ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಂಗ್ರ ಕೂಳೂರಿನ 16ನೇ ವಾರ್ಡ್‌ನಲ್ಲಿ 60 ಲಕ್ಷ ಕಾಂಕ್ರೀಟೀಕರಣ ರಸ್ತೆ ಕಾಮಗಾರಿ ಉದ್ಘಾಟನೆ ರಸ್ತೆ, ನೀರು, ದಾರಿ ದೀಪ ಮೂಲಭೂತ ಸೌಕರ್ಯ ಒದಗಿಸುವುದು ಸರಕಾರದ ಜವಾಬ್ದಾರಿ ವಿಧಾನಪರಿಷತ್ ಶಾಸಕ ಐವನ್ ಡಿಸೋಜಾ
ಮಂಗಳೂರಿನ ಬಂಗ್ರಕೂಳೂರು ಇಲ್ಲಿಯ ಬಹುಜನರ ಬೇಡಿಕೆಯ ನಿರೀಕ್ಷೆಯಂತೆ ಮಳೆಗಾಲದಲ್ಲಿ ರಸ್ತೆಯಲ್ಲಿ ಪ್ರಯಾಣಿಸಲು ಆಗದಂತಹ ಪರಿಸ್ಥಿತಿಯಲ್ಲಿ ವಿಧಾನಪರಿಷತ್ ಶಾಸಕರಿಗೆ ನೀಡಿದ ಮನವಿಯ ಅನ್ವಯ 45 ದಿನಗಳಲ್ಲಿ 60 ಲಕ್ಷ ವೆಚ್ಚದ ರಸ್ತೆಯನ್ನು ಕಾಂಕ್ರೀಟೀಕರಣ ಗೊಳಿಸಿ ಇಂದು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟು ಕೊಡಲಾಯಿತು. ಅನೇಕ ವರ್ಷ ಗಳಿಂದ ಈ ಬೇಡಿಕೆ ಇದ್ದಿದ್ದರೂ ಕರಾವಳಿ ಭಾಗದ ನದಿ ತೀರದ ಈ ಒಂದು ರಸ್ತೆಯನ್ನು ಮಾಡಬೇಕೆಂದು ಬಹುದಿನದ ಬೇಡಿಕೆಯನ್ನು ಇಂದು ಈಡೇರಿಸಲಾಯಿತು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಜೀವನದಲ್ಲಿ ಬೆಳಕನ್ನು ಮೂಡಿಸಿದ್ದು ಅದರ ಜೊತೆ ಜೊತೆಯಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ರಸ್ತೆಗಳು, ಚರಂಡಿಗಳು, ದಾರಿದೀಪಗಳು ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಲು ಸಿದ್ದರಾಮಯ್ಯನವರ ಬಹಳ ಬದ್ಧತೆಯ ಮೇರೆಗೆ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದು ಶ್ಲಾಘನೀಯ 60 ಲಕ್ಷ ವೆಚ್ಚದಲ್ಲಿ ಸಾರ್ವಜನಿಕರಿಗೆ ರಸ್ತೆ ನಿರ್ಮಾಣ ಮಾಡಿ 45 ದಿನಗಳ ಒಳಗೆ ಬಿಟ್ಟು ಕೊಡುವುದು ಸಾರ್ವಜನಿಕರ ಸಹಭಾಗಿತ್ವ ಕೂಡ ಎಂದು ಈ ಸಂದರ್ಭದಲ್ಲಿ ಎಂದು ಐವನ್ ಡಿಸೋಜರವರು ಪ್ರಸ್ತಾಪಿಸಿದರು ಸಾರ್ವಜನಿಕರು ಹಾಗೂ ಸರಕಾರ ಜೊತೆಯಲ್ಲಿ ಸೇರಿ ಕೆಲಸ ಮಾಡಿದರೆ ಗುಣಮಟ್ಟದ ರಸ್ತೆಗಳು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ
ಈ ಸಂದರ್ಭದಲ್ಲಿ ದ ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೃತ ವಿ ಕದ್ರಿ, ಸಾಮಾಜಿಕ ಕಾರ್ಯಕರ್ತರಾದ ಡೆನ್ಸಿಲ್ ಡಿಸೋಜಾ, ಪಿಯೂಸ್ ಮೊಂತೇರು, ಕ್ಯಾನ್ಯುಟ್ ಪಿರೇರಾ, ಹರ್ಬರ್ಟ್ ಡಿಸೋಜ ಕಡೆಕಾರ್, ಲ್ಯಾನ್ಸಿ ಲಾಸಾದ್ರೂ ಪದವು, ನವೀನ್, ಜಾನ್ ಡಿಸೋಜ ಕೂಳೂರು, ಲ್ಯಾನ್ಸಿ ಡಿಸೋಜಾ ಬಂಗ್ರಕೂಳೂರು, ರವಿ ಪೂಜಾರಿ, ಡೊನಾಲ್ಡ್ ಡಿಸೋಜ, ಸೋಹನ್ ರೇಗು ಮುಂತಾದವರು ಜೊತೆಗಿದ್ದರು.