಯೋಗವನ್ನು ಮುಂದುವರಿಸಲು ಬ್ರಿಟಿಷ್ ಕೌನ್ಸಿಲ್ ರ‍್ಷಿಸುತ್ತದೆ. ಗ್ಲೋಬಲ್ ವೇಲ್ಸ್ ಪಾಲುದಾರಿಕೆಗಳು ಶೈಕ್ಷಣಿಕ ಸಹಕಾರವನ್ನು ವಿಸ್ತರಿಸುವಲ್ಲಿ ಪ್ರಮುಖ ಮೈಲಿಗಲ್ಲನ್ನು ಪ್ರತಿನಿಧಿಸುತ್ತವೆ, ರ‍್ನಾಟಕ ಮತ್ತು ವೇಲ್ಸ್ನ ವಿಶ್ವವಿದ್ಯಾಲಯಗಳು ಸಂಶೋಧನೆ, ನಾವೀನ್ಯತೆ ಮತ್ತು ಜ್ಞಾನ ವಿನಿಮಯದಲ್ಲಿ ಒಟ್ಟಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಈ ಉಪಕ್ರಮಗಳು ಜಾಗತಿಕವಾಗಿ ಸಂರ‍್ಕ ಹೊಂದಿದ ಸಂಸ್ಥೆಗಳು ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಪ್ರತಿಭೆಗಳನ್ನು ನರ‍್ಮಿಸಲು ಕೊಡುಗೆ ನೀಡುತ್ತವೆ” ಎಂದು ಹೇಳಿದರು.

ಈ ಒಡಂಬಡಿಕೆಯು ಮೂರು ರ‍್ಷಗಳ ಕಾಲ ಜಾರಿಯಲ್ಲಿರುತ್ತದೆ, ಈ ಅವಧಿಯಲ್ಲಿ ಇಬ್ಬರೂ ಪಾಲುದಾರರು ಅಂತರರಾಷ್ಟ್ರೀಯ ಶೈಕ್ಷಣಿಕ ಸಹಯೋಗವನ್ನು ಹೆಚ್ಚಿಸುವ ಕರ‍್ಯಕ್ರಮಗಳನ್ನು ಅಭಿವೃದ್ಧಿಪಡಿಸಲು, ಬ್ರಿಟಿಷ್ ಕೌನ್ಸಿಲ್ ಡಿಜಿಟಲ್ ಲೈಬ್ರರಿಯಂತಹ ಡಿಜಿಟಲ್ ಕಲಿಕಾ ಸಂಪನ್ಮೂಲಗಳಿಗೆ ಲಭ್ಯತೆಯನ್ನು ಸಾಧಿಸಲು, ಶಿಕ್ಷಕರ ಅಭಿವೃದ್ಧಿಯನ್ನು ಬಲಪಡಿಸಲು, ಇಂಗ್ಲಿಷ್ ಕೌಶಲ್ಯ ಕರ‍್ಯಕ್ರಮ ಮತ್ತು ಇಂಗ್ಲಿಷ್ ಭಾಷಾ ಕಲಿಕೆಯಂತಹ ಉಪಕ್ರಮಗಳೊಂದಿಗೆ ಕೌಶಲ್ಯಗಳನ್ನು ಬೆಂಬಲಿಸಲು ಮತ್ತು ಶಿಕ್ಷಣ, ಗ್ರಂಥಾಲಯಗಳು ಮತ್ತು ಸೃಜನಶೀಲ ರ‍್ಥಿಕತೆಯಲ್ಲಿ ನಾವೀನ್ಯತೆಯನ್ನು ಬೆಳೆಸಲು ಒಟ್ಟಾಗಿ ಕೆಲಸ ಮಾಡುತ್ತಾರೆ.

LEAVE A REPLY

Please enter your comment!
Please enter your name here