ಕಾಟುಕುಕ್ಕೆ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಶ್ರೀ ಧೂಮಾವತಿ ನೃತ್ಯ ತಂಡದ ಫ್ಯೂಷನ್ ತಿರುವಾದಿರ ಝಲಕ್

0
162

ಅತಿ ಪ್ರಸಿದ್ಧವಾಗಿರುವ ಕ್ಷೇತ್ರಗಳೊಂದಾದ, ಶ್ರೀ ಸುಬ್ರಾಯ ದೇವಸ್ಥಾನ ಕಾಟುಕುಕ್ಕೆ ಇದರ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮನ್ನಿಪಾಡಿಯ ಅಲಂಗೋಡು ಶ್ರೀ ಧೂಮಾವತಿ ನೃತ್ಯ ತಂಡದವರಿಂದ ಫ್ಯೂಷನ್ ತಿರುವಾದಿರ”ವು ನೆರೆದಿರುವ ಭಕ್ತ ಜನಸ್ತೋಮರ ಗಮನ ಸೆಳೆಯಿತು. ಓಮನ ರವಿ ಮನ್ನಿಪಾಡಿ, ಪೂರ್ಣಿಮಾ ರಾಜೇಶ್ ಮನ್ನಿಪಾಡಿ, ಕುಮಾರಿ ಅನುಶ್ರೀ, ಶೀಬಾ ಸತೀಶ ಕಾಂತಿಕೆರೆ, ತಾ ವಸಂತ ಕಾಂತಿಕೆರೆ, ವಿನಿತಾ ರಾವ್, ಅಶ್ವಿನಿ ಶರತ್, ಡಾ. ಚೈತ್ರ ರವಿ, ಮನ್ನಿಪಾಡಿ,
ಡಾ. ಮೃದುಲ ರಾಘವನ್ ಮನ್ನಿಪಾಡಿ ಕು.ಧನಶ್ರೀ, ಕು.ರಮ್ಯ , ಅಮಿತಾ ಶರತ್ ಮನ್ನಿಪಾಡಿ, ಸೌಮ್ಯ ಸುನೀಶ್ ಕಾಂತಿ ಕೆರೆ ಹಾಗೂ ಮುಂತಾದವರು ಶ್ರೀ ಸುಬ್ರಾಯ ದೇವಸ್ಥಾನ ಕಾಟುಕುಕ್ಕೆ ಯ ಸ್ಕಂದಮಂಟಪದಲ್ಲಿ ” ತಿರುವಾದಿರ”ಕ್ಕೆ ಹೆಜ್ಜೆ ಹಾಕಿ ಜನಮನ ಸೂರೆಗೊಂಡರು. ಖ್ಯಾತ ರಂಗಭೂಮಿ ನಟ, ನಿರ್ದೇಶಕ
ಉದಯಕುಮಾರ್ ಮನ್ನಿ ಪಾಡಿ ಕಾರ್ಯಕ್ರಮ ನಿರೂಪಿಸಿದರು.

ರವಿ ಮಣಿಯಾಣಿ, ಕುನ್ಹಿ ರಾಮಮಣಿಯಾಣಿ, ರಾಘವ ಮನ್ನಿಪಾಡಿ, ಜಯಕುಮಾರ್ ಮನ್ನಿಪಾಡಿ ಹಾಗೂ ಮುಂತಾದ ಗಣ್ಯರು ಕಾರ್ಯಕ್ರಮಕ್ಕೆ ಸಹಕರಿಸಿದರು. ದೇವಸ್ಥಾನದ ಸಮಿತಿ ಸದಸ್ಯರು
ಶಾಲುಹೊದಿಸಿ ಸ್ಮರಣಿಕೆ ನೀಡಿ ಕಲಾವಿದರನ್ನು ಗೌರವಿಸಿದರು.

LEAVE A REPLY

Please enter your comment!
Please enter your name here