ರಾಜ್ಯದಲ್ಲಿ 25 ಲಕ್ಷ ಸಸಿ ನೆಡುವ ಬೃಹತ್ ವನಮಹೋತ್ಸವ ಆಚರಣೆಗೆ ಜು. 5ರಂದು ಚಾಲನೆ

0
54

ಬೆಂಗಳೂರು: ಇತ್ತೀಚೆಗೆ ಬೆಂಗಳೂರು ಭಾಗದಲ್ಲೇ ಬೃಹತ್ ಅರಣ್ಯ ಅಕ್ರಮ ತೆರವುಗೊಳಿಸಿದ್ದ ಅರಣ್ಯ ಇಲಾಕೆ ಹಸಿರು ಹೆಚ್ಚಿಸಲು ಕ್ರಮ ಕೈಗೊಂಡಿದೆ. ಹಸಿರು ಕಲ್ಯಾಣ ಕರ್ನಾಟಕ ಯೋಜನೆಯಡಿ 25 ಲಕ್ಷ ಸಸಿ ನೆಡುವ ಬೃಹತ್ ವನಮಹೋತ್ಸವ ಆಚರಣೆಗೆ ಮುಂದಾಗಿದೆ. ಈ ವನಮಹೋತ್ಸವ ಜುಲೈ 5ರಂದು ನಡೆಯಲಿದ್ದು, ರಾಜ್ಯಸಭಾ ಪ್ರತಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚಾಲನೆ ನೀಡಲಿದ್ದಾರೆ. . ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಉಷ್ಣತೆಯನ್ನು ತಗ್ಗಿಸಲು ಹಾಗೂ ಪರಿಸರವನ್ನು ರಕ್ಷಿಸಲು ಹಸಿರುಕರಣ ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಈ ಬೃಹತ್ ವನಮಹೋತ್ಸವ ಕಾರ್ಯಕ್ರಮ ಹಸಿರುಕರಣ ತ್ವರಿತಗೊಳಿಸಲು ಪರಿಣಾಮಕಾರಿ ಹೆಜ್ಜೆಯಾಗಿ ಹಾಗೂ ಪರಿಸರ ಸಂರಕ್ಷಣೆಗೆ ಮಹತ್ವದ ಪಾತ್ರವನ್ನೂ ವಹಿಸಲಿದೆ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here