ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ನಡೆದ ಆಟಿಡೊಂಜಿ ದಿನ

0
8

ಧುನಿಕ ಅಹಾರ ಪದ್ದತಿಯಿಂದ ಹಿಂದಿನ ಕಾಲದ ಆರೋಗ್ಯಕರ ಅಹಾರ ಪದ್ದತಿ ನಶಿಸಿ ಹೋಗಿದೆ ಇಂದಿನ ಅಧುನಿಕ ಜೀವನ ಶ್ಯೆಲಿಯಲ್ಲಿ ನಮ್ಮ ಬೇರುಗಳನ್ನು ಮರೆಯದೆ ಮಕ್ಕಳಿಗೆ ತುಳುನಾಡಿನ ಸಂಸ್ಕ್ರತಿ ಮತ್ತು ಮೌಲ್ಯಗಳನ್ನು ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ:- ದಯಾನಂದ್ ಕತ್ತಲ್ ಸಾರ್


ಹೆಜಮಾಡಿ ‘ ‘ತುಳುನಾಡಿನ ಇತಿಹಾಸ, ಆಟಿ ತಿಂಗಳ ಮಹತ್ವ, ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳು, ಜಾನಪದ ಕಲೆಗಳು, ತುಳು ಭಾಷೆಯ ವೈಭವ ಹಾಗೂ ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಅಗತ್ಯತೆ ಇದೆ..ಇಂದಿನ ಆಧುನಿಕ ಜೀವನಶೈಲಿಯಲ್ಲಿ ನಮ್ಮ ಬೇರುಗಳನ್ನು ಮರೆಯದೆ, ಮಕ್ಕಳಿಗೆ ತುಳುನಾಡಿನ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಆಟಿಡೊಂಜಿ ದಿನದಂತಹ ಕಾರ್ಯಕ್ರಮಗಳು ಕೇವಲ ಸಂಭ್ರಮಾಚರಣೆಗಳಲ್ಲ, ನಮ್ಮ ಸಂಸ್ಕೃತಿಯನ್ನು ಜೀವಂತವಾಗಿಡುವ ಸಾಮಾಜಿಕ ಚಳವಳಿಗಳಾಗಿವೆ .ತುಳುನಾಡಿನ ಆಟಿ ತಿಂಗಳಲ್ಲಿ ಕೃಷಿಗೆ ಪ್ರಾಮುಖ್ಯತೆ ನೀಡುವುದು ಹಾಗೂ ಜನ್ಮ ಕೊಟ್ಟ ಮತ್ತು ಸಂಸ್ಕಾರ ತಿಳಿಸಿದ ಅಗಲಿದ ಹಿರಿಯರನ್ನು ನೆನಪು ಮಾಡುವ ಕಾಲ ಆಟಿ ತಿಂಗಳು. ಆದ್ದರಿಂದ ಈ ಸಮಯದಲ್ಲಿ ಯಾವುದೇ ದ್ಯೆವಾರಾಧನೆ ಹಾಗೂ ಶುಭಸಮಾರಂಭಗಳಿಗೆ ವಿರಾಮ ನೀಡಲಾಗಿತು. ಹೆತ್ತವರು ಮಕ್ಕಳಿಗೆ ಆತ್ಮಸ್ಥೈರ್ಯದ ಪಾಠ ಕಲಿಸಬೇಕು ಹೊರತು ದ್ವೇಷ ಸಾಧಿಸುವ ಪಾಠ ಕಲಿಸಬಾರದು. ಸಮಾಜವನ್ನು ಪ್ರೀತಿಸುವ ಪಾಠಗಳಿಸಬೇಕು. ಇಲ್ಲದೇ ಹೋದರೇ ಆತ್ಮಹತ್ಯೆಗಳು ಕೊಲೆಗಳು ಜಾಸ್ತಿಯಾಗುತ್ತದೆ. ಆಧುನಿಕ ಅಹಾರ ಪದ್ದತಿಯಿಂದ ಹಿಂದಿನ ಕಾಲದ ಆರೋಗ್ಯಕರ ಅಹಾರ ಪದ್ದತಿ ನಶಿಸಿ ಹೋಗಿದೆ…” ಎಂದು ತುಳು ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷರಾದ ದಯಾನಂದ್ ಕತ್ತಲ್ ಸಾರ್ ಹೇಳಿದರು..

ಅವರು ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ ಭಾನುವಾರ ಹೆಜಮಾಡಿಯ ಬಿಲ್ಲವರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾದ ಆಟಿಡೊಂಜಿ ದಿನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು..

ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಕಾರ್ಯಕ್ರಮವನ್ನು ಉದ್ಘಾಟಿಸಿ “ಆಟಿಡೊಂಜಿ ದಿನವು ಕೇವಲ ಒಂದು ಆಚರಣೆಯಲ್ಲ, ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಸಮಾಜದ ಒಗ್ಗಟ್ಟನ್ನು ಬಿಂಬಿಸುವ ಹಬ್ಬವಾಗಿದೆ ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ನಮ್ಮ ಪರಂಪರೆಯನ್ನು ಪರಿಚಯಿಸುವ ಸೇತುವೆಯಾಗಬೇಕು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಪ್ರೀತಿ, ವಿಶ್ವಾಸ ಹಾಗೂ ಒಗ್ಗಟ್ಟನ್ನು ಬೆಳೆಸುತ್ತವೆ. ಇಂದಿನ ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ವ್ಯಸನ ಸಮಾಜಕ್ಕೆ ಗಂಭೀರ ಸವಾಲಾಗಿದ್ದು, ಪೋಷಕರು, ಸಮಾಜದ ಮುಖಂಡರು ಹಾಗೂ ಯುವಕರು ಒಗ್ಗಟ್ಟಿನಿಂದ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು . ಜೊತೆಗೆ, ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಇಂತಹ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುವುದಾಗಿ ಹೇಳಿದರು,
ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪ್ರಬೋಧ್ ಚಂದ್ರ ಹೆಜ್ಮಾಡಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವನೆಗ್ಯೆದರು.
ಮಂಗಳೂರಿನ ಸಿಸ್ಲಿಂಗ್ ಗಾಯ್ಸ್ ತಂಡದವರಿಂದ ತುಳುನಾಡ ಜಾನಪದ ಸಾಂಸ್ಕೃತಿಕ ವೈಭವ ಹಾಗೂ ತುಳುನಾಡ ಜಾನಪದ ಸಂಗೀತ ಕಾರ್ಯಕ್ರಮವನ್ನು ಸಹನಾ ಪಡುಬಿದ್ರಿ ಮತ್ತು ಸುಪ್ರೀತಾ ಪಣಿಯೂರು ನಡೆಸಿಕೂಟ್ಟರು..
ಈ ಸಂದರ್ಭದಲ್ಲಿ ಗಜಾನನ ಕ್ರಿಕೆಟರ್ಸ್ ತುಳು ಚಲನಚಿತ್ರದ ಬಾಲ ನಾಯಕನಟ ಮಾಸ್ಟರ್ ಸ್ಕಂದ ದಯಾಂದ್ ಹೆಜ್ಮಾಡಿ ಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಂಯೋಜಕರಾದ ದೀಕ್ಷಾ ಕೆ. ಹಾಗೂ ವಿಶಾಲ್ ಬಂಗೇರ ರವರನ್ನು ಗೌರವಿಸಲಾಯಿತು.. ಸಾರ್ವಜನಿಕರಿಗೆ ಆಟಿ ತಿಂಗಳ ಸಂಪ್ರದಾಯಿಕ ವಿಶೇಷ ತಿಂಡಿ ತಿನಸುಗಳನ್ನು ಊಣ ಬಡಿಸಲಾಯಿತು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, , ಹೆಜಮಾಡಿ ಶ್ರೀ ಮಹಾಲೀಗೇಶ್ವರ ದೇವಸ್ಥಾನದ ಮುಕ್ತೇಸ್ತರಾದ ದಯಾನಂದ್ ಹೆಜ್ಮಾಡಿ , ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜ್ಮಾಡಿ , ಉದ್ಯಮಿ ರಾಲ್ಪಿ ಡಿ ಕೋಸ್ತಾ , ಪಕ್ಷದ ನಾಯಕರಾದ ಶಿವರಾಮ ಶೆಟ್ಟಿ, ಅಬ್ದುಲ್ ಅಜೀಜ್ ಹೆಜಮಾಡಿ, ಸೌಜನ್ ಕುಮಾರ್ ಸಾಲಿಗ್ರಾಮ, ಹಾಜಿ ಸ್ಯೆಯದ್ ಅಲಿ, ಹರೀಶ್ಚಂದ್ರ ಹೆಜ್ಮಾಡಿ ಹಾಗೂ ಜಯಶ್ರೀ ಶರತ್ ಉಪಸ್ಥಿತರಿದ್ದರು.
ಪ್ರಭೋಧ್ ಚಂದ್ರ ಹೆಜ್ಮಾಡಿ ಸ್ವಾಗತಿಸಿ , ಸಂತೋಷ್ ಪಡುಬಿದ್ರಿ ನಿರೂಪಿಸಿದರು.ಸುಧೀರ್ ಕರ್ಕೇರ ವಂದಿಸಿದರು