ಸೈಂಟ್ ರೀಟಾ ಇಂಗ್ಲಿಷ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0
104

ಜೆಪ್ಪು ಸೈಂಟ್ ರೀಟಾ ಇಂಗ್ಲಿಷ್ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶನಿವಾರ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಧ್ಯಾಯಿನಿ ಮೆಟಿಲ್ಡಾ ಡಿ ಕ್ರಾಸ್ತಾ ಮಾತನಾಡಿ, ಉತ್ತಮ ಆರೋಗ್ಯಕರ ಜೀವನಕ್ಕಾಗಿ ಯೋಗಾಸನವು ಅವಶ್ಯಕವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಮಟ್ಟದಲ್ಲಿ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಸೇರಿದಂತೆ ಪವರ್ ಲಿಫ್ಟಿಂಗ್ ಹಾಗೂ ಬೆಂಚ್ ಪ್ರೆಸ್ ನಲ್ಲಿ 4 ಚಿನ್ನದ ಪದಕ ಪಡೆದಂತಹ ಪವರ್ ಲಿಫ್ಟಿರ್ ಹಾಗೂ ಬಾಡಿ ಬಿಲ್ಡರ್ ಅಶ್ವಿನಿ ಆಗಮಿಸಿದ್ದು, ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ದೈಹಿಕ ಶಿಕ್ಷಕಿ ಉಷಾ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಯೋಗ ಪ್ರದರ್ಶನವನ್ನು ಮಾಡಿದರು ಹಾಗೂ ಯೋಗದ ಮಹತ್ವಗಳ ಬಗ್ಗೆ ತಿಳಿದುಕೊಂಡರು.

LEAVE A REPLY

Please enter your comment!
Please enter your name here