ಮಳೆಹಾನಿ ಕಾಮಗಾರಿಗಳಿಗೆ 10 ಕೋಟಿ ರೂ. ಅನುದಾನ : ಐವನ್ ಡಿ’ಸೋಜಾ ಸ್ಥಳ ವೀಕ್ಷಣೆ

0
20

ಮಂಗಳೂರು ದಕ್ಷಿಣ ವಿಧಾನ ಕ್ಷೇತ್ರದ ವಿವಿಧ ಭಾಗಗಳಲ್ಲಿ ಮಳೆಹಾನಿಯಿಂದ ಉಂಟಾದ ನಷ್ಟ ಮತ್ತು ಕುಸಿದು ಬಿದ್ದ -ಕಾಮಗಾರಿಗಳನ್ನು ಪುನರ್ ಕೈಗೆತ್ತಿಕೊಳ್ಳಲು ಸರಕಾರದಿಂದ ಸುಮಾರು ಹತ್ತು ಕೋಟಿ ರೂ.ಬಿಡುಗಡೆಯಾಗಿದ್ದು ಹಾಗೂ ಮಂಜೂರಾದ ಕಾಮಗಾರಿಗಳ ವೀಕ್ಷಣೆ ಐವನ್ ಡಿʼಸೋಜಾ ಮಂಗಳೂರು ದಕ್ಷಿಣ ವಿಧಾನ ಕ್ಷೇತ್ರದ ವಿವಿಧ ಭಾಗಗಳಲ್ಲಿ ಮಳೆಹಾನಿಯಿಂದ ಉಂಟಾದ ನಷ್ಟ ಮತ್ತು ಕುಸಿದು ಬಿದ್ದ-ಕಾಮಗಾರಿಗಳನ್ನು ಪುನರ್ ಕೈಗೆತ್ತಿಕೊಳ್ಳಲು ಸರಕಾರದಿಂದ ಸುಮಾರು ಹತ್ತು ಕೋಟಿ ರೂಪಾಯಿ ಬಿಡುಗಡೆಯಾಗಿದ್ದು ಹಾಗೂ ಮಂಜೂರಾದ ಕಾಮಗಾರಿಗಳನ್ನು ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾ ವೀಕ್ಷಿಸಿದರು.

ರಾಜ್ಯ ಸರ್ಕಾರ ಮಳೆಯಿಂದ ಉಂಟಾದ ನಷ್ಟವನ್ನು ಭರಿಸಿ, ಅತೀ ಮಳೆಯಿಂದ ಕುಸಿದು ಬಿದ್ದ ಕಾಲುವೆಗಳು ಮತ್ತು ಕೆಲವು ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದ್ದು, ಈ ಅನುದಾನದಿಂದ ಮುಂದಿನ ಮಳೆಯ ಒಳಗೆ ಕಾಮಗಾರಿಗಳನ್ನು ಮುಗಿಸಬೇಕೆಂದು ಸೂಚಿಸಿದರು. ಇತ್ತೀಚೆಗೆ ಅಭಿವೃದ್ದಿ ಮತ್ತು ಜನರ ಕಷ್ಟ ಕರ‍್ಪಣ್ಯಗಳ ಕೆಲಸವನ್ನು ಮಾಡುತ್ತಿದ್ದು, ಜನಪರ ಕರ‍್ಯಕ್ರಮದ ಜೊತೆಗೆ ಅಭಿವೃದ್ದಿ ಕರ‍್ಯಕ್ರಮವುಗಳು ಸರಾಗವಾಗಿ ನಡೆಯುತ್ತಿದೆ ಅದರೆ ಇತ್ತೀಚೆಗೆ ಕೆಲವು ಸ್ಥಾಪಿತಹಿತಾಶಕ್ತಿಗಳು ರಾಜ್ಯ ರ‍್ಕಾರದಿಂದ ಯಾವುದೇ ಅನುದಾನವು ಬಿಡುಗಡೆಯಾಗುತ್ತಿಲ್ಲ ಎಂದು ಸುಳ್ಳು ಆರೋಪ ಮಾಡುವುದರ ಬಗ್ಗೆ ಐವನ್ ಡಿ;ಸೋಜಾರವರು ತೀವ್ರ ಕಳವಳ ವ್ಯಕ್ತಪಡಿಸಿದ್ದು ರಾಜ್ಯ ರ‍್ಕಾರ ಇಂದು ಹೂಳೆತ್ತುವುದಕ್ಕೆ ಮೂರುವರೆ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಅದೇ ರೀತಿ ಮುಖ್ಯಮಂತ್ರಿಯವರ ವಿಶೇಷ ಯೋಜನೆಯಿಂದ 25ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು, ಮತ್ತು ಅನೇಕ ಜನಪರ ಯೋಜನೆಗಳು ಮತ್ತು ಸಾರ‍್ವಜನಿಕವಾಗಿ ಬೇಕಾದ ಕರ‍್ಯಕ್ರಮಗಳು ನಿಯತಕಾಲಿಕವಾಗಿ ನಡೆಯುತ್ತಾ ಇದ್ದರೂ ಕೂಡ ಕೆಲವು ಸ್ಥಾಪಿತ ಹಿತಾಶಕ್ತಿಗಳು ಯಾವುದೇ ಅನುದಾನ ಬಿಡುಗಡೆಗೊಂಡಿಲ್ಲ ಎಂಬುದರ ಬಗ್ಗೆ ಐವನ್ ಡಿʼಸೋಜಾ ತೀವ್ರ ಖಂಡಿಸಿದರು.

ಇಂದು ಭೇಟಿ ನೀಡಿದ ಪ್ರದೇಶಗಳಾದ ಮಂಗಳೂರು ಮಹಾನಗರ ಪಾಲಿಕೆಯ ವರ‍್ಡ್ ಸಂಖ್ಯೆ 51 – ಅಳಪೆ ಉತ್ತರ ವರ‍್ಡ್‌ನ ಕನ್ನಗುಡ್ಡೆ ಪ್ರದೇಶದಲ್ಲಿ ಸಂತೋಷ್ ಅವರ ಮನೆ ಸಮೀಪ ರಾಜಕಾಲುವೆಗೆ ಕುಸಿದ ಭಾಗಕ್ಕೆ ತಡೆಗೋಡೆ ನರ‍್ಮಾಣ ಕಾಮಗಾರಿ. ರೂ. 10.00 ಲಕ್ಷ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವರ‍್ಡ್ ಸಂಖ್ಯೆ 51 ಅಳಪೆ ಉತ್ತರ ವರ‍್ಡ್‌ನ ಕೋಡಕ್ಕಲ್ ಅಂಡರ್ ಪಾಸ್ ಬಳಿ, ಮಂಜು ಅವರ ಮನೆ ಸಮೀಪ ಹಾಗೂ ಪಡಿಲ್‌ನ ಜೆಸಿಬಿ ಶೋರೂಮ್ ಹಿಂಭಾಗದ ವೈದ್ಯಕೋಡಿ ಬಳಿ ರಾಜಕಾಲುವೆಗೆ ಕುಸಿದ ಭಾಗಕ್ಕೆ ತಡೆಗೋಡೆ ನಿರ‍್ಮಾಣ ಕಾಮಗಾರಿ. ರೂ. 30.00 ಲಕ್ಷ, ಮಂಗಳೂರು ಮಹಾನಗರ ಪಾಲಿಕೆಯ ವರ‍್ಡ್ ಸಂಖ್ಯೆ 52 – ಕನ್ನೂರು ವರ‍್ಡ್‌ನ ಜನಪ್ರಿಯ ಆಸ್ಪತ್ರೆ ಹಿಂಭಾಗದ ರಸ್ತೆಯಲ್ಲಿ ದೇವಕಿ ಅವರ ಮನೆ ಬಳಿ ಹಾದು ಹೋಗಿರುವ ಹಾಗೂ ಪಡಿಲ್ ಫಾಸ್ಟ್‌ ನ್ಯೂರೋ ಆಸ್ಪತ್ರೆ ಹಿಂಭಾಗದಲ್ಲಿ ಹಾದು ಹೋಗುವ ರಾಜಕಾಲುವೆಗೆ ಕುಸಿದ ಭಾಗಕ್ಕೆ ತಡೆಗೋಡೆ ನರ‍್ಮಾಣ ಕಾಮಗಾರಿ.ರೂ. 30.00ಲಕ್ಷ, ಮಂಗಳೂರು ಮಹಾನಗರ ಪಾಲಿಕೆಯ ವರ‍್ಡ್ ಸಂಖ್ಯೆ 53 – ಬಜಾಲ್ ವರ‍್ಡ್‌ನ ಶಾಂತಿನಗರ ರಸ್ತೆಯಲ್ಲಿ ಮುಸ್ತಫಾ ಅವರ ಮನೆ ಬಳಿ ಕುಸಿದ ಭಾಗಕ್ಕೆ ತಡೆಗೋಡೆ ನರ‍್ಮಾಣ ಕಾಮಗಾರಿ. ರೂ.25.00 ಲಕ್ಷ, ಮಂಗಳೂರು ಮಹಾನಗರ ಪಾಲಿಕೆಯ ವರ‍್ಡ್ ಸಂಖ್ಯೆ 53 – ಬಜಲ್ ವರ‍್ಡ್‌ನ ಶಾಂತಿನಗರ ರಸ್ತೆಯಲ್ಲಿ ರಾಧಾಕೃಷ್ಣ ಅವರ ಮನೆ ಬಳಿ ಹಾಗೂ ಪಂಡೆಲ್‌ಗುಡ್ಡೆ ರಸ್ತೆಯಲ್ಲಿ ಕಾಲುದಾರಿ ಕುಸಿದ ಭಾಗಕ್ಕೆ ತಡೆಗೋಡೆ ನರ‍್ಮಾಣ ಕಾಮಗಾರಿ.ರೂ.30.00ಲಕ್ಷ ಸದ್ರಿ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದರು.

ಈ ಸಂದರ‍್ಭದಲ್ಲಿ ಮಾಜಿ ಕರ‍್ಪೊರೇಟರ್‌ಗಳಾದ ಅಶ್ರಫ್ ಬಜಾಲ್ ಮತ್ತು ಪ್ರೇಮ್ ಬಳ್ಳಾಲಬಾಗ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಸಲೀಮ್, ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಾದ ರಫೀಕ್ ಕಣ್ಣೂರು, ಡೆನಿಸ್ ಡಿ’ಸಿಲ್ವಾ, ಮೀನಾ ಟೆಲ್ಲಿಸ್, ಆಸಿಫ್ ಬಜಾಲ್, ನೆಲ್ಸನ್ ರೋಚೆ, ಹಮ್ಜಾ ಬಜಾಲ್, ಭಾರತೀಶ್ ಅಮಿನ್, ಇಸಾಕ್, ಅನ್ವರ್ ಫೈಸಲ್ ನಗರ, ಉದಯ್ ಕುಂದರ್, ಲಿಡಿಯಾ ಲೋಬೋ ಹಾಗೂ ದ.ಕ. ಜಿಲ್ಲಾ ನರ‍್ಮಿತಿ ಕೇಂದ್ರದ ಅಧಿಕಾರಿ ಸಂತೋಷ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here