ಮಾ.13 (ಇಂದು) : ಹೋಟೆಲ್ ಮಾಲಕರ ಸಭೆ

0
95

ಉಡುಪಿ : ಪ್ರಸ್ತುತ ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಭೀತಿಯಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಗಳ ಅಲಭ್ಯತೆ ಕಾರಣದಿಂದ ಹೋಟೆಲ್/ ರೆಸ್ಟೋರೆಂಟ್ ಗಳನ್ನು ನಡೆಸಲು ದೊಡ್ಡ ಸಮಸ್ಯೆ ಎದುರಾಗಿರುವ ಹಿನ್ನಲೆಯಲ್ಲಿ ಈ ಬಗ್ಗೆ ಚರ್ಚಿಸಲು ಉಡುಪಿ ಜಿಲ್ಲಾ ಹೋಟೆಲ್ ಮಾಲಕರ ಸಂಘದ ವತಿಯಿಂದ ಉಡುಪಿಯ ಡಯಾನಾ ಹೋಟೆಲ್ ನಲ್ಲಿ ಮಾರ್ಚ್ 13 ರಂದು ಬೆಳಗ್ಗೆ 10.00ಕ್ಕೆ ಹೋಟೆಲ್ ಮಾಲೀಕರ ಸಭೆ ಕರೆಯಲಾಗಿದೆ.

ಈ ಸಭೆಗೆ ಪತ್ರಕರ್ತ ಮಿತ್ರರಿಗೆ ಪ್ರೀತಿ ಪೂರ್ವಕ ಆಮಂತ್ರಣ ಇದೆ ಎಂದು ಉಡುಪಿ ಜಿಲ್ಲಾ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷರು ಆಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here