ಸಣ್ಣ ಕಾರಣ ದೊಡ್ಡ ದುರಂತ : ತಂದೆಯ ಮಾತಿಗೆ ಮನನೊಂದು ಯುವತಿಯ ಆತ್ಮಹತ್ಯೆ

0
67

ಚಿಕ್ಕಮಗಳೂರು : ಸಣ್ಣ ವಿಷಯದಿಂದ ಆರಂಭವಾದ ಮನೆಯ ಜಗಳವು ದುರಂತ ಅಂತ್ಯ ಕಂಡಿರುವ ಮನಕಲಕುವ ಘಟನೆ ಚಿಕ್ಕಮಗಳೂರಿನಲ್ಲಿ ವರದಿಯಾಗಿದೆ. ಅಡುಗೆ ವಿಷಯಕ್ಕೆ ಸಂಬಂಧಿಸಿದಂತೆ ತಂದೆ ಬೈದಿದ್ದರಿಂದ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತಳನ್ನು ಸೌಜನ್ಯಾ ಪೂಜಾರಿ (22) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಸಾಂಬಾರ್ ಮಾಡಿಲ್ಲ ಎಂಬ ಕಾರಣಕ್ಕೆ ತಂದೆ ಮಗಳಿಗೆ ಬೈದಿದ್ದಾರೆ ಎನ್ನಲಾಗಿದ್ದು, ಆ ಮಾತಿನಿಂದ ತೀವ್ರವಾಗಿ ಮನನೊಂದು ಯುವತಿ ಆವೇಶದಲ್ಲಿ ಈ ತೀವ್ರ ನಿರ್ಧಾರ ಕೈಗೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ನಡೆಯುವ ಕುಟುಂಬದ ವಿಚಾರವೇ ಇಂತಹ ದುರಂತಕ್ಕೆ ಕಾರಣವಾಗಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

LEAVE A REPLY

Please enter your comment!
Please enter your name here