ಕೂಟ ಮಹಾ ಜಗತ್ತು ಕಾಟಿಪಳ್ಳ ಕೃಷ್ಣಾಪುರ ಅಂಗ ಸಂಸ್ಥೆಯಿಂದ ಆಟಿ ಕೂಟ : ಮನೋರಮಾ ಹೊಳ್ಳರಿಗೆ ಸನ್ಮಾನ

0
14

ಸುರತ್ಕಲ್ : ಕೂಟ ಮಹಾ ಜಗತ್ತು ಕಾಟಿಪಳ್ಳ–ಕೃಷ್ಣಾಪುರ ಅಂಗ ಸಂಸ್ಥೆಯ ವತಿಯಿಂದ ಕಾಟಿಪಳ್ಳದ ಶ್ರೀ ಗುರು ನರಸಿಂಹ ಸಭಾಭವನದಲ್ಲಿ ಸಂಪ್ರದಾಯಬದ್ಧ ಆಟಿ ಕೂಟ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದಾಶಿವ ಐತಾಳ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ರಮೇಶ್ ಹೊಳ್ಳ ಅವರ ಪತ್ನಿ ಮನೋರಮಾ ಹೊಳ್ಳ ಅವರನ್ನು ಸಮಾಜ ಸೇವೆ ಹಾಗೂ ಸಂಘಟನಾ ಚಟುವಟಿಕೆಗಳಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತು. ವೇದಮೂರ್ತಿ ವೆಂಕಟರಮಣ ಐತಾಳ, ಸಂಸ್ಥೆಯ ಪೂರ್ವಾಧ್ಯಕ್ಷ ಶಾಮ್ ಸುಂದರ್ ರಾವ್, ಮಹಿಳಾ ವೇದಿಕೆ ಅಧ್ಯಕ್ಷೆ ಸುಶೀಲಾ ಎಸ್. ರಾವ್, ದತ್ತಿ ಮಂಡಳಿ ಅಧ್ಯಕ್ಷ ಪುರುಷೋತ್ತಮ ರಾವ್ ಹಾಗೂ ಜಿ. ನಾರಾಯಣ ನಾವಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಆಟಿ ತಿಂಗಳ ಸಂಪ್ರದಾಯ, ಸಂಸ್ಕೃತಿ ಹಾಗೂ ಸಮುದಾಯದ ಬಾಂಧವ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸದಸ್ಯರು ಹಾಗೂ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.