ಟೀಮ್ ಮಲೆನಾಡು ಹ್ಯೂಮೇನಿಟೆರಿಯನ್ ಟ್ರಸ್ಟ್ ಬೆಳ್ವೆ ನೂತನ ಅಧ್ಯಕ್ಷರಾಗಿ ಅಬ್ದುಲ್ ಶುಕುರ್ ಬೆಳ್ವೆ ಆಯ್ಕೆ

0
13

ಟೀಮ್ ಮಲೆನಾಡು ಹ್ಯೂಮೇನಿಟೆರಿಯನ್ ಟ್ರಸ್ಟ್ (ರಿ)ಬೆಳ್ವೆ ಇದರ ಸರ್ವ ಟ್ರಸ್ಟಿಗಳ ವಾರ್ಷಿಕ ಸಭೆಯು ಇತ್ತೀಚಿಗೆ ಬೆಳ್ವೆ ಶ್ರೀ ಸಂದೇಶ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು.

ನೂತನ ಸಾಲಿನ ಅಧ್ಯಕ್ಷರಾಗಿ ಅಬ್ದುಲ್ ಶುಕುರ್ ಬೆಳ್ವೆ ಆಯ್ಕೆಯಾದರು. ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಮಧ್ಯಮ ಕಾರ್ಯದರ್ಶಿಯಾಗಿ, ಎನ್ ಎನ್ ಓ ಹೆಬ್ರಿ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಎನ್ ಎಸ್ ಅಕಾಡೆಮಿ ಹಾಗೂ ಕಮ್ಯೂನಿಟಿ ಸೆಂಟರ್ ಕಾರ್ಕಳ ಇದರ ಕಾರ್ಯಕಾರಿ ಸಮಿತಿ ಸದಸ್ಯರು, ಹಿದಾಯತುಲ್ ಉಲೂಮ್ ಅರಬಿ ಮದ್ರಸ ಕಮಿಟಿ ಬೆಳ್ವೆ ಇದರ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಹಿಂದೆ ಉಡುಪಿ ಜಿಲ್ಲಾ ಮುಸ್ಲೀಮ್ ಒಕ್ಕೂಟ ಕುಂದಾಪುರ ತಾಲೂಕು ಜೊತೆ ಕಾರ್ಯದರ್ಶಿಯಾಗಿ, ನಮ್ಮ ನಾಡ ಒಕ್ಕೂಟ ಹೆಬ್ರಿ ತಾಲೂಕು ಪ್ರದಾನ ಕಾರ್ಯದರ್ಶಿಯಾಗಿ , ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಜಿಲ್ಲಾ ಉಪಾಧ್ಯಕ್ಷರಾಗಿ , ಇಸ್ಲಾಮಿಕ್ ಯೂತ್ ಫೆಡರೇಶನ್ ಬೆಳ್ವೆ ಇದರ ಕಾರ್ಯದರ್ಶಿಯಾಗಿ ಹಾಗೂ ಅಧ್ಯಕ್ಷರಾಗಿ, ಝಕಾತ್ ಸರ್ವೀಸ್ ಫೌಂಡೇಶನ್ ಬೆಳ್ವೆ ಇದರ ಕೋಶಾಧಿಕಾರಿಯಾಗಿ, ಉಪಾಧ್ಯಕ್ಷರಾಗಿ , ಹಾಯ್ ಫ್ರೆಂಡ್ಸ್ ಕ್ಲಬ್ ಅಲ್ಬಾಡಿ ಇದರ ಕಾರ್ಯದರ್ಶಿಯಾಗಿ, ನವೋದಯ ಸ್ವ ಸಹಾಯ ಸಂಘಗಳ ಒಕ್ಕೂಟ ಬೆಳ್ವೆ ವಲಯ ಇದರ ಅಧ್ಯಕ್ಷರಾಗಿ, ಪ್ರಕೃತಿ ನವೋದಯ ಸ್ವಸಹಾಯ ಸಂಘ ಅಲ್ಬಾಡಿ ಇದರ ಕೋಶಾಧಿಕಯಾಗಿ ಸೇವೆ ಸಲ್ಲಿಸಿರುತ್ತಾರೆ.