ಮೂರು ವರ್ಷ ಅವಧಿಯ ಡಿಪ್ಲೋಮಾ ಕೋರ್ಸ್ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

0
85

ಮಂಗಳೂರು ಬೈಕಂಪಾಡಿಯ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ 2026 27 ನೇ ಸಾಲಿನ ಡಿಪ್ಲೋಮೋ ಕೋರ್ಸ್ಗಳ ಪ್ರವೇಶಕ್ಕೆ ಎಸ್ ಎಸ್ ಎಲ್ ಸಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಮೇ 10 ಕ್ಕೆ ಮೊದಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅನಂತರ ವಿದ್ಯಾರ್ಥಿಗಳು ನೇರವಾಗಿ ತರಬೇತಿ ಕೇಂದ್ರವನ್ನು ಸಂಪರ್ಕಿಸ ಬೇಕಾಗಿರುತ್ತದೆ.

ಈ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್, ಡಿಪ್ಲೋಮ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್, ಡಿಪ್ಲೋಮಾ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮೆಷಿನ್ ಲರ್ನಿಂಗ್ ಕೋರ್ಸ್ಗಳು ಲಭ್ಯವಿದ್ದು ಪಿಯುಸಿ ಹಾಗೂ ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ನೇರವಾಗಿ ದ್ವಿತೀಯ ವರ್ಷದ ಡಿಪ್ಲೋಮಾ ಕೋರ್ಸಿಗೆ ಪ್ರವೇಶಾತಿಯನ್ನು ಪಡೆಯಬಹುದಾಗಿರುತ್ತದೆ. ಆಸಕ್ತರು 9008263660, 9448364741 ಅಥವಾ 8073208137 ನನ್ನು ಸಂಪರ್ಕಿಸಬಹುದು.

ಒಟ್ಟು 60 ವಿದ್ಯಾರ್ಥಿಗಳಿಗೆ ಪ್ರತಿ ಕೋರ್ಸುಗಳಲ್ಲಿ ಅವಕಾಶವಿದ್ದು 30 ಶೇಕಡ ಥಿಯಾರಿ ಹಾಗೂ 70 ಶೇಕಡ ಪ್ರಾಕ್ಟಿಕಲ್ಗೆ ಆದ್ಯತೆ ಇರುತ್ತದೆ. ಅಧ್ಯಯನ ಮಾಡುವಾಗ ಕಡ್ಡಾಯವಾಗಿ ಒಂದು ವರ್ಷದ ಇಂಟರ್ನಶಿಪ್ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳಿಗೆ ನೇರವಾಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಅಥವಾ ಸ್ವತಹ ಉದ್ಯಮಗಳನ್ನು ಸ್ಥಾಪಿಸಲು ಸಾಕಷ್ಟು ಉತ್ತೇಜನವನ್ನು ನೀಡಲಾಗುತ್ತಿದೆ.

ಪ್ರತಿ ವಿದ್ಯಾರ್ಥಿಗೂ ವಿದ್ಯಾರ್ಜನೆಯ ಸಮಯದಲ್ಲಿ 15 ರಿಂದ 20,000 ಶಿಷ್ಯವೇತನವನ್ನು ಕೂಡ ನೀಡಲಾಗುತ್ತದೆ. ಈಗಾಗಲೇ 1200 ವಿದ್ಯಾರ್ಥಿಗಳು ಈಗಾಗಲೇ ಕಲಿತು ಪ್ರತಿಷ್ಠಿತ ಕಂಪನಿಗಳಲ್ಲಿ ಭಾರತದಾದ್ಯಂತ ಹಾಗೂ ವಿದೇಶಗಳಲ್ಲಿಯೂ ಕೂಡ ಉದ್ಯೋಗವನ್ನು, ಸ್ವಂತ ಉದ್ಯಮವನ್ನು ಸ್ಥಾಪಿಸಲು ಪ್ರೇರೇಪಿಸಿದ ಕೀರ್ತಿ ತರಬೇತಿ ಕೇಂದ್ರದ್ ಆಗಿರುತ್ತದೆ ಎಂದು ಪ್ರಾಂಶುಪಾಲ ಲಕ್ಷ್ಮೀ ನಾರಾಯಣ ಸಿ ಆರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಯಜ್ಞೇಶ್ ಶೆಟ್ಟಿಗಾರ್, ಪ್ರಮಿತ್ ಶೆಟ್ಟಿ, ಜೀಟಾ ಡಿಸೋಜ, ಗೌತಮ್ ಹಾಜರಿದ್ದರು.
.

LEAVE A REPLY

Please enter your comment!
Please enter your name here