ಮರೋಡಿ: ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮರೋಡಿ ದಿನಾಂಕ 20/03/2026 ಶುಕ್ರವಾರದಂದು ಸ್ಮಾರ್ಟ್ ಟಿವಿ ಮತ್ತು ಕಂಪ್ಯೂಟರ್ ಉದ್ಘಾಟನೆ ಕಾರ್ಯಕ್ರಮ ನಡೆಯಿತು ಬಂದಂತ ಅತಿಥಿಗಳನ್ನು ಬ್ಯಾಂಡ್ಸೆಟ್ ಮೆರವಣಿಗೆಯ ಮೂಲಕ ಗುಲಾಬಿ ಹೂಗಳನ್ನು ಕೊಟ್ಟು ಸ್ವಾಗತಿಸಲಾಯಿತು. ಬೆಳಿಗ್ಗೆ ಈ ಕಾರ್ಯಕ್ರಮಕ್ಕೆ ಬಂದವರಿಗೆ ಬಾದಾಮ್ ಮಾಲ್ಟ್ ಮತ್ತು ಬಿಸ್ಕೆಟ್ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ನಡೆಸಿಕೊಟ್ಟವರು, ಸ್ಮಾರ್ಟ್ ಟಿವಿಯನ್ನು ಉದ್ಘಾಟನೆ ಮಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮ ಅಭಿವೃದ್ಧಿ ಯೋಜನೆಯ, ಮೇಲ್ವಿಚಾರಕರಾದ, ವಿಶಾಲ ಕೆ ಅವರು ಮತ್ತು ಡಾಕ್ಟರ್ ಆಶೀರ್ವಾದ ಅವರು ನಡೆಸಿಕೊಟ್ಟರು ನಂತರ ಕಂಪ್ಯೂಟರ್ ಉದ್ಘಾಟನೆಯನ್ನು ಕಾರ್ಕಳದ ಪ್ರತಿಷ್ಠಿತ ಕಮಲಾ ಕ್ಷ್ ಕಾಮತ್ ರವರು, ಅವರ ಅಮೃತ ಹಸ್ತದಿಂದ ನೆರವೇರಿಸಿ ಕೊಟ್ಟರು ಈ ಒಂದು ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು, ಇಲ್ಲಿಯ ನಿವೃತ್ತ ಮುಖ್ಯೋಪಾಧ್ಯಾಯರು ಜಗದೀಶ್ ಸರ್ ಹೆಗಡೆ ಅವರು, ಸರಳ ಉದಯ್ ಕುಮಾರ್ ಅವರು, ಹರ್ಷಿಣಿ ಅವರು, ಸೂರಜ್ ಬಲ್ಲಾಳ್ ರವರು, ಕಾರ್ಕಳದ ಛಾಯಾಗ್ರಹಕರಾದ ನಿರಂಜನ್ ರವರು, ಶಾಲಾ ಮುಖ್ಯೋಪಾಧ್ಯಾಯರು, ಮತ್ತು ಶಿಕ್ಷಕ ವೃಂದದವರು, ಶಾಲಾ ಅಭಿವೃದ್ಧಿಗಾಗಿ ದುಡಿಯುತ್ತಿರುವ ಸುರೇಶ್ ಅಂಚನ್ ರವರು, ಭರತ್ ಕುಮಾರ್ ಅಂಗಡಿ ಬೆಟ್ಟು, ಪೋಷಕರು, ಮಕ್ಕಳು ಇವರ ಸಮ್ಮುಖದಲ್ಲಿ ಉದ್ಘಾಟನೆ ನಡೆಯಿತು, ನಂತರ ಸಭಾ ಕಾರ್ಯಕ್ರಮ ನಮ್ಮ ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ಈ ಒಂದು ವೇದಿಕೆಯಲ್ಲಿ ಕಾರ್ಕಳದ ಪ್ರತಿಷ್ಠಿತ ಕೊಡು ಗೈದಾನಿ ಕಮಲಾಕ್ಷ ಕಾಮತ್ ಸರ್, ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು, ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಜಗದೀಶ್ ಹೆಗ್ಡೆ ಸರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಮೇಲ್ವಿಚಾರಕರಾದ ಶ್ರೀಮತಿ ವಿಶಾಲ ಕೆ ಅವರು, ಸೂರಜ್ ಬಲ್ಲಾಳ್ ರವರು, ನಮ್ಮ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಎಂ ಪದ್ಮರಾಜ ಶೆಟ್ಟಿ ಅವರು ಶಾಲಾ ಮುಖ್ಯೋಪಾಧ್ಯಾಯರು, ಇವರೆಲ್ಲರೂ ಉಪಸ್ಥಿತರಿದ್ದರು.
ಬಂದ ಅತಿಥಿಗಳನ್ನು ನಮ್ಮ ಶಾಲಾ ಮುಖ್ಯೋಪಾಧ್ಯಾಯರಾದ, ಶಿವನಿಂಗಪ್ಪ ಗಾಣಗೇರ ಸ್ವಾಗತಿಸಿದರು, ನಮ್ಮ ಶಾಲಾ ಜ್ಞಾನದೀಪ ಶಿಕ್ಷಕಿ ಅದ ರೂಪಲತಾ ಜೆ ಅವರು ನಿರೂಪಣೆ ಮಾಡಿದರು ನಂತರ ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರು ಶ್ರೀ ಕಮಲಾಕ್ಷ ಕಾಮತ್ ರವರ ಬಗ್ಗೆ ಕಿರುಪರಿಚಯ ಮಾಡಿಕೊಟ್ಟರು , ಈ ವೇದಿಕೆಯಲ್ಲಿ ಕಂಪ್ಯೂಟರನ್ನು ಕೊಡುಗೆಯಾಗಿ ನೀಡಿದರು.
ಶ್ರೀ ಕಮಲಾಕ್ಷ ಕಾಮತ್ ಇವರನ್ನು ಸನ್ಮಾನಿಸಲಾಯಿತು ಇವರ ಸನ್ಮಾನ ಪತ್ರವನ್ನು ನಮ್ಮ ಶಾಲಾ ಗೌರವ ಶಿಕ್ಷಕಿಯಾದ ಅಶ್ವಿನಿ ಅವರು ಓದಿದರು ಸನ್ಮಾನದ ನಂತರ ಇಂದಿನ ಕಾರ್ಯಕ್ರಮದ ಬಗ್ಗೆ ಹಿತವಚನಗಳನ್ನಾಡಿದರು. ಮಕ್ಕಳು ಸಂಸ್ಕಾರವನ್ನು ಕಲಿಯಬೇಕು , ತಂದೆ ತಾಯಿ ಗುರುಗಳನ್ನು ಭಕ್ತಿಯಿಂದ ಕಾಣಬೇಕೆಂದು ಹೇಳಿದರು. ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ನಾರಾವಿ ವಲಯದ ಮೇಲ್ವಿಚಾರಕರಾದ ಶ್ರೀಮತಿ ವಿಶಾಲ ಕೆ ಅವರನ್ನು ಸನ್ಮಾನಿಸಲಾಯಿತು. ನಂತರ ಇಂದಿನ ಕಾರ್ಯಕ್ರಮದ ಬಗ್ಗೆ ವಿಷಯ ತಿಳಿಸಿದರು ನಮ್ಮ ಶಾಲಾ ಏಳನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಸಮಾರಂಭವು ಸಹ ಈ ವೇದಿಕೆಯಲ್ಲಿ ನಡೆಯಿತು, ಎಲ್ಲಾ ಮಕ್ಕಳನ್ನು ವೇದಿಕೆಯ ಗಣ್ಯರ ಸಮ್ಮುಖದಲ್ಲಿ, ಸನ್ಮಾನಿಸಲಾಯಿತು. ಈ ಸನ್ಮಾನದ ಎಲ್ಲಾ ಖರ್ಚನ್ನು, ನಮ್ಮ ಶಾಲೆಯ ಶ್ರೇಯಸ್ಸಿಗೆ ದುಡಿಯುತ್ತಿರುವ ಸುರೇಶ್ ಅಂಚನ್ ರವರು ವಹಿಸಿಕೊಂಡಿರುತ್ತಾರೆ. ವಿಶೇಷವಾಗಿ ಈ ಒಂದು ಕಾರ್ಯಕ್ರಮವನ್ನು ಮೂರು ವರ್ಷದಿಂದ ನಮ್ಮ ಶಾಲಾ 7 ನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಸಮಾರಂಭ ನಡೆಸಿಕೊಂಡು ಬರುತ್ತಿದ್ದಾರೆ, ಮತ್ತು ಏಳನೇ ತರಗತಿಯ ಮಕ್ಕಳಿಗಾಗಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದೆವು ಈ ಬಹುಮಾನದ ವರದಿಯನ್ನು ನಮ್ಮ ಶಾಲಾ ಗೌರವ ಶಿಕ್ಷಕಿಯಾದ ಮಲ್ಲಿಕಾ ಅವರು ವಾಚಿಸಿದರು ಮಕ್ಕಳು ಒಬ್ಬೊಬ್ಬರಾಗಿ ಬಂದು ಬಹುಮಾನಗಳನ್ನು ಸ್ವೀಕರಿಸಿದರು.
ಕೊನೆಯದಾಗಿ ಧನ್ಯವಾದ ನಮ್ಮ ಶಾಲಾ ಗೌರವ ಶಿಕ್ಷಕಿಯಾದ ಪವಿತ್ರ ರವರು ನಡೆಸಿಕೊಟ್ಟರು, ನಂತರ ಬಂದ ಅತಿಥಿಗಳಿಗೆ ಭೋಜನದ ವ್ಯವಸ್ಥೆಯನ್ನು ಮಾಡಿದರು. ಸೂರಜ್ ಬಲ್ಲಾಳ್ರವರು ಹಾಗೆ ಬಂದಂತ ಎಲ್ಲಾ ಪೋಷಕರಿಗೂ ಊರಿನವರಿಗೂ ಭೋಜನದ ವ್ಯವಸ್ಥೆಯನ್ನು, ಮಾಡಲಾಗಿತ್ತು. ಪಾಯಸ ಹೋಳಿಗೆ , ಎಲ್ಲಾ ವ್ಯವಸ್ಥೆಯನ್ನು ಮಾಡಿದವರು ಸೂರಜ್ ಬಲ್ಲಾಳ್ರವರು , ಹೀಗೆ ನಮ್ಮ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ಸಮಾಪ್ತಿ ಯಾಯಿತು.

