ಬೆಂ.ನಗರ ವಿ.ವಿ ಫಲಿತಾಂಶ: ಎಂ.ಇ.ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿಗೆ ಐದು ರ್ಯಾಂಕ್

0
31

ಬೆಂಗಳೂರು: ಬೆಂಗಳೂರು ನಗರ ಡಾ. ಮನಮೋಹನ್ ಸಿಂಗ್ ವಿಶ್ವವಿದ್ಯಾಲಯ ವ್ಯಾಪ್ತಿಯ ಎಂ.ಇ.ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

ಎಂ.ಎಸ್.ಸಿಯಲ್ಲಿ [86.81%] ಉತ್ತಮ ಸಾಧನೆಯೊಂದಿಗೆ ಶಿಲ್ಪಾ ಜಿ ಎಸ್
2ನೇ ರ್ಯಾಂಕ್, ಬಿಎ ಯಲ್ಲಿ ನಿಸರ್ಗಾ ಪಿ [95.49%]
3ನೇ ರ್ಯಾಂಕ್, ಬಿಕಾಂ ನಲ್ಲಿ ಹರಿಣಿ ಎಂ [96.41%]
3ನೇ ರ್ಯಾಂಕ್, ಎಚ್.ಸಿ. ಚೈತ್ರಾ [96.19%] 8ನೇ ರ್ಯಾಂಕ್, ಬಿಕಾಂ ನಲ್ಲಿ ಮನೀಶ್ ಆರ್ [96.14%] 9ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಎಸ್.ಸಿ.ಶರ್ಮ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷಾ ಫಲಿತಾಂಶಗಳಲ್ಲಿ ಈ ಬಾರಿ ವಿಶ್ವವಿದ್ಯಾಲಯ ಮಟ್ಟದಲ್ಲಿ ವಿದ್ಯಾರ್ಥಿಗಳು ಹಲವು ವಿಭಾಗಗಳಿಂದ ರ್ಯಾಂಕ್ಗಳನ್ನು ತಮ್ಮದಾಗಿಸಿಕೊಂಡಿದ್ದು, ಇದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳ ಈ ಸಾಧನೆ ಅವರ ನಿರಂತರ ಪರಿಶ್ರಮ, ಸಮಯಪಾಲನೆ ಹಾಗೂ ಶಿಸ್ತುಬದ್ಧ ಅಧ್ಯಯನ ಕಾರಣವಾಗಿದೆ. ಕಾಲೇಜಿನ ಶೈಕ್ಷಣಿಕ ವಾತಾವರಣ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಸಹಕಾರಿಯಾಗಿದೆ.

ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಕ್ರೀಡಾಸಕ್ತಿ, ಸಂಶೋಧನೆ, ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನೂ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಸಂಸ್ಥೆಯ ನಿರ್ದೇಶಕರಾದ ಡಾ.ಪಿ.ಗಿರಿಧರ ರೆಡ್ಡಿ, ಪ್ರಾಂಶುಪಾಲರಾದ ಡಾ.ಆದರ್ಶ ಮತ್ತು ಉಪ-ಪ್ರಾಂಶುಪಾಲರಾದ ಡಾ.ಅನಿತಾ ಶ್ರೀಕುಮಾರ್ ವಿದ್ಯಾರ್ಥಿಗಳ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here