ಪುತ್ತೂರು ಶಿವಸದನದಲ್ಲಿ ತಲೆಮಾರುಗಳ ಮಿಲನ – ಬಾಂಧವ್ಯ ಸಂಸ್ಕಾರದ ಸಂಗಮ

0
6

ಶಿವ ಸದನದ ಹಿರಿಯ ನಾಗರಿಕರೊಂದಿಗೆ ವಿದ್ಯಾರ್ಥಿಗಳು ಬೆರೆತು ನಡೆಯುವ ಈ ಸುಂದರ ಕ್ಷಣ . ತಲೆಮಾರುಗಳ ಹೃದಯಗಳ ಮಿಲನ .ಪ್ರೀತಿ, ಮಾನವೀಯತೆಯ ಬೆಸುಗೆಯಿಂದ ಹಿರಿಯರು ತಮ್ಮ ಜೀವನದ ಅನುಭವದ ವಿಶ್ವವಿದ್ಯಾಲಯವಾದರೆ ,ವಿದ್ಯಾರ್ಥಿಗಳು ನಾಳಿನ ಭರವಸೆಯ ನಕ್ಷತ್ರಗಳು.

ಇಂತಹ ಮಿಲನಗಳು ಎಲ್ಲಾ ವಿದ್ಯಾರ್ಥಿಗಳಲ್ಲಿ ಹಿರಿಯರ ಬಗ್ಗೆ ಗೌರವ, ಕರುಣೆ, ಪ್ರೀತಿ, ಮತ್ತು ಸೇವಾ ಮನೋಭಾವವನ್ನು ಬೆಳೆಸುತ್ತದೆ. ಅದೇ ರೀತಿ ವಿದ್ಯಾರ್ಥಿಗಳ ಒಟ್ಟಿಗೆ ಬೆರೆಯುವ ಅವಕಾಶ ಹಿರಿಯರಿಗೆ ಸಂತೋಷ ಆತ್ಮೀಯತೆ ಮತ್ತು ನಮ್ಮವರೇ ನಮ್ಮೊಂದಿಗೆ ಇದ್ದಾರೆ ಎಂಬ ಭರವಸೆಯನ್ನು ನೀಡುತ್ತದೆ.

ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಜ್ಞಾನ ದೀಪ ಇಂಟ್ರಾಕ್ಟ್ ಕ್ಲಬ್ ಬೆಳ್ಳಾರೆ, ಜ್ಞಾನದೀಪ ಎಜುಕೇಶನ್ ಇನ್ಸ್ಟಿಟ್ಯೂಷನ್ ಬೆಳ್ಳಾರೆ ಇವರ ಜಂಟಿ ಆಶ್ರಯದಲ್ಲಿ ಶಿವ ಸದನದಲ್ಲಿ ನವರಂಗ್26 ಕಾರ್ಯಕ್ರಮದಡಿ ಭೇಟಿ ನೀಡಿದರು. ಟ್ರಸ್ಟಿನ ಅಧ್ಯಕ್ಷೆ ಸುಮಂಗಲ ಪ್ರಭಾಕರ್ ಮತ್ತು ಕೋಶಾಧಿಕಾರಿ ದಿನಕರ್ ರಾವ್ ಸ್ವಾಗತಿಸಿ ಧನ್ಯ ವಾದ ಸಮರ್ಪಿಸಿದರು . ಶಿವ ಸದನದ ಬೆಳವಣಿಗೆಯ ಬಗ್ಗೆ ಟ್ರಸ್ಟಿನ ಕಾರ್ಯದರ್ಶಿ ಕರುಣ್ ಬೆಳ್ಳೆ ಯವರು ವಿವರಿಸಿದರು. ಟ್ರಸ್ಟಿ ಸಂತೋಷ್ ಉಜ್ಜೋಡಿ, ಪ್ರಭಾ ಕಾಂತಾವರ, ಗೀತಾ ಮುರಳಿ ಯವರು ಎಲ್ಲ ಕಾರ್ಯ ಕ್ರಮದಲ್ಲಿ ಸಹಕರಿಸಿದರು .