ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ : ದ. ಕ. ಜಿಲ್ಲಾ ಸಮಿತಿ ಯಿಂದ ‘ಆತ್ಮಬೋಧೆಯಿಂದ ವಿಶ್ವಬೋಧೆಯಡೆಗೆ’ ಜಿಲ್ಲಾ ಅಧಿವೇಶನ

0
31

-ಮಂದಾರ ರಾಜೇಶ್ ಭಟ್

​ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂದಾಯಿತ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ‘ಆತ್ಮಬೋಧೆಯಿಂದ ವಿಶ್ವಬೋಧೆಯೆಡೆಗೆ‘ ಎಂಬ ಆಶಯದೊಂದಿಗೆ ಜಿಲ್ಲಾ ಅಧಿವೇಶನವನ್ನು ಅಕ್ಟೋಬರ್ 25, 2026ರ ಭಾನುವಾರದಂದು ಶೀಮಂತೂರು ಮುಲ್ಕಿಯ ಶ್ರೀ ಆದಿ ಜನಾರ್ದನ ದೇವಾಲಯದಲ್ಲಿ ಆಯೋಜಿಸಲಾಗಿದೆ.

​ಉದ್ಘಾಟನಾ ಕಾರ್ಯಕ್ರಮ ಪೂರ್ವಾಹ್ನ 09:30 ರಿಂದ ಈ ಕಾರ್ಯಕ್ರಮವನ್ನು ಲೇಖಕರು ಹಾಗೂ ವಿದ್ವಾಂಸರಾದ ಡಾ. ವೀಣಾ ಬನ್ನಂಜೆ ಅವರು ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಪೂರ್ವ ಅಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಅಭಾಸಾಪ ಕರ್ನಾಟಕದ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಗಣೇಶ ಅಡಿಗ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಸಾಹಿತ್ಯ ಗೋಷ್ಠಿ ಸಾಹಿತ್ಯದಲ್ಲಿ ವಿಶ್ವಬೋಧೆ ಪೂರ್ವಾಹ್ನ 10:45 ರಿಂದ ಕಾರ್ಯಕ್ರಮದ ಭಾಗವಾಗಿ ನಡೆಯುವ ಸಾಹಿತ್ಯ ಗೋಷ್ಠಿಯಲ್ಲಿ ‘ಸಾಹಿತ್ಯದಲ್ಲಿ ವಿಶ್ವಬೋಧೆ’ ಎಂಬ ವಿಷಯದ ಕುರಿತು ವಿವಿಧ ಭಾಷಾ ಸಾಹಿತ್ಯಗಳ ಅಡಿಯಲ್ಲಿ ವಿಚಾರ ಮಂಡನೆ ನಡೆಯಲಿದೆ.

​ಸಂಸ್ಕೃತ ಸಾಹಿತ್ಯದಲ್ಲಿ ವಿಶ್ವಬೋಧೆ

ಡಾ. ಮಧುಕೇಶ್ವರ ಶಾಸ್ತ್ರಿ ಉಪನ್ಯಾಸಕರು, ಕೆನರಾ ಪ.ಪೂ ಕಾಲೇಜು, ಮಂಗಳೂರು ಕನ್ನಡ ಸಾಹಿತ್ಯದಲ್ಲಿ ವಿಶ್ವಬೋಧೆ : ರೋಹಿತ್ ಚಕ್ರತೀರ್ಥ ಲೇಖಕರು ಮತ್ತು ಪ್ರಕಾಶಕರು ತುಳು ಸಾಹಿತ್ಯದಲ್ಲಿ ವಿಶ್ವಬೋಧೆ: ದೀವಿತ್.ಕೆ. ಪೆರಾಡಿ ಅಧ್ಯಾಪಕರು ಮತ್ತು ಯಕ್ಷಗಾನ ಗುರುಗಳು, ಮಾತನಾಡಲಿದ್ದಾರೆ

​ಸಾಂಸ್ಕೃತಿಕ ಕಾರ್ಯಕ್ರಮ ಮಧ್ಯಾಹ್ನ 01:15 ರಿಂದ ಮಧ್ಯಾಹ್ನ ಮಂಗಳೂರಿನ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಇಲ್ಲಿನ ವಿದುಷಿ ಸುಮಂಗಲ ರತ್ನಾಕರ್ ರಾವ್ ಇವರ ಶಿಷ್ಯ ವೃಂದದವರಿಂದ ‘ನೃತ್ಯ ವರ್ಣ’ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲಿದೆ.

​ಬಹುಭಾಷಾ ಕವಿಗೋಷ್ಠಿ ಮಧ್ಯಾಹ್ನ 02:00 ರಿಂದ ಮಧ್ಯಾಹ್ನ 2 ಗಂಟೆಗೆ ಹಿರಿಯ ಕವಿ ಹಾಗೂ ಲೇಖಕರಾದ ಶ್ರೀಧರ್ ಡಿ.ಎಸ್ ಕಿನ್ನಿಗೋಳಿ, ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನೆರವೇರಲಿದೆ.

​ಸಮಾರೋಪ ಸಮಾರಂಭ ಅಪರಾಹ್ನ 03:30 ರಿಂದ ​ಅಪರಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಭಾಸಾಪ ಕರ್ನಾಟಕದ ಹಿರಿಯ ಪೂರ್ವಾಧ್ಯಕ್ಷರಾದ ಪ್ರೊ. ಪ್ರೇಮಶೇಖರ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.

ಅಭಾಸಾಪ ದ.ಕ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ವೀಣಾ ಟಿ. ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಆದಿ ಜನಾರ್ದನ ದೇವಸ್ಥಾನ, ಶೀಮಂತೂರು-ಮುಲ್ಕಿಯ ಆಡಳಿತ ಮೊಕ್ತೇಸರರಾದ ಉದಯ ಬಿ. ಶೆಟ್ಟಿ ಅವರು ಉಪಸ್ಥಿತರಿರಲಿದ್ದಾರೆ.

ಎಂಬ ಮಾಹಿತಿಯನ್ನು ಅಬಾಸಾಪ ಮೂಡುಬಿದರೆ ಘಟಕ ಕಾರ್ಯದರ್ಶಿ ಅನಿತಾ ಶೆಟ್ಟಿಯವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.