Friday, June 13, 2025
HomeUncategorizedಸಾಧನೆಗೆ ಶ್ರಮ, ತಾಳ್ಮೆ, ಶಕ್ತಿ ಬೇಕು : ಡಾ.ನಾಗರಾಜ ಬೈರಿ

ಸಾಧನೆಗೆ ಶ್ರಮ, ತಾಳ್ಮೆ, ಶಕ್ತಿ ಬೇಕು : ಡಾ.ನಾಗರಾಜ ಬೈರಿ


ದಾವಣಗೆರೆ: ಸಾಧನೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಸಾಧನೆ ಮಾಡಲು ಬಹಳಷ್ಟು ಶ್ರಮ, ತಾಳ್ಮೆ, ಶಕ್ತಿ ಬೇಕು. ಅಷ್ಟು ಸುಲಭವಾಗಿ ಗುರುತಿಸಿಕೊಳ್ಳುವುದು ಸಾಧ್ಯವಿಲ್ಲ. ಹಿಂದೆ ನಮ್ಮ ಜನಸಂಖ್ಯೆ ಕಡಿಮೆ ಇದ್ದಾಗ ಸಾಧನೆ ನಮ್ಮ ಮುಂದೆ ಬರುತ್ತಿತ್ತು. ಈ ಬರುವುದು ಕಷ್ಟ. ಅಂತಹದರಲ್ಲಿ ನಿಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದು ಪುಣ್ಯದ ಕೆಲಸವಾಗಿದೆ. ಸರ್ಕಾರದವರು ಅಂತಹ ಸಾಧಕರನ್ನು ಗುರುತಿಸಿ ಮಾಡಬೇಕಾದ ಗೌರವವನ್ನು ಸಂಘ ಸಂಸ್ಥೆಗಳು ಮಾಡುತ್ತಿದ್ದು, ನಿಮ್ಮಗಳ ಸಾಧನೆ ಇನ್ನೊಬ್ಬರಿಗೆ ಸ್ಪೂರ್ತಿ ಆಗಬೇಕು, ನಿಮ್ಮ ಕೆಲಸಕ್ಕೆ ಮತ್ತಷ್ಟು ಜವಾಬ್ದಾರಿಗಳನ್ನು ತರಲಿ ಎಂದು ಮೈಸೂರು ಜಿಲ್ಲೆ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ಡಾ.ನಾಗರಾಜ ಬೈರಿ ಆಶಿಸಿದರು.
ನಗರದ ಗಡಿಯಾರ ಕಂಬದ ಬಳಿ ಇರುವ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಾಲಿಗ್ರಾಮ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ 70ನೇ ವರ್ಷದ ಕನ್ನಡ ನಿತ್ಯೋತ್ಸವ ಪ್ರಯುಕ್ತ ನಡೆದ ಸರಸ್ವತಿ ಸಾಧಕ ಸಿರಿ ರಾಷ್ಟçಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ನಾವು ಸರ್ಕಾರಿ ಶಾಲೆಯಲ್ಲಿ ನೋಂದಣಿ ನೋಡಿದಾಗ ನೂರು ಮಕ್ಕಳು ದಾಖಲಾಗುವುದು ಹೆಚ್ಚು, ನಮ್ಮ ಮೈಸೂರು ಕಡೆಗೆ ಇದನ್ನು ನಾವು ನೋಡುತ್ತಿದ್ದೇವೆ. ಆದರೆ ಡಾ.ನಾಗೇಶ ಸಂಜೀವ ಕಿಣಿಯವರ ಸರ್ಕಾರಿ ಶಾಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇದು ನಿಜಕ್ಕೂ ಆಶ್ಚರ್ಯಕರ ಸಂಗತಿ ಎಂದರು. ಅವರ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ನೇತೃತ್ವದಲ್ಲಿ ಈ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಸAಘ ಸಂಸ್ಥೆಗಳ ಸೇವಾ ಕಾರ್ಯಗಳನ್ನು ನಾವು ಭೂಕಂಪ, ಚಂಡಮಾರುತ, ಖಾಯಿಲೆಗಳು ಹರಡುವಂತಹ ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ನೋಡಬೇಕು. ಸಂಸಾರ, ಆಸ್ತಿಪಾಸ್ತಿಗಳು ಹಾಳಾಗುತ್ತವೆ. ಅಂತಹ ಸಂದರ್ಭದಲ್ಲಿ ಅವರಿಗೆ ಅವಶ್ಯಕವಾಗಿರುವಂತಹ ವಸ್ತುಗಳನ್ನು ನೀಡಲು ಮುಂದಾಗುತ್ತಾರೆ. ಅವರು ನಮಗೆ ಸಾಕು ಬೇಡ ವಾಪಾಸು ತೆಗೆದುಕೊಂಡು ಹೋಗಲು ಹೇಳುತ್ತಾರೆ. ಅಷ್ಟು ಸಂಘ ಸಂಸ್ಥೆಗಳು ಪರೋಪಕಾರಕ್ಕೆ ಮುಂದಾಗಿರುತ್ತವೆ.
ನಮ್ಮ ಭಾರತ ಎಷ್ಟೇ ಪ್ರಾಕೃತಿಕ ವಿಕೋಪ ಆದರೂ ಕೂಡಾ ಅದು ಸರಿಮಾಡಿಕೊಳ್ಳುವಂತ ಶಕ್ತಿಯನ್ನು ಹೊಂದಿದೆ. ಕೋವಿಡ್ ಸಂದರ್ಭದಲ್ಲಿ ಲಸಿಕೆಯನ್ನು ಕೊಡುವಂತಹ ಕೆಲಸವನ್ನು ನಮ್ಮ ಭಾರತ ದೇಶ ಮಾಡಲು ಮುಂದಾಯಿತು. ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು ಇರುವುದರಿಂದ ನಮ್ಮ ಭಾರತ ಮುಂದುವರೆಯಲು ಸಾಧ್ಯವಾಗಿದೆ ಎಂದರು.
ಮೈಸೂರಿನ ಸಾಮಾಜಿಕ ಸಾಧಕ ಡಾ.ಜಿ.ಗಂಗಾಧರಪ್ಪ ಮಾತನಾಡಿ, ಅಂದು ಇದ್ದ ಮಾನವೀಯ ಮೌಲ್ಯಗಳು ಇಂದಿನ ಪೀಳೀಗೆಯಲ್ಲಿ ಬರುವ ಮಾನವೀಯ ಮೌಲ್ಯಗಳು ಬಹುಪಾಲು ಕುಸಿಯುತ್ತಿವೆ. ಇಲ್ಲಿ ಬಂದಿರುವ ಸಾಧಕರು ಹೆಚ್ಚಾಗಿ ಶಿಕ್ಷಣ ಸಂಸ್ಥೆ ಸೇರಿದಂತೆ ಅನೇಕ ವಿಭಾಗಗಳಲ್ಲಿ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿ ಇಂದು ಸಾಧಕರಾಗಿ ಇಲ್ಲಿ ಗೌರವ ಸ್ವೀಕರಿಸುತ್ತಿದ್ದೀರಿ. ನಮ್ಮಿಂದ ಪ್ರತಿಫಲ ಪಡೆದವರು ಎಂದಿಗೂ ಮರೆಯುವುದಿಲ್ಲ. ಅವರೂ ಸಹಾ ಇಂತಹ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಪ್ರತಿಷ್ಠಾನದ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ.ನಾಗೇಶ ಸಂಜೀವ ಕಿಣಿ, ಮುಂಡಗೋಡದ ಕನ್ನಡ ಉಪನ್ಯಾಸಕಿ ಡಾ.ನಾಗರತ್ನ ಎಸ್.ಶೆಟ್ಟಿ, ಶೈಕ್ಷಣಿಕ ಸಾಧಕಿ ಸಂಗೀತಾ ಪ್ರಸನ್ನ ನಾಡಿಗ್, ವಿದುಷಿ ಆಶಾ ಅಡಿಗ ಆಚಾರ್ಯ(ಅಮೇರಿಕ), ಗೌರವಾಧ್ಯಕ್ಷೆ ಜ್ಯೋತಿ ಗಣೇಶ ಶೆಣೈ, ಕಲಾಕುಂಚ ಅಧ್ಯಕ್ಷ ಕೆ.ಎಚ್.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಪ್ರಧಾನ ಕಾರ್ಯದರ್ಶಿ ಶ್ರೀಪತಿ ರಾಘವೇಂದ್ರ ಶೆಣೈ, ಹಾಗೂ ಪದಾಧಿಕಾರಿಗಳು ಇದ್ದರು.
ಶ್ರೀಮತಿ ಚಂದ್ರಶೇಖರ ಅಡಿಗ ಪ್ರಾರ್ಥಿಸಿದರೆ, ಪುಷ್ಪ ಮಂಜುನಾಥ ಸ್ವಾಗತಿಸಿದರು. ಶೈಲಾ ವಿನೋದ ದೇವರಾಜ ಕಾರ್ಯಕ್ರಮ ನಿರೂಪಿಸಿದರೆ, ಡಿ.ಎಚ್.ಚನ್ನಬಸಪ್ಪ ವಂದಿಸಿದರು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿವಿಧ ಕ್ಷೇತ್ರಗಳ 190 ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

RELATED ARTICLES
- Advertisment -
Google search engine

Most Popular