ಪ್ರಸಿದ್ಧ ಉದ್ಯಮಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ ನಿರ್ದೇಶಕರು ಸಾಮಾಜಿಕ ಮತ್ತು ಧಾರ್ಮಿಕ ಕಳಕಳಿಯ ಕೊಡುಗೈ ದಾನಿ, ಶಶಿ ಕೇಟರಿoಗ್ ಸರ್ವಿಸಸ್ ನ ಸಿ ಎಂ. ಡಿ. ಶ್ರೀ ಶಶಿಧರ್ ಶೆಟ್ಟಿ ಬರೋಡರವರು ಒಕ್ಕೂಟದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಡಾ.ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಹವಾ ನಿಯಂತ್ರಿತ ಸಭಾಭವನದ ಕಾಮಗಾರಿ ತ್ವರಿತಗತಿಯಲ್ಲಿ ಸಂಪೂರ್ಣಗೊಳಿಸಿ ಇದೇ ಡಿಸೆoಬರ್ ತಿಂಗಳಿನಲ್ಲಿ ಲೋಕಾರ್ಪಣೆ ಆಗಲೇಬೇಕೆಂಬ ಉದ್ದೇಶದಿಂದ ರೂ. 1.25 ಕೋಟಿ ದೇಣಿಗೆ ನೀಡಿದ್ದಾರೆ.
ಇವರು 2018 ರಿಂದ ದೇಣಿಗೆ ನೀಡಿ ಮಹಾ ನಿರ್ದೇಶಕರಾಗಿ ಒಕ್ಕೂಟದ ಹಲವಾರು ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಿರುವ ಬಗ್ಗೆ ಸಂಘಟಕರು ತಿಳಿಸಿದ್ದಾರೆ.

