ಮೂಡುಬಿದಿರೆ: ಪ್ರತೀ ವರುಷದಂತೆ ಮೂರು ಲೇಖಕರಿಗೆ ಶಿವರಾಮ ಕಾರಂತ ಪುರಸ್ಕಾರ ವನ್ನು ಹತ್ತು ಸಾವಿರ ರೂಪಾಯಿ ಗೌರವ ಸಂಭಾವನೆಯೊಂದಿಗೆ 2021 ರಿಂದ 2026 ರವರೆಗೆ ಪ್ರಥಮ ಮುದ್ರಿತ ಕೃತಿಗಳ ಮೂರುಪತ್ರಿಗಳನ್ನು ಏ 31 ರೊಳಗೆ ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕನ್ನಡ ಭವನ ಮೂಡುಬಿದಿರೆ -574227( ದೂರವಾಣಿ 9743533105) ಈ ವಿಳಾಸಕ್ಕೆ ಕಳುಹಿಸಿಕೊಡಲು ಕೋರಿದೆ. ಉತ್ತಮ ಕೃತಿಗಳನ್ನು ಯಾರು ಬೇಕಾದರೂ ಶಿಫಾರಸು ಮಾಡಬಹುದು ಈ ಹಿಂದೆ ಕಳುಹಿಸಿದವರು ಅವುಗಳನ್ನು ಮತ್ತೆ ಕಳುಹಿಸಬೇಕಾಗಿಲ್ಲ ಎಂದು ಶಿವರಾಮ ಕಾರಂತ ಪ್ರತಿಷ್ಠಾನ ಪ್ರಧನ ಕಾರ್ಯದರ್ಶಿ ಡಾ. ಜಯಪ್ರಕಾಶ ಮಾವಿನಕುಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
