ಟಾಟಾ ಮೋಟಾರ್ಸ್ : ಏಪ್ರಿಲ್‌ನಿಂದ ವಾಣಿಜ್ಯ ವಾಹನಗಳ ಬೆಲೆ ಏರಿಕೆ

0
35

ಬೆಂಗಳೂರು : Tata Motors ತನ್ನ ವಾಣಿಜ್ಯ ವಾಹನಗಳ ಬೆಲೆಯಲ್ಲಿ ಏಪ್ರಿಲ್ 1, 2026ರಿಂದ 1.5%ರವರೆಗೆ ಹೆಚ್ಚಳ ಮಾಡುವುದಾಗಿ ಇಂದು ಘೋಷಿಸಿದೆ.

ಈ ಬೆಲೆ ಏರಿಕೆಯನ್ನು ಹೆಚ್ಚುತ್ತಿರುವ ಕಚ್ಚಾ ವಸ್ತುಗಳ ಬೆಲೆ ಮತ್ತು ಇತರೆ ಉತ್ಪಾದನಾ ವೆಚ್ಚಗಳ ಪರಿಣಾಮವನ್ನು ಭಾಗಶಃ ಸಮತೋಲನಗೊಳಿಸಲು ಕೈಗೊಳ್ಳಲಾಗಿದೆ. ಮಾದರಿ ಮತ್ತು ರೂಪಾಂತರದ ಆಧಾರದ ಮೇಲೆ ಬೆಲೆ ಏರಿಕೆಯ ಪ್ರಮಾಣ ಬದಲಾಗಲಿದೆ ಎಂದು ಕಂಪನಿ ತಿಳಿಸಿದೆ.

Tata Groupಗೆ ಸೇರಿದ Tata Motors ಭಾರತದಲ್ಲೇ ಅತಿ ದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾಗಿದ್ದು, ಯೂಟಿಲಿಟಿ ವಾಹನಗಳು, ಪಿಕ್-ಅಪ್‌ಗಳು, ಲಾರಿಗಳು ಮತ್ತು ಬಸ್ಸುಗಳ ತಯಾರಿಕೆಯಲ್ಲಿ ವಿಶ್ವ ಮಟ್ಟದಲ್ಲಿ ಪ್ರಸಿದ್ಧಿಯಾಗಿದೆ.

ಎಂಟು ದಶಕಗಳಿಗೂ ಅಧಿಕ ಅನುಭವ ಹೊಂದಿರುವ ಈ ಕಂಪನಿ, ನವೀನ ತಂತ್ರಜ್ಞಾನ, ವಿಶ್ವಾಸಾರ್ಹತೆ ಮತ್ತು ಉತ್ತಮ ಕಾರ್ಯಕ್ಷಮತೆಯೊಂದಿಗೆ ವಾಣಿಜ್ಯ ಸಂಚಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಕೊನೆಯ ಮೈಲ್ ಡೆಲಿವರಿ ಇಂದ ಸಾರ್ವಜನಿಕ ಸಾರಿಗೆವರೆಗಿನ ವಿವಿಧ ಅಗತ್ಯಗಳಿಗೆ ಹೊಂದುವ ಪರಿಹಾರಗಳನ್ನು ಒದಗಿಸುತ್ತಿದ್ದು, ದೇಶದ ಆರ್ಥಿಕ ಚಟುವಟಿಕೆಗಳಿಗೆ ಮಹತ್ವದ ಕೊಡುಗೆ ನೀಡುತ್ತಿದೆ.

ಕಂಪನಿಯ “Better Always” ಎಂಬ ಬ್ರಾಂಡ್ ಭರವಸೆಯಡಿ, ಭವಿಷ್ಯಮುಖಿ ಪರಿಹಾರಗಳನ್ನು ಒದಗಿಸುವ ಮೂಲಕ ಗ್ರಾಹಕರ ಅನುಭವವನ್ನು ಹೆಚ್ಚಿಸಲು ಮತ್ತು ಸ್ಥಿರ ಬೆಳವಣಿಗೆಯನ್ನು ಸಾಧಿಸಲು ಒತ್ತು ನೀಡುತ್ತಿದೆ.

LEAVE A REPLY

Please enter your comment!
Please enter your name here