ಕನಿಷ್ಠ ಕೂಲಿ ಜಾರಿಗಾಗಿ ಎ ಐ ಟಿ ಯು ಸಿ ಪ್ರತಿಭಟನೆ

0
53

ಕನಿಷ್ಟವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆಯನ್ನು ತಕ್ಷಣ ಹೊರಡಿಸಬೇಕು, ವೈಜ್ಞಾನಿಕವಾಗಿ ಕನಿಷ್ಟಕೂಲಿ ಜ್ಯಾರಿಗೊಳಿಸಬೇಕು -ಎಂಬಿತ್ಯಾದಿ ಬೇಡಿಕೆಗಳನ್ನು ಒತ್ತಾಯಿಸಿ ಕಾರ್ಮಿಕ ಇಲಾಖೆಯ ಜಿಲ್ಲಾ ಕಛೇರಿಗಳೆದುರು ಪ್ರತಿಭಟಿಸಿ ಕಾರ್ಮಿಕ ಅಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿ ಮತ್ತು ಕಾರ್ಮಿಕ ಮಂತ್ರಿಯವರಿಗೆ ಮನವಿ ಸಲ್ಲಿಸಬೇಕೆಂದು ಕರ್ನಾಟಕ ರಾಜ್ಯ ಎಐಟಿಯುಸಿ ಕರೆ ನೀಡಿತ್ತು.

ಇದರಂತೆ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಯಿತು. ಮಂಗಳೂರಿನಲ್ಲಿ ಜರಗಿದ ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಸೀತಾರಾಂ ಬೇರಿಂಜ, ಉಪಾಧ್ಯಕ್ಷ ಬಿ.ಶೇಖರ್ ಮಾತನಾಡಿದರು. ಸಹ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿ ಪ್ರಸ್ತಾವನೆ ಗೈದರು, ಶಮಿತ ಬಿಸಿರೋಡ್ ವಂದಿಸಿದರು. ನಂತರ ಮಾನ್ಯ ಸಹಾಯಕ ಕಾರ್ಮಿಕ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಯಿತು.

ಎಐಟಿಯುಸಿ ಜಿಲ್ಲಾ ಕೋಶಾಧಿಕಾರಿ ಎ.ಪ್ರಭಾಕರ್ ರಾವ್, ಮಾಜಿ ಅಧ್ಯಕ್ಷ ವಿ.ಕುಕ್ಯಾನ್, ಸಹ ಕಾರ್ಯದರ್ಶಿ ಕರುಣಾಕರ್ ಮಾರಿಪಲ್ಲ, ಹರ್ಷಿತ್ ಬಂಟ್ವಾಳ್, ಕೃಷ್ಣಪ್ಪ ಪಿಲಿಕುಲ, ಸುಧಾಕರ್ ಕಲ್ಲೂರು, ಗೀತಾ ಬಜಾಲ್, ರೇವತಿ ಎಳಿಂಜೆ, ಮೀನಾಕ್ಷಿ ಶಾಂತಿಪಲ್ಕೆ, ವಾರಿಜ ಬರ್ವ, ಭಾರತಿ ಪ್ರಶಾಂತ್, ಮೋಹನ ಅರಳ, ಕುಸುಮ ಕಲ್ಲಿಗೆ, ಮೋಹಿನಿ, ಜಯಂತ, ಎಂ.ಬಿ.ಭಾಸ್ಕರ್ ನೇತೃತ್ವ ವಹಿಸಿದರು.

ಮಣಿಪಾಲದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮಾನ್ಯ ಕಾರ್ಮಿಕ ನಿರೀಕ್ಷಕರ ಮೂಲಕ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ವಿ.ಸೀತಾರಾಂ ಬೇರಿಂಜ, ಬಿ.ಶೇಖರ್, ಸುರೇಶ್ ಕುಮಾರ್, ವಿ.ಕುಕ್ಯಾನ್, ಕರುಣಾಕರ್, ಉಡುಪಿಯ ಎಐಟಿಯುಸಿ ನಾಯಕರಾದ ಶಿವಾನಂದ, ಶಶಿಕಲ ಗಿರೀಶ್, ಸುಚಿತ್ರ ಶೆಟ್ಟಿ, ಅಪ್ಪಿ , ಭೂಪೇಶ್ ಪಾಲನ್ ಮುಂತಾದವರು ಉಪಸ್ಥಿತರಿದ್ದರು.

ವರದಿ : ರಾಯಿ ರಾಜ ಕುಮಾರ
.

LEAVE A REPLY

Please enter your comment!
Please enter your name here