ಭಗವಾನ್ ಬಾಹುಬಲಿ ಟ್ರೋಫಿ: ಕಬಡ್ಡಿ ಟೂರ್ನಿ

0
4

ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದೊಂದಿಗೆ ಮಾನವೀಯ ಮೌಲ್ಯಗಳ ಉದ್ದೀಪನ

ಉಜಿರೆ: ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆಯೊಂದಿಗೆ ಸೋಲು-ಗೆಲುವನ್ನು ಕ್ರೀಡಾಸ್ಪೂರ್ತಿಯೊಂದಿಗೆ ಸಮಾನವಾಗಿ ಸ್ವೀಕರಿಸುವ ಗುಣ, ಆತ್ಮವಿಶ್ವಾಸ, ಧೈರ್ಯ, ಪ್ರೀತಿ-ವಿಶ್ವಾಸ, ಆದರ್ಶ ನಾಯಕತ್ವ ಮೊದಲಾದ ಮಾನವೀಯ ಮೌಲ್ಯಗಳ ಉದ್ದೀಪನವಾಗುತ್ತದೆ ಎಂದು ಎಸ್.ಡಿ,ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಹೇಳಿದರು.

೨೦೨೭ ರ ಫೆಬ್ರವರಿಯಲ್ಲಿ ಕಾರ್ಕಳದಲ್ಲಿ ನಡೆಯಲಿರುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಅಂಗವಾಗಿ ಅವರು ಶನಿವಾರ ಉಜಿರೆಯಲ್ಲಿ ಇಂದ್ರಪ್ರಸ್ಥ ಸಭಾಂಗಣದಲ್ಲಿ ದಕ್ಷಿಣಕನ್ನಡ ಜೈನ ಯುವಜನ ಸಂಘದ ಆಶ್ರಯದಲ್ಲಿ ಆಯೋಜಿಸಿದ ರಾಷ್ಟçಮಟ್ಟದ ಭಗವಾನ್ ಬಾಹುಬಲಿ ಟ್ರೋಫಿ ಕಬಡ್ಡಿ ಟೂರ್ನಿ ಉದ್ಘಾಟಿಸಿ ಮಾತನಾಡಿದರು.

ಬಾಹುಬಲಿ ತನ್ನ ಬದುಕಿನಲ್ಲಿ ಸಾಧಿಸಿ ತೋರಿಸಿದ ಅಹಿಂಸೆ, ತ್ಯಾಗ, ಸಂಯಮ ಮೊದಲಾದ ಜೀವನಮೌಲ್ಯಗಳು ಸಾರ್ವಕಾಲಿಕ ಮೌಲ್ಯ ಹೊಂದಿದ್ದು ಯುವಜನತೆ ಇದರಿಂದ ಸ್ಪೂರ್ತಿ, ಪ್ರೇರಣೆ ಪಡೆದು ಮಹಾಮಸ್ತಕಾಭಿಷೇಕದ ಸಂದರ್ಭ ಶ್ರದ್ಧಾ-ಭಕ್ತಿಯಿಂದ ಸ್ವಯಂಸೇವಕರಾಗಿ ಸೇವೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಗುರುವಾಯನಕೆರೆಯ ಎಕ್ಸೆಲ್ ಶಿಕ್ಷಣಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ ಕಾರ್ಕಳದಲ್ಲಿ ಒಂದು ದಿನ ಮಸ್ತಕಾಭಿಷೇಕವನ್ನು ತಮ್ಮ ಸಂಸ್ಥೆಯ ವತಿಯಿಂದ ಸೇವೆಯಾಗಿ ನೆರವೇರಿಸುವುದಾಗಿ ಪ್ರಕಟಿಸಿದರು.

ಅಧ್ಯಕ್ಷತೆ ವಹಿಸಿದ ದಕ್ಷಿಣಕನ್ನಡ ಜೈನ ಯುವಜನ ಸಂಘದ ಅಧ್ಯಕ್ಷ ರಂಜಿತ್ ಕೆ. ಪಡಿವಾಳ್ ಮಾತನಾಡಿ ಯುವಜನತೆಯನ್ನು ಸಂಘಟಿಸಿ ಪವಿತ್ರ ಸೇವಾಕಾರ್ಯಕ್ಕೆ ಬಳಸುವ ಉದ್ದೇಶದಿಂದ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.

ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷ ಸನ್ಮತಿಕುಮಾರ್, ನೋಟರಿ ಶಶಿಕಿರಣ್ ಜೈನ್ , ರಸಾಯನಶಾಸ್ತç ಉಪನ್ಯಾಸಕ ನವೀನ ಜೈನ್, ಉಜಿರೆಯ ಧೀಮತಿ ಮಹಿಳಾ ಸಮಾಜದ ಅಧ್ಯಕ್ಷರಾದ ಅಶ್ವಿನಿ ಪ್ರವೀಣ್ ಕುಮಾರ್ ಮತ್ತು ಅಮೃತ್ ಟೆಕ್ಸ್ಟೈಲ್ಸ್ ಮಾಲಕ ಪ್ರಶಾಂತ್ ಕುಮಾರ್ ನೆಲ್ಲಿಕಾರು ಉಪಸ್ಥಿತರಿದ್ದರು.

ಪ್ರದೀಪ್ ಜೈನ್ ನೆಲ್ಲಿಕಾರು ಸ್ವಾಗತಿಸಿದರು. ಸುಮಂತ್ ಜೈನ್ ಧನ್ಯವಾದವಿತ್ತರು. ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.