ಶ್ರೀ ಕ್ಷೇತ್ರ ಮಹಾಕಾಳಿ ಮಹಾಸಂಸ್ಥಾನ ಸದ್ಧರ್ಮ ಓಂ ಶಕ್ತಿ ದೇವಸ್ಥಾನ ಪೀಠ (ರಿ)
ಶ್ರೀ ಆದಿಪರಾಶಕ್ತಿ ಚಾಮುಂಡೇಶ್ವರಿ ಮಹಾಕಾಳಿ ಅಮ್ಮನವರ ವರ್ಷಾವಧಿ ಜಾತ್ರಾ ಮಹೋತ್ಸವ
ದಿನಾಂಕ : 14-05-2025 ನೇ ಬುಧವಾರದಿಂದ 18-05-2025ನೇ ಆದಿತ್ಯವಾರದವರೆಗೆ
ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಜಗದ್ಗುರು ಮಧ್ವಾಚಾರ್ಯ ಸಂಸ್ಥಾನ ಕುಕ್ಕೆ ಸುಬ್ರಹ್ಮಣ್ಯ ಮಠ ಇವರ ಶುಭಾಶೀರ್ವಾದಗಳೊಂದಿಗೆ ಹಾಗೂ ಪರಮಪೂಜ್ಯ ಶ್ರೀ ಶ್ರೀ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಪೀಠಾಧಿಪತಿ ಶ್ರೀ ಕ್ಷೇತ್ರ ಮಹಾಕಾಳಿ ಮಹಾ ಸಂಸ್ಥಾನ ಸದ್ಧರ್ಮ ಓಂ ಶಕ್ತಿ ಪೀಠ (ರಿ.) ಇವರ ದಿವ್ಯ ಸಾನಿಧ್ಯದಲ್ಲಿ ವೇದಮೂರ್ತಿ ಶ್ರೀ ಗಂಗಾಧರ್ ಭಟ್ ಬ್ರಹ್ಮಬೈದರ್ಕಳ ಗರಡಿ ಕಂಕನಾಡಿ ಇವರ ಪೌರೋಹಿತ್ಯದಲ್ಲಿ ಜರಗುವುದು.
ದಿನಾಂಕ : 14-05-2025ನೇ ಬುಧವಾರ ಬೆಳಿಗ್ಗೆ 4.00 ಗಂಟೆಗೆ ಪುಣ್ಯಾಹವಾಚನ, ತೋರಣ ಮುಹೂರ್ತ, ಮಹಾಗಣಪತಿ ಹೋಮ, ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12.00 ಗಂಟೆಗೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 7.00 ಗಂಟೆಗೆ : ದೇವಿ ಮಹಾಪೂಜೆ. ದಿನಾಂಕ : 15-05-2025ನೇ ಗುರುವಾರ ಬೆಳಿಗ್ಗೆ 7.00 ಗಂಟೆಗೆ : ಶಿವಪಂಚಾಕ್ಷರಿ ಹೋಮ, ಮಧ್ಯಾಹ್ನ 12.00 ಗಂಟೆಗೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 7.00 ಗಂಟೆಗೆ : ದೇವಿ ಮಹಾಪೂಜೆ, ದಿನಾಂಕ : 16-05-2025ನೇ ಶುಕ್ರವಾರ ಬೆಳಿಗ್ಗೆ 7.00 ಗಂಟೆಗೆ : ಭಗವತಿ ದೇವಿಪೂಜೆ, ಅಲಂಕಾರ ಪೂಜೆ, ಮಧ್ಯಾಹ್ನ 12.00 ಗಂಟೆಗೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 7.00 ಗಂಟೆಗೆ : ದೇವಿ ಮಹಾಪೂಜೆ, ದಿನಾಂಕ : 17-05-2025ನೇ ಶನಿವಾರ ಬೆಳಿಗ್ಗೆ 7.00 ಗಂಟೆಗೆ : ನಾಗದೇವರ ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ತನು ತಂಬಿಲ, ಅಲಂಕಾರ ಪೂಜೆ, ನಾಗದರ್ಶನ ಸೇವೆ, ಚಂಡಿಕಾ ಹೋಮ, ಮಧ್ಯಾಹ್ನ 12.00 ಗಂಟೆಗೆ
: ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ 2.00 ರಿಂದ ಸಂಜೆ 4.00 ರವರೆಗೆ
: ವಿವಿಧ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ, ಸಂಜೆ 4.00 ಗಂಟೆಗೆ : ಕಾಲಭೈರವ ಬಲಿ ಉತ್ಸವ, ಹೂವಿನ ಪೂಜೆ, ದಿನಾಂಕ : 18-05-2025ನೇ ಶನಿವಾರ ಬೆಳಿಗ್ಗೆ 4.00 ಗಂಟೆಗೆ : ಆದಿಪರಾಶಕ್ತಿ, ಚಾಮುಂಡೇಶ್ವರಿ ಮಹಾಕಾಳಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ನವಕ ಪ್ರಧಾನ, ಅಲಂಕಾರ ಪೂಜೆ, ಬೆಳಿಗ್ಗೆ 7.00 ಗಂಟೆಗೆ : ಮಹಾಕಾಳಿ ದೇವಿ ದರ್ಶನ ಸೇವೆ, ಮಹಾಕಾಳಿ ಬಲಿ ಉತ್ಸವ ಶ್ರೀಗಳಿಂದ ಮದುಕರ, ಮಹಾಪೂಜೆ, ಮಧ್ಯಾಹ್ನ 12.00 ಗಂಟೆಗೆ : ಮಹಾ ಅನ್ನಸಂತರ್ಪಣೆ, ಮಧ್ಯಾಹ್ನ 2.00 ಗಂಟೆಗೆ : ಅಥಿತಿ ಸತ್ಕಾರ, ಸಂಜೆ 7.00 ಗಂಟೆಗೆ : ರಂಗಪೂಜೆ, ಮಹಾಕಾಳಿ ಅಮ್ಮನವರ ಬಲಿ ಉತ್ಸವ ಮತ್ತು ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ, ಕಟ್ಟೆಪೂಜೆ, ಉಯ್ಯಾಲೆ ಸೇವೆ, ಮಹಾಮಂಗಳಾರತಿ ನಡೆಯಲಿದೆ.