ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಮೀಕ್ಷೆ ಯೋಜನ ಬೈಠಕ್ ಸಂಪನ್ನ.

0
24

ವಿದ್ಯಾಭಾರತಿ ಕಾರ್ಯಕ್ರಮಗಳನ್ನು ಉತ್ತಮವಾಗಿ ಸಂಘಟಿಸಿ ವಿದ್ಯಾ ಭಾರತಿ ಶೈಕ್ಷಣಿಕ ಚಟುವಟಿಕೆಗಳಿಗೆ ಕೈಜೋಡಿಸಿ ಯಶಸ್ವಿಯಾಗಿ ಮಾಡಿದ್ದೀರಿ.
ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಅವರ ಪ್ರತಿಭೆಗಳಿಗೆ , ಅವರ ವಿದ್ವತ್ತಿಗೆ ನಾವು ಪ್ರೇರಣೆಯನ್ನು ಪ್ರೋತ್ಸಾಹವನ್ನು ನೀಡಿ ಸಮಾಜದ ,ದೇಶದ ಸಂಸ್ಕೃತಿಯ ಅರಿವನ್ನು ಮೂಡಿಸಿ ದೇಶಕ್ಕೆ ಒಬ್ಬ ಉತ್ತಮ ಪ್ರಜೆಯನ್ನಾಗಿ ಮಾಡುವುದೇ ನಮ್ಮ ವಿದ್ಯಾ ಭಾರತಿಯ ಕಲ್ಪನೆ. ಈಸೇವಾ ಕಾರ್ಯಕ್ಕೆ ತಾವೆಲ್ಲರೂ ಕೈಜೋಡಿಸಿರುವುದು ತುಂಬಾ ಸಂತೋಷವಾಗಿದೆ. ಎಂದು ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಶ್ರೀ ಪಾಂಡುರಂಗ ಪೈ ಅವರು ಮಾತನಾಡಿದರು .
ಶ್ರೀರಾಮಪ್ಪ ಹಿರಿಯ ಪ್ರಾಥಮಿಕ ಶಾಲೆ ಫುಲ್ಕೇರಿ ಕಾರ್ಕಳದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಮೀಕ್ಷೆ ಯೋಜನ ಬೈಠಕ್
ನಡೆಯಿತು .

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಶ್ರೀ ಪಾಂಡುರಂಗ ಪೈ ಅವರ ಅಧ್ಯಕ್ಷತೆಯಲ್ಲಿ ಜರುಗಿತು .

ವಿದ್ಯಾಭಾರತಿ ಕರ್ನಾಟಕ ಪ್ರಾಂತದ ಉಪಾಧ್ಯಕ್ಷರು ಶ್ರೀ.ವಸಂತ ಮಾಧವ ಕಲ್ಲಡ್ಕ , ಸಂಘಟನಾ ಕಾರ್ಯದರ್ಶಿ ಉಮೇಶ್ .ಎಂ.ಕಾರ್ಯದರ್ಶಿ ಶ್ರೀಪತಿ ಮೈಸೂರು , ವೇದ ಗಣಿತ ಪ್ರಾಂತ ಪ್ರಮುಖ್ ಅಮರನಾಥ ಬೆಂಗಳೂರು , ಶ್ರೀರಾಮಪ್ಪ ಶ್ರೀರಾಮಪ್ಪ ಹಿರಿಯ ಪ್ರಾಥಮಿಕ ಶಾಲೆ ಆಡಳಿತ ಮಂಡಳಿ ಅಧ್ಯಕ್ಷರು ಶ್ರೀಧರ್ ಸುವರ್ಣ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಹರೀಶ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಸಂತೋಷ್ ಹೆಗ್ಡೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು . ವಿದ್ಯಾಭಾರತಿ ಕಾರ್ಯದರ್ಶಿ ಮಹೇಶ ಹೈಕಾಡಿ , ಪ್ರಾಸ್ತಾವಿಕ ಮಾತನಾಡಿದರು .ಸಂಸ್ಥೆಯ ಮಾತಾಜಿ ಶ್ರೀಮತಿ ಲಕ್ಷ್ಮೀ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾ ಭಾರತಿ ಶೈಕ್ಷಣಿಕ ಸಂಯೋಜಿತ 13 ಸಂಸ್ಥೆಗಳು ಆಡಳಿತ ಮಂಡಳಿಯವರು ಮುಖ್ಯೋಪಾಧ್ಯಾಯರು ಶಿಕ್ಷಕರನ್ನು ಸೇರಿಸಿ 35 ಮಂದಿ ಭಾಗವಹಿಸಿದರು.2026- 27ನೇ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಪಟ್ಟಿಯನ್ನು ರೂಪಿಸಲಾಯಿತು . ಸಂಸ್ಥೆಯ ಮುಖ್ಯೋಪಾಧ್ಯಾಯರು ಹರೀಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ವಿದ್ಯಾಭಾರತಿ ಕನ್ನಡ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ ವಂದಿಸಿದರು.

LEAVE A REPLY

Please enter your comment!
Please enter your name here