ಆ.2ರಂದು ತೋಕೂರಿನಲ್ಲಿ ‘ಆಟಿದ ನೆಂಪು–2026’

0
7

ತೋಕೂರು, ಆ. 1: ಮೇರಾ ಯುವ ಭಾರತ್ (ಮೈ ಭಾರತ್), ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.), ತೋಕೂರು–ಹಳೆಯಂಡಿ ಇವರ ಸಂಯುಕ್ತ ಆಶ್ರಯದಲ್ಲಿ ‘ಆಟಿದ ನೆಂಪು–2026’ ಕಾರ್ಯಕ್ರಮವು ಆಗಸ್ಟ್ 2ರಂದು (ಭಾನುವಾರ) ಬೆಳಿಗ್ಗೆ 10.45 ಗಂಟೆಗೆ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ರೋಟರಿ ಮುಲ್ಕಿ ಹಾಗೂ ತುಳು ವರ್ಲ್ಡ್ ಫೌಂಡೇಶನ್ ಕಟೀಲು ಅಧ್ಯಕ್ಷೆ ರೋ. ಭಾನುಮತಿ ಕಕ್ವ ಗುತ್ತು ಉದ್ಘಾಟಿಸಿ ಮಾತನಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ (ರಿ.) ಕದ್ರಿ ಹಿಲ್ಸ್, ಮಂಗಳೂರು ಅಧ್ಯಕ್ಷ ಲಯನ್ ಸುಧಾಕರ್ ಶೆಟ್ಟಿಗಾರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹರೀಶ್ ಶೆಟ್ಟಿ ಬೈಲಾಗುತ್ತು ಪಂಜ (ಕೃಷಿಕರು) ಹಾಗೂ ಸಿ.ಎ. ಶ್ರವಣ್ ಕುಮಾರ್, ಚಾರ್ಟಡ್‌ ಅಕೌಂಟೆಂಟ್, ಮಂಗಳೂರು ಭಾಗವಹಿಸಲಿದ್ದಾರೆ.

ತುಳುನಾಡಿನ ಸಾಂಪ್ರದಾಯಿಕ ಆಟಿ ತಿಂಗಳ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಗಣ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.) ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಆಹ್ವಾನಿಸಿದ್ದಾರೆ.