Saturday, April 26, 2025
HomeUncategorizedಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯಿಂದ ವಿಜೃಂಭಣೆಯಿಂದ ವನಮಹೋತ್ಸವ

ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯಿಂದ ವಿಜೃಂಭಣೆಯಿಂದ ವನಮಹೋತ್ಸವ


ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಿದ್ದವೀರಪ್ಪ ಬಡಾವಣೆ ಶಾಖೆಯ ಆಶ್ರಯದಲ್ಲಿ ನಿನ್ನೆ ತಾನೇ ದಾವಣಗೆರೆ ಜಿಲ್ಲೆಯ ಆನಗೋಡಿನ ಪವಾಡರಂಗವ್ವನಹಳ್ಳಿ ತೋಟದಲ್ಲಿ ವಿಜೃಂಭಣೆಯಿAದ ವನಮಹೋತ್ಸವ ಆಚರಿಸಲಾಯಿತು ಎಂದು ಇದರ ನೇತೃತ್ವ ವಹಿಸಿದ್ದ ಶ್ರೀಮತಿ ಸುಮಾ ಏಕಾಂತಪ್ಪ ತಿಳಿಸಿದರು.
ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್‌ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಮನರಂಜನೆ, ರಸರಂಜನೆ, ಅಂತಾಕ್ಷರಿ ಗಾಯನದೊಂದಿಗೆ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಿ ಉತ್ಸಾಹದಿಂದ ಎಲ್ಲರೂ ಸಂತೋಷ ಪಟ್ಟರು.
ದಾವಣಗೆರೆಯ ಖ್ಯಾತ ಗಾಯಕಿ ಸಂಗೀತ ಸಂಘಟಿಕಿ ವಿದುಷಿ ಶ್ರೀಮತಿ ಶೀಲಾ ನಟರಾಜ್ ಸ್ವರ್ಗಸ್ಥರಾದ ಕಾರಣ ಅವರಿಗೆ ಒಂದು ನಿಮಿಷ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್‌ಶೆಣೈ ದಂಪತಿಗಳು, ಶ್ರೀಮತಿ ಮಹೇಶ್ವರಯ್ಯ ದಂಪತಿಯರು, ಕಲಾಕುಂಚ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಶ್ರೀಮತಿ ಶಿಲ್ಪಾ ಉಮೇಶ್, ಶ್ರೀಮತಿ ಕುಸುಮ ಲೋಕೇಶ್ ದಂಪತಿಗಳು ವಿಜಯಗಣೇಶ್ ರಾವ್, ಶ್ರೀಮತಿ ಸಂಧ್ಯಾ ಶ್ರೀನಿವಾಸ್, ಶ್ರೀಮತಿ ನಿರ್ಮಲಾ ರಾಜೇಂದ್ರ ಬಾಬು, ಮಮತಾ ಕೊಟ್ರೇಶ್, ಶ್ರೀಮತಿ ಲಕ್ಷಿö್ಮÃ ಅಂಜನೇಯ, ಸಾಲಿಗ್ರಾಮ ಸಂದೀಪ್ ಶೆಣೈ, ಶ್ರೀಮತಿ ಲಕ್ಷಿö್ಮÃ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular