ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ಆದಿ ಶಂಕರ ಸ್ಥಾನಿಕ ಬ್ರಾಹ್ಮಣ ಸಂಘದ 34 ನೇ ವರ್ಷದ ಮಹಾಸಭೆಯಲ್ಲಿ ಸೋಣ ಸಂಭ್ರಮ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಹಿರಿಯರಾದ ಶಿರ್ತಾಡಿ ಮಕ್ಕಿ ಜಗದೀಶ ರಾವ್ ಹಾಗೂ ಕಟೀಲು ಸಿತ್ಥ ಗಂಗಮ್ಮ ರವರನ್ನು ಸನ್ಮಾನಿಸಲಾಯಿತು. ಆಯುರ್ವೇದದಲ್ಲಿ ರ್ಯಾಂಕ್ ಪಡೆದ ದೀಪ್ತಿ ರಾವ್, ಪಿ.ಯು.ನಲ್ಲಿ ರ್ಯಾಂಕ್ ಪಡೆದ ಪ್ರಣವಿ ರಾವ್, ಎಸ್ .ಎಸ್.ಎಲ್.ಸಿ.ಯಲ್ಲಿ ರ್ಯಾಂಕ್ ಪಡೆದ ಸಾನಿಧ್ಯ ರಾವ್ ರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಉಡುಪಿಯ ಶ್ರಿಂಗೇರಿ ಧರ್ಮಾಧಿಕಾರಿ ವಾಗೀಶ ಶಾಸ್ತ್ರಿ, ಕುಂಭಾಶಿ ಗಣೇಶ ರಾವ್, ಧರ್ಮಸ್ಥಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್, ಮಂಗಳೂರು ಡಾ.ಎ.ಪಿ.ಕೃಷ್ಣ, ಕಾರ್ಕಳದ ಮುರಳೀಧರ ಶರ್ಮ, ಸಂಘದ ಅಧ್ಯಕ್ಷ ದೇವಾನಂದ ಭಟ್, ಕಾರ್ಯದರ್ಶಿ ಸುರೇಶ್ ರಾವ್, ಖಜಾಂಚಿ ವಸಂತ ರಾಜ್ ಹಾಜರಿದ್ದರು.

