ಭಾರತ ರತ್ನ ಎಂ ಎಸ್ ಸುಬ್ಬಲಕ್ಷ್ಮಿ ಅವರ 110ನೇ ವರ್ಷಾಚರಣೆ ಪ್ರಯುಕ್ತ ಸಂಗೀತ ಕಚೇರಿ

0
8

ಮಣಿ ಕೃಷ್ಣ ಸ್ವಾಮಿ ಅಕಾಡೆಮಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಮಂಗಳೂರಿನ ರಾಮಕೃಷ್ಣ ಮಠದ ಆಶ್ರಯದಲ್ಲಿ ಭಾರತ ರತ್ನ ಎಂ ಎಸ್ ಸುಬ್ಬಲಕ್ಷ್ಮಿ ಅವರ 110ನೇ ವರ್ಷಾಚರಣೆಯನ್ನು ಅಕ್ಟೋಬರ್ 2 ರಂದು ಸಂಜೆ 5:00 ಕ್ಕೆ ರಾಮಕೃಷ್ಣ ಮಠದ ಅಮೃತ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಮಠದ ಅಧ್ಯಕ್ಷ ಸ್ವಾಮಿ ಜಿತಕಾಮನಂದ ಜಿ ಮಹಾರಾಜ್ ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಲಿದ್ದಾರೆ.

ತರುವಾಯ ಸುಬ್ಬಲಕ್ಷ್ಮಿ ಅವರ ಮರಿ ಮೊಮ್ಮಕ್ಕಳಾದ ಎಸ್ ಐಶ್ವರ್ಯ ಮತ್ತು ಎಸ್ ಸೌಂದರ್ಯ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ಇವರಿಗೆ ವೈಲಿನ್ ನಲ್ಲಿ ಅದಿತಿ ಕೃಷ್ಣ ಪ್ರಕಾಶ್, ಮೃದಂಗದಲ್ಲಿ ಪುತ್ತೂರು ನಿಕ್ಷಿತ್, ಕಂಜಿರದಲ್ಲಿ ಕಾರ್ತಿಕ್ ಆರ್, ವಿದ್ವತ್ ರಾವ್, ತಂಬೂರದಲ್ಲಿ ಶರಣ್ಯ ಕೆ ಎನ್ ಸಾತ್ ನೀಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಚಂದ್ರಶೇಖರ್ ಕೆ ಶೆಟ್ಟಿ, ಕಾರ್ಯದರ್ಶಿ ಪಿ ನಿತ್ಯಾನಂದರಾವ್, ವಿದ್ವಾನ್ ನಾಗೇಶ್ ಬಪ್ಪನಾಡು, ವಿದೇಶಿ ಗೀತಾ ಸರಳಾಯ ಉಪಸ್ಥಿತರಿದ್ದರು.

ವರದಿ ರಾಯಿ ರಾಜ ಕುಮಾರ್
.