ಬೆಳ್ತಂಗಡಿ ತಾಲೂಕಿನ ವಿವಿಧ ರಸ್ತೆ ಅಭಿವೃದ್ಧಿಗೆ ರೂ.2.00 ಕೋಟಿ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜ

0
11

ಬೆಳ್ತಂಗಡಿ,: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಒಟ್ಟು ರೂ.2.00 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿರುವುದಾಗಿ ಶಾಸಕ ಶ್ರೀ ಹರೀಶ್ ಪೂಂಜ ತಿಳಿಸಿದ್ದಾರೆ.

ಈ ಅನುದಾನದಡಿ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ–ಪಲ್ಕೆ ರಸ್ತೆ (ರೂ.25.00 ಲಕ್ಷ), ನೈಕುಳಿ–ಕಳೆಂಜಿರೋಡಿ ರಸ್ತೆ (ರೂ.25.00 ಲಕ್ಷ), ಮಿತ್ತೊಟ್ಟು ರಸ್ತೆ (ರೂ.25.00 ಲಕ್ಷ), ಮಲ್ಲಿಪ್ಪಾಡಿ ರಸ್ತೆ (ರೂ.25.00 ಲಕ್ಷ), ಪರಾರಿ ರಸ್ತೆ (ರೂ.25.00 ಲಕ್ಷ), ಪದೆಂಜಿಲ ರಸ್ತೆ (ರೂ.25.00 ಲಕ್ಷ) ಹಾಗೂ ಗರ್ಡಾಡಿ ಗ್ರಾಮದ ಪೈಕರ–ಬಂಗಟ ರಸ್ತೆ (ರೂ.25.00 ಲಕ್ಷ), ಕೆಲ್ಲಾಡಿ–ಉದಲೋಡಿ ರಸ್ತೆ (ರೂ.25.00 ಲಕ್ಷ)ಗಳಿಗೆ ತಲಾ ರೂ.25.00 ಲಕ್ಷ ಅನುದಾನ ಮಂಜೂರಾಗಿದೆ.

ಈ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರಕ್ಕೆ ಶಾಸಕ ಶ್ರೀ ಹರೀಶ್ ಪೂಂಜ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here