ಅಮೆರಿಕಾದ ಅಟ್ಲಾಂಟಾ ಮಹಾನಗರ ದಲ್ಲಿರುವ ಶ್ರೀ ಪುತ್ತಿಗೆ ಮಠದ ವತಿಯಿಂದ ಪರಮ ಪೂಜ್ಯ ಪುತ್ತಿಗೆ ಶ್ರೀಪಾದರ ಮಾರ್ಗದರ್ಶನದಂತೆ ಲೋಕ ಕಲ್ಯಾಣಕ್ಕಾಗಿ ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವವು ಸಾವಿರಾರು ಭಕ್ತರ ಪಾಲ್ಲ್ಗೊಳ್ಳು ವಿಕೆಯೊಂದಿಗೆ ಅತ್ಯಂತ ವೈಭವದಿಂದ ಇಂದು ಜರಗಿತು.
ಹಿಂದಿನ ದಿನದಂದು ತರಕಾರಿ ಮುಹೂರ್ತವು ಜರಗಿ ಮರುದಿನ ಶನಿವಾರದಂದು ಬೆಳಿಗ್ಗೆ ವೈಭವದ ಮೆರವಣಿಗೆಯೊಂದಿಗೆ ಶ್ರೀ ಭೂ ಸಹಿತ ಶ್ರೀನಿವಾಸ ಮೂರ್ತಿಗಳನ್ನು ಪಲ್ಲಕ್ಕಿ ಯಲ್ಲಿ ವಿವಿಧ ಹಾಡು ನರ್ತನೆಗಳೊಂದಿಗೆ ಸಭಾಂಗಣಕ್ಕೆ ತರಲಾಯಿತು. ಬಳಿಕ ಸಾಲಂಕೃತ ಸಭಾ ಗುರುಕುಲ ಸಭಾಭವನದಲ್ಲಿ ಪುಣ್ಯಾಹವಚನ,ಮಾಂಗಲ್ಯ ಧಾರಣಾದಿ ಮದುವೆಯ ಧಾರ್ಮಿಕ ವಿಧಿ ವಿಧಾನಗಳನ್ನು ಭಕ್ತರ ಸಮ್ಮುಖದಲ್ಲಿ ವೇದ ಮೂರ್ತಿ ಶ್ರೀ ಕಿರಣ್ ರಾವ್,ಶ್ರೀ ಜಯ ಪ್ರಸಾದ್ ಅಮ್ಮಣ್ಣಾಯ,ಶ್ರೀ ತೇಜಸ ಚಡಗ ನೆರವೇರಿಸಿಕೊಟ್ಟರು.
ಕಾಪು ಹರೀಶ್ ಭಟ್ಟರ ನೇತೃತದಲ್ಲಿ ಉಡುಪಿ ಭೋಜನ ಸಿದ್ದಗೊಂಡಿದ್ಫುಸುಮಾರು ಎರಡು ಸಾವಿರಕ್ಕೂ ಮಿಕ್ಕಿ ನೆರೆದ ಭಕ್ತರು ಭೋಜನ ಪ್ರಸಾದ ವನ್ನು ಸ್ವೀಕರಿಸಿ ಧನ್ಯರಾದರು.
ವಿಶ್ವ ಗೀತಾ ಪರ್ಯಾಯ ಸ್ಮಾರಕವಾಗಿ ಮಂದಿರ
ಶ್ರೀ ಪುತ್ತಿಗೆ ಮಠದ ವಿದೇಶೀಯ ೧೫ ಶಾಖೆಗಳಲ್ಲಿ ಅಟ್ಲಾಂಟ ನಗರದಲ್ಲಿರುವ ಮಠವು ಆರನೆಯ ಶಾಖೆಯಾಗಿರುತ್ತದೆ.
ಇಲ್ಲಿ ಆರು ಎಕರೆಯ ವಿಸ್ತೀರ್ಣ ಜಾಗದಲ್ಲಿ 23 ಸಾವಿರ ಚದರಡಿಯಲ್ಲಿ ಶ್ರೀಕೃಷ್ಣ ಮಂದಿರವು ನಿರ್ಮಾಣ ಗೊಳ್ಳಲಿದೆ.
ಪೂಜ್ಯ ಪುತ್ತಿಗೆ ಶ್ರೀಪಾದರು ತಮ್ಮ ಚತುರ್ಥ ಬಾರಿಯ ವಿಶ್ವಗೀತಾ ಶ್ರೀ ಕೃಷ್ಣ ಪೂಜಾ ಪರ್ಯಾಯಕ್ಕೆ ತೆರಳುವ ಮುನ್ನ
ದಿನಾಂಕ 6-11-2023 ರಂದು ಭೂಮಿ ಪೂಜೆಯನ್ನು ನೆರವೇರಿಸಿದ್ದರು ಮಾತ್ರವಲ್ಲ ಇಲ್ಲಿ ಪವಿತ್ರ ಭಗವದ್ಗೀತೆಯ ೭೦೦ ಶ್ಲೋಕಗಳನ್ನು ತಾಮ್ರದ ಇಟ್ಟಿಗೆ ಗಳಲ್ಲಿ ಬರೆಯಿಸಿ ಮಂದಿರದ ಪಂಚಾಂಗದಲ್ಲಿ ಇರಿಸುವ ಅಪೇಕ್ಸ್ಗೆ ಯನ್ನು ಭಕ್ತರಿಗೆ ತಿಳಿಸುವ ಮೂಲಕ ಮೂಲಕ ತಮ್ಮ ಚತುರ್ಥ ಬಾರಿಯ ವಿಶ್ವ ಗೀತಾ ಪರ್ಯಾಯದ ಸ್ಮಾರಕವಾಗಿ ಈ ಮಂದಿರ ತಲೆಯೆತ್ತಲಿದೆ ಎಂದು ಘೋಷಿಸಿದ್ದರು.
ಮಂದಿರದ ನಿರ್ಮಾಣದ ಹಂತಗಳನ್ನು ಅಟ್ಲಾಂಟಾಶಾಖಾ ಮಠದ ಪ್ರಧಾನ ಅರ್ಚಕರಾದ ಶ್ರೀ ಜಯಪ್ರಸಾದ ಅಮ್ಮಣ್ಣಾಯ ಸಭೆಗೆ ವಿವರಿಸಿ ಭಕ್ತರ ಸಹಕಾರವನ್ನು ವಿಶೇಷ ಕೋರಿದರು.
ಮಂದಿರವು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ ಸುಸಜ್ಜಿತ ಸಭಾ ಭವನ ವನ್ನು ಒಳಗೊಂಡಿದ್ದು ಭಕ್ತರ ಸಹಕಾರದ ಜೊತೆಗೆ ನಿರ್ಮಾಣದ ಕಾರ್ಯ ನಡೆಯುತ್ತಿದ್ದು,
ಪೂಜ್ಯ ಶ್ರೀಪಾದರ ಕನಸಿನಂತೆ ಪ್ರಾಕ್ತನ ಶೈಲಿ ಆಧುನಿಕ ತಂತ್ರ ಜ್ಞಾನದ ಜೊತೆಗೆ ಶ್ರೀ ಕೃಷ್ಣ ಮಂದಿರವು ಅಪೂರ್ವ ವಾಗಿ ಆಕರ್ಷಣೀಯವಾಗಿ ಕಾಣಿಸಿಕೊಳ್ಳಲಿದೆಯೆಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ
ಶ್ರೀ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯ ತಿಳಿಸಿರುತ್ತಾರೆ.

