ಕರ್ನಾಟಕ ರಾಜ್ಯ ಕಿಸಾನ್ ಸೇವಾ ಸಂಸ್ಥೆ ಅವರ ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್, ರಾಜ್ಯ ಕೃಷಿ, ತೋಟಗಾರಿಕೆ, ಸಂಸ್ಕರಣೆ ಮತ್ತು ರಫ್ತು, ಇಲಾಖೆಯ ಸಹಕಾರದಲ್ಲಿ ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗ ಅಕ್ಟೋಬರ್ 2,3,4 ರಂದು ಕುಲಶೇಖರದ ಕೊರ್ಡೆಲ್ ಮೈದಾನದಲ್ಲಿ ಕೃಷಿ ಹಬ್ಬವನ್ನು ಆಚರಿಸುತ್ತಾರೆ.
ಇದರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು, ಕೃಷಿ ಉದ್ದಿಮೆಗಳು, ತಜ್ಞರು, ಮಹಿಳಾ ಸ್ವಸಹಾಯ ಸಂಘ, ಕೃಷಿh ಸಂಸ್ಥೆಗಳು, ರೈತ ಉತ್ಪಾದಕ ಸಂಸ್ಥೆಗಳು ಭಾಗವಹಿಸಲಿದ್ದಾರೆ. ಇಲ್ಲಿ ಸಿರಿಧಾನ್ಯ ಮತ್ತು ಆರೋಗ್ಯಕರ ಆಹಾರದ ಕುರಿತು ಅರಿವು ಮೂಡಿಸಲಾಗುವುದು. ರೈತರು ಮತ್ತು ಉದ್ಯಮಗಳ ಸಂಪರ್ಕ ವೇದಿಕೆಯಾಗಿಯೂ ಪರಿಣಮಿಸಲಿದೆ ಎಂದು ಆಯೋಜಕರು ತಿಳಿಸಿರುತ್ತಾರೆ.
ವರದಿ ರಾಯಿ ರಾಜ ಕುಮಾರ್

