ಸಿನಮಾದಲ್ಲಿ ಚಾನ್ಸ್‌ ಸಿಗದಿದ್ದಕ್ಕೆ ಮನನೊಂದು ನಟ ಆತ್ಮಹತ್ಯೆ

0
128

ಸಿನಿಮಾದಲ್ಲಿ ಚಾನ್ಸ್ ಸಿಗದಿದ್ದಕ್ಕೆ ಮನನೊಂದು ಮರಾಠಿ ಚಲನಚಿತ್ರದ ನಟ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ತುಷಾರ್ ಘಡಿಗಾಂಪ್ಟರ್ (32) ಆತ್ಮಹತ್ಯೆ ಮಾಡಿಕೊಂಡ ನಟ. ಜೂನ್ 20, ಶುಕ್ರವಾರದಂದು ಇವರು ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ಕೆಲಸಕ್ಕೆ ಸಂಬಂಧಿಸಿದ ಒತ್ತಡ ಮತ್ತು ವೃತ್ತಿಪರ ಅವಕಾಶಗಳ ಕೊರತೆ ಎಂದು ಹೇಳಲಾಗುತ್ತಿದೆ.

ನಟ ಅಂಕುರ್ ವಿಠಲರಾವ್ ವಾಧವ ಇನ್ಮಾಗ್ರಾಂನಲ್ಲಿ ತಮ್ಮ ಪೋಸ್ಟ್ ಹಂಚಿಕೊಂಡಿದ್ದಾರೆ. ಏಕೆ ಸ್ನೇಹಿತ..? ಯಾವುದಕ್ಕಾಗಿ..? ಕೆಲಸಗಳು ಬರುತ್ತದೆ ಮತ್ತು ಹೋಗುತ್ತದೆ! ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಆದರೆ ಆತ್ಮಹತ್ಯೆ ದಾರಿಯಲ್ಲ! ಪ್ರಸ್ತುತ ಪರಿಸ್ಥಿತಿ ವಿಚಿತ್ರವಾಗಿದೆ ಎಂದು ಒಪ್ಪುತ್ತೇನೆ. ಆದರೆ ಇಂತಹ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಬಾರದು ತುಷಾರ್ ಘಡಿಗಾಂಪ್ಟರ್. ನೀವು ಸೋತರ ನಾವೆಲ್ಲರೂ ಸೋಲುತ್ತೇವೆ” ಎಂದು ಬರೆದಿದ್ದಾರೆ.

LEAVE A REPLY

Please enter your comment!
Please enter your name here