ಕುಲಾಲ ಸಮಾಜಕ್ಕೆ ಹೆಮ್ಮೆ : ಅರಣ್ಯ ಇಲಾಖೆಯಲ್ಲಿ ಉನ್ನತ ಹುದ್ದೆಗೇರಿದ ಪ್ರಭಾಕರ ಕುಲಾಲ್

0
12

ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಭಾಕರ ಕುಲಾಲ್ ಅವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಹುದ್ದೆಗೆ ಭಡ್ತಿ ಹೊಂದಿದ್ದು, ದಾಂಡೇಲಿಯ ಕುಂಬಾರವಾಡದ ವೈಲ್ಡ್‌ಲೈಫ್ ಸ್ಯಾಂಕ್ಚುರಿ ಅಣಶಿ ಉಪವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.

ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಇದರ ರಾಜ್ಯ ಸಲಹೆಗಾರರಾಗಿ ಹಾಗೂ ಕುಂದಾಪುರ ಕುಲಾಲ ಮಾತೃ ಸಂಘದ ಕ್ರೀಡಾಕೂಟದ ಗೌರವಾಧ್ಯಕ್ಷರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಅವರ ವೃತ್ತಿಪರ ಸಾಧನೆ ಹಾಗೂ ಉನ್ನತ ಹುದ್ದೆಗೆ ಭಡ್ತಿ ದೊರೆತಿರುವುದಕ್ಕೆ ಕುಲಾಲ ಸಮಾಜದ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ಸೇವಾ ಅವಧಿಯಲ್ಲಿಯೂ ಇನ್ನಷ್ಟು ಯಶಸ್ಸು ದೊರೆಯಲಿ ಎಂದು ಶುಭ ಹಾರೈಸಿದ್ದಾರೆ.