ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೂರಾಲು ಹಬ್ಬ 2025ನೇ ಸಾಲಿನ ವಾರ್ಷಿಕ ಉತ್ಸವಾದಿಗಳು ದಿನಾಂಕ 07-04-2025ನೇ ಸೋಮವಾರ ಮೊದಲ್ಗೊಂಡು 19-04-2025ನೇ ಶನಿವಾರದವರೆಗೆ ಜರುಗಲಿದೆ. ದಿನಾಂಕ 15-04-2025ನೇ ಮಂಗಳವಾರ, ರಾತ್ರಿ 10.00 ಗಂಟೆಗೆ ಗೆಂಡೋತ್ಸವ. 16-04-2025 ನೇ ಬುಧವಾರ ಮಧ್ಯಾಹ್ನ ಗಂಟೆ 12.02ಕ್ಕೆ ಶ್ರೀ ಮನ್ಮಹಾರಥೋತ್ಸವ. 17-04-2025ನೇ ಗುರುವಾರ ಸಂಜೆ ಗಂಟೆ 9.00ಕ್ಕೆ ದೀಪೋತ್ಸವ. 18-04-2025 ನೇ ಶುಕ್ರವಾರ ಬೆಳಿಗ್ಗೆ ಗಂಟೆ 9 ಕ್ಕೆ ಅಮ್ಮನವರ ಹೂವಿನ ಪೂಜೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ದಿನಾಂಕ 15-04-2025ನೇ ಮಂಗಳವಾರ ಗೆಂಡೋತ್ಸವದಂದು ರಾತ್ರಿ 8.00 ರಿಂದ ಕನ್ನಡ ಹಾಸ್ಯಮಯ ನಾಟಕ ಶಾಂಭವಿ ದಿನಾಂಕ 16-04-2025ನೇ ಬುಧವಾರ ರಥೋತ್ಸವದಂದು ರಾತ್ರಿ ಗಂಟೆ 09.00 ರಿಂದ ಯಕ್ಷಗಾನ ಬಯಲಾಟ ದಕ್ಷಯಜ್ಞ – ಚಂದ್ರಹಾಸ ಗದಾಯುದ್ಧ ದಿನಾಂಕ 17-04-2025ನೇ ಗುರುವಾರ ರಾತ್ರಿ 8.00 ರಿಂದ ಅದ್ಧೂರಿ ಜಾನಪದ ನಾಟಕ ಜೋಡು ಜೀಟಿಗೆ ದಿನಾಂಕ 18-04-2025ನೇ ಶುಕ್ರವಾರ ಹೂವಿನ ಪೂಜೆ ದಿನ 023, 8.30ಕ್ಕೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಸೂರಾಲು ಇವರಿಂದ ಮಾಯಾ ಕೃಷ್ಣ- ಶ್ರೀ ಕೃಷ್ಣ ಯಕ್ಷಗಾನ ಬಯಲಾಟ ಜರುಗಲಿದೆ.
ದಿನಾಂಕ: 15-04-2025ನೇ ಮಂಗಳವಾರ ಬೆಳಿಗ್ಗೆ 8:30ಕ್ಕೆ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಪೇಜಾವರ ಅಧೋಕ್ಷಜ ಮಠ ಉಡುಪಿ ಇವರಿಂದ ನೂತನ ಅವಬೃತ ಸ್ನಾನ ಮಂಟಪ ಉದ್ಘಾಟನೆ ನಡೆಯಲಿದೆ. ಹಬ್ಬ ಶ್ರೀ ದೇವರ ದೀಪೊತ್ಸವ ಶ್ರೀ ದೇವರ ಪುಷ್ಪರಿಣಿ ಹಾಗೂ ಸ್ನಾನ ಮಂಟಪ ಉದ್ಘಾಟನೆ. 9:00ಗಂಟೆಗೆ ಸೂರಾಲಿನ ಐತಿಹಾಸಿಕ ರಥಬೀದಿಯಲ್ಲಿ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ಪೂರ್ವಕ ಪುರಪ್ರವೇಶ ನಡೆಯಲಿದೆ.
ದಿನಾಂಕ: 17-04-2025ನೇ ಗುರುವಾರ ರಾತ್ರಿ 8:00ಕ್ಕೆ ಶ್ರೀ ದೇವರ ಕಿರು ರಥೋತ್ಸವ ನೂತನ ಪುಷ್ಕರಿಣಿಯಲ್ಲಿ ಅವಬೃತ ಸ್ನಾನ, ದೀಪೊತ್ಸವ ಜರುಗಲಿದೆ.