ಕಾರ್ಕಳದಲ್ಲಿ ರಂಜಾನ್‌ ಹಬ್ಬ ಆಚರಣೆ

0
4

ಕಾರ್ಕಳ: ರಂಜಾನ್ ತಿಂಗಳ ಅಂತ್ಯಕ್ಕೆ ಬರುವ ಹಬ್ಬವೇ ಈದ್ ಫಿತರ್ ಹಬ್ಬವಾಗಿದೆ. ಇಂದು ನಾವೆಲ್ಲ ಮೂವತ್ತು ದಿನಗಳ ಕಠಿಣ ಉಪವಾಸ ವ್ರತವನ್ನು ಆಚರಿಸಿ ಇಂದು ಅಲ್ಲಹೂವಿನಿಂದ ಸಂಭವನೆ ಸ್ವೀಕರಿಸುವ ಮಹತ್ವದ ದಿನವಾಗಿದೆ ಎಂದು ಕಾರ್ಕಳ ಜಾಮಿಯ ಮಸೀದಿ ಯಾ ಮುಖ್ಯ ಧರ್ಮ ಗುರುಗಳಾದ ಮೌಲಾನ ಜಹೀರ್ ಅಹ್ಮದ್ ಖಾಸ್ಮಿ ಅವರು ಸಾಲ್ಮರದ ಜಾಮಿಯ ಮಸೀದಿಯ ಇದ್ಗ ದಲ್ಲಿ ನೆರವೇರಿದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದರು.
ನಂತರ ಮಾತನಾಡಿದ ಅವರು ನಾವು ನಮ್ಮ ಹೃದಯದಲ್ಲಿರುವ ಕಶ್ಮಲವನ್ನು ತೆಗೆದುಹಾಕಿ ಎಲ್ಲರೊಡನೆ ಪ್ರೀತಿ ಹಾಗೂ ವಿಶ್ವಾಸದಿಂದ ಮತ್ತು ತಾಳ್ಮೆಯಿಂದ ಬಾಳಬೇಕು ಆದಷ್ಟು ಬೇಗ ಕೊಲ್ಲಿ ರಾಷ್ಟ್ರದಲ್ಲಿ ಉಂಟಾಗಿರುವ ಯುದ್ಧವು ಆದಷ್ಟು ಬೇಗ ಶಮನಗೊಂಡು ನಮ್ಮ ಎಲ್ಲ ಭಾರತೀಯರು ಕ್ಷೇಮವಾಗಿ ತಮ್ಮ ತಾಯ್ನಾಡಿಗೆ ವಾಪಸಾಗಲಿ ಎಂದು ದೇವರಲ್ಲಿ ಹಾರೈಸುವ ಎಂದು ಹೇಳಿದರು.
ನಂತರ ಮಾತನಾಡಿದ ನಿಕಟ ಪೂರ್ವ ಅಧ್ಯಕ್ಷರಾದ ಅಶ್ಪಾಕ್ ಅಹಮದ್ ಸಮಸ್ತ ಜನರಿಗೂ ಹಬ್ಬದ ಶುಭಾಶಯಗಳು ತಿಳಿಸಿದರು.
ನಮಾಜ್ ನಂತರ ಮುಸ್ಲಿಂ ಸಹೋದರರು ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡರು ನಂತರ ತಮ್ಮ ಹಿರಿಯರ ಸಮಾಧಿ ಬಳಿ ಹೋಗಿ ಅವರಿಗೋಸ್ಕರ ವಿಶೇಷ ಪ್ರಾರ್ಥನೆಯನ್ನು ಮಾಡಿದರು.

LEAVE A REPLY

Please enter your comment!
Please enter your name here