ಸೆ.17ರಂದು ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದಲ್ಲಿ ಅಗೇಲು ಸೇವೆ

0
50

ಅಳದಂಗಡಿ: ಕನ್ಯಾ ಸಂಕ್ರಮಣದ ಪ್ರಯುಕ್ತ ಅಳದಂಗಡಿಯ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದಲ್ಲಿ ಸೆಪ್ಟೆಂಬರ್ 17ರಂದು ಅಗೇಲು ಸೇವೆ ನಡೆಯಲಿದೆ.

ಈ ಸಂದರ್ಭದಲ್ಲಿ ಕ್ಷೇತ್ರದ ಭಕ್ತಾಧಿಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಗೇಲು ಸೇವೆ ಹಾಗೂ ಅನ್ನಸಂತರ್ಪಣೆಯ ಸದುಪಯೋಗ ಪಡೆದುಕೊಳ್ಳುವಂತೆ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶಿವಪ್ರಸಾದ್ ಅಜಿಲರು ವಿನಂತಿಸಿದ್ದಾರೆ.