ಮೂಡಬಿದಿರೆ: ಶ್ರೀನಿವಾಸ ಶೆಣೈ ಅವರಿಗೆ ಬಂಗಾರದ ಪದಕ: ‘ಬೆಸ್ಟ್ ಔಟ್‌ಗೋಯಿಂಗ್ ಡಾಕ್ಟರ್’ ಗೌರವ

0
39

ಮೂಡಬಿದಿರೆ: ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸಾಯನ್ಸಸ್ ಬೆಂಗಳೂರು ಇವರು ನಡೆಸಿದ ಅಂತಿಮ ಪರೀಕ್ಷೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿ ಶ್ರೀನಿವಾಸ ಶೆಣೈ ಉನ್ನತ ಶ್ರೇಣಿಯೊಂದಿಗೆ ಬಂಗಾರದ ಪದಕವನ್ನು ಪಡೆದು 2025-26 ನೇ ಸಾಲಿನ ಬೆಸ್ಟ್ ಔಟ್ ಗೋಯಿಂಗ್ ಡಾಕ್ಟರ್ ಎಂಬ ಗೌರವವನ್ನು ಪಡೆದಿರುತ್ತಾರೆ.

ಇವರು ಇಲ್ಲಿನ ಕೆಸರುಗದ್ದೆ ಶ್ರೀರಾಮ ಮಂದಿರ ಬಳಿಯ ನಿವಾಸಿ ಶ್ರೀ ಕೃಷ್ಣ ಶೆಣೈ ಮತ್ತು ಶ್ರೀಮತಿ ರವಿಕಲಾ ದಂಪತಿಯ ಸುಪುತ್ರರಾಗಿದ್ದಾರೆ.ತಮ್ಮ ಮಗನ ಸಾಧನೆಗೆ ಹೆತ್ತವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.ಶ್ರೀ ರಾಮ ಭಜನಾ ಮಂದಿರ ಮಂಡಳಿಯ ಅಧ್ಯಕ್ಷರಾದ ಶ್ರೀ ರಾಜೇಶ್ ಕಾಮತ್ ತಮ್ಮ ಊರಿನ ಅಸಾಧಾರಣ ಪ್ರತಿಭೆ ಶೆಣೈ ಸಾಧನೆಯನ್ನು ಕೊಂಡಾಡಿದ್ದಾರೆ.

LEAVE A REPLY

Please enter your comment!
Please enter your name here