ಮಂಗಳೂರು : ಮಿಲಾಗ್ರಿಸ್ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಪ್ರಬಂಧ ಮಂಡನಾ ಸ್ಪರ್ಧೆ “ಅನ್ವೇಷಣ್-2026” ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆಯಿತು. “ರಿಸರ್ಚ್ ಟು ಫೈಂಡ್ ಸೊಲ್ಯೂಷನ್ಸ್” ಎಂಬ ವಿಷಯದಡಿ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಆಂತರಿಕ ಗುಣಮಟ್ಟ ಭರವಸೆ ಕೋಶ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿ ಹಾಗೂ ತೀರ್ಪುಗಾರರಾಗಿ ಎಐಎಂಐಟಿ, ಸೆಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಎಂಸಿಎ ವಿಭಾಗದ ಮುಖ್ಯಸ್ಥರಾದ ಡಾ. ಜೀವನ್ ಲಿಯೋನಲ್ ಜೋಸೆಫ್ ಪಿಂಟೋ ಅವರು ಮಾತನಾಡಿ, ಸಂಶೋಧನಾ ವಿಧಾನ, ವಿಮರ್ಶಾತ್ಮಕ ಚಿಂತನೆ ಮತ್ತು ವ್ಯವಸ್ಥಿತ ಅಧ್ಯಯನದ ಮಹತ್ವವನ್ನು ವಿವರಿಸಿದರು.
ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಬಿಸಿನೆಸ್ ಆಡ್ಮಿನಿಸ್ಟ್ರೇಷನ್ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಬಬಿತಾ ರೋಹಿತ್ ಮಾತನಾಡಿ, ಸಂಶೋಧನಾ ಲೇಖನ ಬರವಣಿಗೆಯ ಮೂಲಭೂತ ಅಂಶಗಳಾದ ರಚನೆ, ಸ್ಪಷ್ಟತೆ ಮತ್ತು ಶೈಕ್ಷಣಿಕ ನಿಷ್ಠೆಯ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯರಾದ ರೆ .ಡಾ. ಆಲ್ವಿನ್ ಸೆರಾವೋ ಮಾತನಾಡಿ, ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕಿ ಚೇತನಾ ಕುಮಾರಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಮತ್ತು ಕಾರ್ಯಕ್ರಮದ ಸಂಚಾಲಕಿ ಡಾ. ಆಶಾ ಜ್ಯೋತಿ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ವಿವಿಧ ಕಾಲೇಜಿನ ಒಟ್ಟು 31 ವಿದ್ಯಾರ್ಥಿಗಳು ವಿವಿಧ ವಿಷಯಗಳ ಮೇಲೆ ತಮ್ಮ ಪ್ರಬಂಧಗಳನ್ನು ಮಂಡಿಸಿದರು.
ಸ್ಪರ್ಧೆಯ ವಿಜೇತರು:
ಪ್ರಥಮ ಸ್ಥಾನ: ಸಾನಿಯಾ ಪಿ.ಟಿ., ಆಳ್ವಾಸ್ ಕಾಲೇಜು ಮೂಡುಬಿದರೆ
ದ್ವಿತೀಯ ಸ್ಥಾನ: ಅರಿನ್ ಮಿರಾಂಡಾ, ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ
ತೃತೀಯ ಸ್ಥಾನ: ಕ್ಲೆವನ್ ದೀಕ್ಷಿತ್, ಮಿಲಾಗ್ರಿಸ್ ಕಾಲೇಜು ಮಂಗಳೂರು
ಕಾರ್ಯಕ್ರಮವನ್ನು ತೃತೀಯ ಬಿ.ಕಾಂ ವಿದ್ಯಾರ್ಥಿ ಟೆನ್ಜಿಲ್ ನಿರೂಪಿಸಿದರು. ವಿದ್ಯಾರ್ಥಿನಿ ಮುಸ್ಕಾನ್ ಗುಪ್ತ ಅವರ ಸ್ವಾಗತಿಸಿದರು. ವಿದ್ಯಾರ್ಥಿ ಟೆನ್ಸಿಲ್ ವಂದಿಸಿದರು.

