-ಮಂದಾರ ರಾಜೇಶ್
ನೂರು ವರ್ಷಗಳ ಸುದೀರ್ಘ ಶೈಕ್ಷಣಿಕ ಪಯಣದ ನೆನಪಿನಲ್ಲಿ, ಪಡುಕೋಣಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಶಾಲಾ ಕಟ್ಟಡ ನಿಧಿಯ ನೆರವಿಗಾಗಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ.
ಈ ಮಹತ್ಕಾರ್ಯಕ್ಕೆ ಆಸರೆಯಾಗಲು ಬೈಲೂರಿನ ಪ್ರಸಿದ್ಧ ‘ಚೈತನ್ಯ ಕಲಾವಿದರು’ ತಂಡದವರಿಂದ ಈ ವರ್ಷದ ಅತ್ಯಂತ ಆಕರ್ಷಕ ಹಾಗೂ ತುಳು ಹಾಸ್ಯ ನಾಟಕ “ಊರು ಬೋಡು ಪುದರ್ ಬೊಡ್ಚಿ” ಪ್ರದರ್ಶನಗೊಳ್ಳಲಿದೆ.
ಈ ನಾಟಕಕ್ಕೆ ಪ್ರಸನ್ನ ಶೆಟ್ಟಿ ಬೈಲೂರು ಅವರು ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದು, ಕಿರಣ್ ಗರಡಿಮಜಲು ಅವರು ಸಂಗೀತ ನೀಡಿದ್ದಾರೆ.
ಕಾರ್ಯಕ್ರಮದ ವಿವರಗಳು
ಈ ಹಾಸ್ಯ ನಾಟಕ ಪ್ರದರ್ಶನವು 2026ರ ಅಕ್ಟೋಬರ್ 24ರ ಶನಿವಾರದಂದು ಸಂಜೆ 6:30ಕ್ಕೆ ಮೂಡುಬಿದಿರೆಯ ಕನ್ನಡ ಭವನದಲ್ಲಿ ನಡೆಯಲಿದೆ.
ಟಿಕೆಟ್ ವಿವರಗಳು
ಕಾರ್ಯಕ್ರಮದ ಪ್ರವೇಶಕ್ಕಾಗಿ ಸಾಮಾನ್ಯ ಟಿಕೆಟ್ ದರವನ್ನು ಒಬ್ಬರಿಗೆ ₹500/- ಮತ್ತು ₹1000/- ಹಾಗೂ ಗೌರವ ಪ್ರವೇಶದ ದರವನ್ನು ಇಬ್ಬರಿಗೆ ₹2500/- ಎಂದು ನಿಗದಿಪಡಿಸಲಾಗಿದೆ.
ಈ ಟಿಕೆಟ್‌ಗಳು ಮೂಡುಬಿದಿರೆಯ ಹೋಟೆಲ್ ಜಯಶ್ರೀ, ಶಿರ್ತಾಡಿಯ ಕೆ.ಸಿ. ಫರ್ನಿಚರ್ ಮತ್ತು ಹೋಟೆಲ್ ಜಯಶ್ರೀ ಹಾಗೂ ಕೋಣಾಜೆಯ ಕೋಟ್ಯಾನ್ ಕಾಂಪ್ಲೆಕ್ಸ್‌ನಲ್ಲಿ ಲಭ್ಯವಿರುತ್ತವೆ.
ಅಕ್ಷರ ಕಲಿಸಿದ ಶಾಲೆಯ ಅಭಿವೃದ್ಧಿಗೆ ನಗೆಯೊಂದಿಗೆ ನವ ನಿರ್ಮಾಣದ ಸಂಕಲ್ಪ ಮಾಡಿ, ಈ ನಾಟಕವನ್ನು ವೀಕ್ಷಿಸುವ ಮೂಲಕ ಶಾಲೆಯ ಸುಸಜ್ಜಿತ ಕಟ್ಟಡ ನಿರ್ಮಾಣದ ಮಹತ್ಕಾರ್ಯಕ್ಕೆ ಬೆಂಬಲ ನೀಡಬೇಕಾಗಿ ಕಾರ್ಯಕ್ರಮದ ಸಂಘಟಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಈ ಮೂಲಕ ವಿನಂತಿಸಿದ್ದಾರೆ.

