ಮೇ 5 ವಿಶ್ವ ಅಸ್ತಮಾ ದಿನದ ಅಂಗವಾಗಿ ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯಲ್ಲಿ ಮೇ ನಾಲ್ಕರಿಂದ 9ರ ತನಕ ಉಚಿತ ಅಸ್ತಮ ತಪಾಸಣಾ ಸಪ್ತಾಹ ನಡೆಯಲಿದೆ. ಈ ಸಂದರ್ಭ ಪಲ್ಮನಾಲಜಿಸ್ಟ್ ಡಾ. ಕೀರ್ತನ್ ಗಣಪತಿ ಅವರು ಅಸ್ತಮಾಗೆ ಕಾರಣವಾಗುವ ಅಂಶಗಳನ್ನು ತಿಳಿಸಿ ಸರಿಯಾಗಿ ಔಷಧಿಗಳನ್ನು ಬಳಸುವುದರಿಂದ ತಹಬಂದಿಗೆ ತರಬಹುದು ಎಂದು ತಿಳಿಸಿದರು.
ಮೇ 4 ರಿಂದ 9 ರವರೆಗೆ ಅಸ್ತಮಾ ತಪಾಸಣಾ ಸಪ್ತಾಹದಲ್ಲಿ ಸಂಪೂರ್ಣ ಉಚಿತ ಸಮಾಲೋಚನೆ ಲಭ್ಯವಿದ್ದು ಅಗತ್ಯವಿದ್ದಲ್ಲಿ ಸ್ಪೈರೋಮೆಟ್ರಿ ಪರೀಕ್ಷೆಯಲ್ಲಿಯೂ 50% ರಿಯಾಯಿತಿ ನೀಡಲಾಗುವುದು. ಸ್ಪೈರೋಮೆಟ್ರಿ ಶ್ವಾಸಕೋಶ ಕಾರ್ಯಕ್ಷಮತೆಯನ್ನು ಅಳೆಯುವ ಪರೀಕ್ಷೆಯಾಗಿದ್ದು ವಾಯುನಾಳದ ಅಡಚಣೆಯ ಮಟ್ಟವನ್ನು ಗುರುತಿಸಲು ಸಹಾಯ ಮಾಡುತ್ತದೆ ಮತ್ತು ನಿಖರವಾದ ನಿರ್ಣಯ ಮತ್ತು ಚಿಕಿತ್ಸಾ ಯೋಜನೆಗಳಿಗೆ ನೆರವಾಗುತ್ತದೆ ಎಂದು ತಿಳಿಸಿದರು. ಶಿಬಿರದಲ್ಲಿ ಭಾಗವಹಿಸಲು ಆಸಕ್ತರು 6361687 3 8 5 ಸಂಖ್ಯೆಗೆ ಕರೆ ಮಾಡಿ ಮೊದಲಾಗಿ ನೋಂದಣಿ ಮಾಡಿಕೊಳ್ಳಬೇಕು.
ಉಸಿರಾಟ ತೊಂದರೆ ಇರುವವರು, ಈಗಾಗಲೇ ಅಸ್ತಮಾ ಇರುವವರು, ಕೆಮ್ಮು ಅಥವಾ ಅಲರ್ಜಿ ಸಮಸ್ಯೆಯಿಂದ ಬಳಲುವವರು, ಧೂಮಪಾನಿಗಳು, ಧೂಳು ಮಾಲಿನ್ಯ ಅಥವಾ ರಾಸಾಯನಿಕಗಳಿಗೆ ಒಳಪಡುವವರು, ಅಲರ್ಜಿ ಸಮಸ್ಯೆ ಇರುವವರು, ಶ್ವಾಸಕೋಶ ಆರೋಗ್ಯವನ್ನು ಪರಿಶೀಲಿಸಿಕೊಳ್ಳಲು ಬಯಸುವವರು ಭಾಗವಹಿಸಬಹುದಾಗಿದೆ. ಸಾಮಾನ್ಯ ಪತ್ತೆಹಚ್ಚಲಾಗದ ಪ್ರಕರಣಗಳನ್ನು ವಿಶೇಷ ಆಧುನಿಕ ಪರೀಕ್ಷಾ ವಿಧಾನಗಳ ಮೂಲಕ ಪತ್ತೆಹಚ್ಚಲು ಸಾಕಷ್ಟು ಸೌಲಭ್ಯಗಳನ್ನು ಇಂಡಿಯಾನಾ ಆಸ್ಪತ್ರೆ ಹೊಂದಿದೆ ಎಂದು ಡಾ ಕೀರ್ತನ್ ಗಣಪತಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಲಿಡ್ವಿನ್ ಡಿಸೋಜಾ ಹಾಜರಿದ್ದರು.
ವರದಿ : ರಾಯಿ ರಾಜ ಕುಮಾರ

