ಮಂಗಳೂರು ನಗರದ ಪಡೀಲ್ ನಲ್ಲಿ ಸ್ವಂತ ಆಡಳಿತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ತನ್ನ 35ನೇ ಶಾಖೆಯನ್ನು ಮೂಡುಬಿದಿರೆಯಲ್ಲಿ ಏಪ್ರಿಲ್ 19ರಂದು ಉದ್ಘಾಟಿಸಲಿದೆ.
ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಹಾಗೂ ಕ..ರಾ.ಸ.ಮಾ.ಮಂಡಳದ ಅಧ್ಯಕ್ಷ ಸಹಕಾರ ರತ್ನ ಡಾ ಎಂ ಎನ್ ರಾಜೇಂದ್ರ ಕುಮಾರ್ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಮುಂದಾಳುಗಳು ವಿವಿಧ ವಿಭಾಗಗಳನ್ನು ಉದ್ಘಾಟಿಸಲಿದ್ದಾರೆ.

ಪಿ ಖಾತೆಯ ಮೂಲಕ ಸಾಕಷ್ಟು ಅಭಿವೃದ್ಧಿಯನ್ನು ಮಾಡಿರುವ ಸಂಘವು ಮೂಡುಬಿದಿರೆಯಲ್ಲಿಯೂ ಅದನ್ನು ಮುಂದುವರಿಸುವ ವಿಶ್ವಾಸವನ್ನು ಹೊಂದಿದೆ. ನೂತನ ಶಾಖೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ 500 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿದರ ಹಾಗೂ ಒಂದು ಸಾವಿರ ದಿನಗಳ ಠೇವಣಿಗೆ ಉನ್ನತ ವಿಶೇಷ ಬಡ್ಡಿ, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂಗೆ ಗರಿಷ್ಠ ಮೌಲ್ಯ, ಸೇವಾ ಶುಲ್ಕ ಇಲ್ಲದೆ ಸಾಲವನ್ನು ಸದಸ್ಯರಿಗೆ ನೀಡುವ ಇತ್ಯಾದಿ ಸೇವೆಗಳು ಲಭ್ಯ ಇದೆ. ಇ-ಮುದ್ರಾಂಕ, ನೆಟ್, ಆರ್ ಟಿ ಜಿ ಎಸ್ ಸೇವೆ, ವಿಮಾ ಪಾಲಿಸಿಗಳು, ಇತ್ಯಾದಿ ಹಲವಾರು ಸೇವೆಗಳು ಸಂಘದ ಶಾಖೆಯಲ್ಲಿ ಲಭ್ಯ ಇವೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ತಿಳಿಸಿರುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಶ್ವನಾಥ್ ಅವರು ಸಂಘದ ವಿವಿಧ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ನೇಮಿರಾಜ ಪೂಜಾರಿ, ಪರಮೇಶ್ವರ, ರವಿ ಕಲಾ, ಸಂದೀಪ್ ಹಾಗೂ ಇತರರು ಹಾಜರಿದ್ದರು.

