ಕಾಪು : ಅನಿವಾಸಿ ಭಾರತೀಯ ಉದ್ಯಮಿ ಸಮಾಜ ಸೇವಕ ಹನೀಫ್ ಮೂಳೂರು (ಕೆ.ಎಸ್.ಎ)ಅಭಿಮಾನಿ ಬಳಗದಿಂದ ಬದ್ರಿಯ ಜುಮ್ಮಾ ಮಸ್ಜಿದ್ (ರಿ.)ಮಲ್ಲಾರು -ಮಜೂರು ಅಧ್ಯಕ್ಷ ಸಮಾಜ ಸೇವಕ ಡಾ.ಎಂ ಫಾರೂಕ್ ಚಂದ್ರನಗರ ಇವರಿಗೆ ಬಿ.ಜೆ.ಎಂ ಮಿಲಾದುನ್ನಬಿ ಕಾರ್ಯಕ್ರಮದ ವೇದಿಕೆಯಲ್ಲಿ ಕಳೆದ 2 ವರ್ಷದಲ್ಲಿ ಮಸ್ಜಿದ್ ನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಮಸ್ಜಿದ್ ಇನ್ನಷ್ಟು ಅಂದ ಚಂದ ಹೆಸರುವಾಸಿಯಾಗಲು ಕಾರಣರಾದ ತಮಗೆ ಅಭಿವೃದ್ಧಿ ರತ್ನ ಪದವಿ ಬೆಳ್ಳಿಯ ಪದಕ ಪುರಸ್ಕಾರವನ್ನು ಬಿ.ಜೆ.ಎಂ ಮುದರೀಸ್ ಬಹು|ಸಯ್ಯಿದ್ ಮುಹಮ್ಮದ್ ಶಹಿರ್ ಅಲ್ ಹಿಕಮಿ ಅಲ್ ಹಾಶಿಮಿ ಹಾಗೂ ಬಿ.ಜೆ.ಎಂ ಕತೀಬ್ ಎಂ.ಕೆ ಅಬ್ದುಲ್ ರಶೀದ್ ಸಖಾಫಿ ಅಲ್- ಖಾಮಿಲ್ ರವರು ಪ್ರದಾನಿಸಿದರು
ಕರ್ನಾಟಕ ಸರಕಾರದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಚೆನ್ನೈ ಯೂನಿವರ್ಸಿಟಿ ವತಿಯಿಂದ ಡಾಕ್ಟರೆಟ್ ಪದವಿ , ಯೂತ್ ಐಕಾನ್ ಅಂತರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ನೂರಾರು ಸಂಘ ಸಂಸ್ಥೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರಿಗೆ ಹನೀಫ್ ಮೂಳೂರು ತಂಡದ ಸಾಹಿತಿಯೂ ಆದ ಅಶ್ರಫ್ ಕರಂದಾಡಿ ಇವರ ಸೇವೆ ಮತ್ತಷ್ಟು ಮುಂದುವರಿಯಲು ದೇವರು ಅವಕಾಶ ಮಾಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಸ್ಜಿದ್ ಉಪಾಧ್ಯಕ್ಷರಾದ ಹಸನಬ್ಬ ಮಜೂರು ಶಾಬಾನ್ ಕರಂದಾಡಿ,ರಝಕ್ ಕೊಪ್ಪ, ಎಂ.ಹೆಚ್ ಅಬ್ದುಲ್ ಹಮೀದ್ ಮಜೂರು, ಹಾಜಬ್ಬ ಮೊಯಿದಿನ್ ಕರಂದಾಡಿ, ಯು. ಎ ರಶೀದ್ ಕಾಪು, ಶಂಶುದ್ದಿನ್ ಇಸ್ಮಾಯಿಲ್ ಕರಂದಾಡಿ,ರಝಕ್ ಕೊಪ್ಪಲ್ ತೋಟ,ರಜಬ್ ಕರಂದಾಡಿ ಬಿ.ಜೆ.ಎಂ ಪ್ರ.ಕಾರ್ಯದರ್ಶಿ ಅಶ್ರಫ್ ಮೂಸ,ಕೋಶಧಿಕಾರಿ ಪಿ.ಎಂ ಇಬ್ರಾಹಿಂ ಅನಿವಾಸಿ ಉದ್ಯಮಿ ಹನೀಫ್ ಮಜೂರು,ಅಬ್ದುಲ್ ರೆಹಮನ್ ಕೊಂಬಗುಡ್ಡೆ, ಶಮೀಮ್ ಕೆ. ಪಿ, ಫಯಾಜ್ ಹಾಜಿ ಕಿನ್ನಿಗೋಳಿ, ಹಾಜಿ ಅಬ್ದುಲ್ ರಝಕ್ ಕೊಂಬಗುಡ್ಡೆ,ನೆಹಮತುಲ್ಲ ಅಚ್ಚಲ್, ಅಬ್ದುಲ್ಲ ಚಂದ್ರನಗರ, ಹಸನಬ್ಬ ಗುಡ್ಡೆಕೇರಿ,ಹಸನಬ್ಬ ಫಕಿರಣಕಟ್ಟೆ ಮಸ್ಜಿದ್ ಅಂಗ ಸಂಸ್ಥೆಗಳಾದ ಟಿ.ಐ.ವೈ.ಎ ಅಧ್ಯಕ್ಷ ಸೌಕತ್ ಬಾವ, ಸಿರಾಜುಲ್ ಹುದಾ ದಫ್ ಸಮಿತಿ ಅಧ್ಯಕ್ಷ ಅಬ್ದುರಹೀಮ್, ಸ್ವಲಾತ್ ಸಮಿತಿ ಅಧ್ಯಕ್ಷ ಮೊಯಿದಿನ್ ಕೊಂಬಗುಡ್ಡೆ ಹಾಗೂ ಮಸ್ಜಿದ್ ಉಸ್ತಾದರುಗಳು ಜಮಾತ್ ಬಾಂದವರು ಇನ್ನಿತರರು ಉಪಸ್ಥಿತರಿದ್ದರು.

