ಕಾರ್ಕಳ: ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮಹಾ ರಥೋತ್ಸವ ಮತ್ತು ದೈವಗಳ ನೇಮೋತ್ಸವ ದಿನಾಂಕ ಮಾರ್ಚ್ 19ರಿಂದ ಮೊದಲ್ಗೊಂಡು 23 ಸೋಮವಾರ ತನಕ ಉತ್ಸವ ಬಲಿ ರಥೋತ್ಸವ ಕಲಶಾಭಿಷೇಕ, ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ವಿಜೃಂಭಣೆಯಿಂದ ನಡೆಯಿತು. ಅನ್ನ ಸಂತರ್ಪಣೆ ನಡೆಯಿತು. ಶ್ರೀ ಹರಿಕೃಷ್ಣ ಭಟ್ ಪ್ರಧಾನ ಅರ್ಚಕರು ಮತ್ತು ಸಿಬ್ಬಂದಿ ವರ್ಗ ಮತ್ತು ಗುತ್ತು ಬರ್ಕೆ ಗ್ರಾಮಸ್ಥರು, ಹಾಗೂ ಕೆ. ಪ್ರಭಾಕರ್ ಬಂಗೇರ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ. ಸಮಿತಿಯ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಭಕ್ತಾದಿಗಳು ಪ್ರಸಾದ ಸ್ವೀಕರಿಸಿದರು.
ವಿವಿಧ ಸಾಂಸ್ಕೃತಿಕ ಕಾರ್ಯಗಳು ನಡೆಯಿತು.
ವರದಿ : ಅರುಣ್ ಭಟ್ ಕಾರ್ಕಳ.

