ಡ್ರಗ್ಸ್‌ ಗ್ಯಾಂಗ್‌ನ ಸಿಕ್ರೆಟ್ ಏಜೆಂಟ್ ಆಗಿದ್ದ ಗಿಳಿ ; ಕೊನೆಗೆ ಪೊಲೀಸ್ ಬಲೆಗೆ..!

0
14

ಬ್ರೆಜಿಲ್‌ : ವಿಚಿತ್ರ ಘಟನೆಯೊಂದು ಇಂದಿಗೂ ವಿಶ್ವದ ಗಮನ ಸೆಳೆಯುತ್ತಿದೆ. ಡ್ರಗ್ಸ್‌ ಅಡ್ಡೆಗೆ ಕಾವಲುಗಾರನಂತೆ ಕೆಲಸ ಮಾಡುತ್ತಿದ್ದ ಗಿಳಿಯೊಂದು, ಪೊಲೀಸರ ದಾಳಿ ವೇಳೆ ತನ್ನ ಮಾಲೀಕರಿಗೆ ಎಚ್ಚರಿಕೆ ನೀಡಿ ಸುದ್ದಿಯಾಗಿತ್ತು.

2019ರಲ್ಲಿ ಪಿಯೌಯಿ ಪ್ರದೇಶದಲ್ಲಿದ್ದ ಶಂಕಿತ ಡ್ರಗ್ಸ್‌ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಲು ತೆರಳಿದಾಗ, ಮನೆಯಲ್ಲಿದ್ದ ಗಿಳಿ ಜೋರಾಗಿ “ಅಮ್ಮಾ, ಪೊಲೀಸ್ರು ಬಂದರು!” ಎಂದು ಕೂಗಿ ಮನೆಯವರನ್ನು ಎಚ್ಚರಿಸಲು ಯತ್ನಿಸಿತ್ತು ಎನ್ನಲಾಗಿದೆ.

ಗಿಳಿಯ ಎಚ್ಚರಿಕೆಯಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದರೂ, ಪೊಲೀಸರು ದಾಳಿ ನಡೆಸಿ ಸ್ಥಳವನ್ನು ವಶಕ್ಕೆ ಪಡೆದಿದ್ದರು. ವಿಶೇಷವೆಂದರೆ, ಗಿಳಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು.

ಬಳಿಕ ವಿಚಾರಣೆ ವೇಳೆ ಗಿಳಿಯಿಂದ ಮಾಹಿತಿ ಪಡೆಯಲು ಪ್ರಯತ್ನಿಸಿದಾಗ ಅದು ಸಂಪೂರ್ಣ ಮೌನವಾಗಿತ್ತು. ಸಾಮಾನ್ಯವಾಗಿ ಮಾತನಾಡುವ ಗಿಳಿಯಾಗಿದ್ದರೂ, ಅಪರಿಚಿತರ ಮುಂದೆ ಒಂದು ಮಾತನ್ನೂ ಆಡದೆ ಪೊಲೀಸರನ್ನೇ ಬೆರಗುಗೊಳಿಸಿತ್ತು.

ಸ್ಥಳೀಯ ವರದಿಗಳ ಪ್ರಕಾರ, ಗಿಳಿಗೆ ಅಪರಿಚಿತರೊಂದಿಗೆ ಮಾತನಾಡದಂತೆ ವಿಶೇಷ ತರಬೇತಿ ನೀಡಲಾಗಿತ್ತು. ಹೀಗಾಗಿ ಅದು ತನ್ನ ಮಾಲೀಕರ ವಿರುದ್ಧ ಯಾವುದೇ ಸುಳಿವು ನೀಡಲಿಲ್ಲ.

ನಂತರ ಗಿಳಿಯನ್ನು ಪ್ರಾಣಿಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗಿದ್ದು, ಅದರ ಆರೋಗ್ಯ ಉತ್ತಮವಾಗಿದೆ ಎಂದು ಪಶುವೈದ್ಯರು ದೃಢಪಡಿಸಿದ್ದರು. ಬಳಿಕ ಅದನ್ನು ಮತ್ತೆ ಪ್ರಕೃತಿಗೆ ಬಿಡುವ ಯೋಜನೆಯನ್ನೂ ಅಧಿಕಾರಿಗಳು ರೂಪಿಸಿದ್ದರು.

ಒಮ್ಮೆ ಡ್ರಗ್ಸ್‌ ಅಡ್ಡೆಯ “ಸಿಕ್ರೆಟ್ ಸೆಕ್ಯುರಿಟಿ ಗಾರ್ಡ್” ಆಗಿದ್ದ ಈ ಗಿಳಿಯ ಕಥೆ ಇಂದಿಗೂ ವಿಶ್ವದ ಅತ್ಯಂತ ವಿಚಿತ್ರ ಅಪರಾಧ ಘಟನೆಗಳಲ್ಲಿ ಒಂದಾಗಿ ನೆನಪಾಗುತ್ತಿದೆ.

LEAVE A REPLY

Please enter your comment!
Please enter your name here