ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಅಳದಂಗಡಿ ವಲಯದ ಆಟಿದ ಕೂಟ ಮತ್ತು ವಾರ್ಷಿಕ ಸಭಾ ಕಾರ್ಯಕ್ರಮವು ಅಳದಂಗಡಿ ಪಂಚಾಯಿತಿ ಹಾಲ್‌ನಲ್ಲಿ ನಡೆಯಿತು ಆಟೋಟ ಸ್ಪರ್ಧೆ ಸಭಾ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಡಾಕ್ಟರ್ ಎನ್ ಎಮ್ ತುಳುಪುಳೆ ನೆರೆವೇರಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನುಷಾ ಪ್ರಕಾಶ್ ವಹಿಸಿದರು. ರಮೇಶ್ ಟೂರ್ಸ್ & ಟ್ರಾವಲ್ಸ್ ಮಾಲಕರು ಕ್ರೀಡಾಕೂಟದ ಉದ್ಘಾಟನೆ ಯನ್ನು ಮಾಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ವೇದಾವತಿ ಜನಾರ್ಧನ್ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ರಾಜು ಪೂಜಾರಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ಲೆನ್ಸಿ ಡಿಸೋಜಾ, ಶಶಿಕಲಾ ಗೋಪಾಲ್ ಜಿಲ್ಲಾ ಸಮಿತಿಯ ಸದಸ್ಯರಾದ ಶಾಂಭವಿ ಪಿ ಬಂಗೇರ, ನಾಗೇಶ್ ಕುಮಾರ್ ಉಜಿರೆ ರವೀಂದ್ರ ಗೇರುಕಟ್ಟೆ ಕ್ಷೇತ್ರ ಸಮಿತಿಗೆ ಆಯ್ಕೆಯಾದ ಹರೀಶ್ ಟೈಲರ್ ಅಳದಂಗಡಿ ಭಾಗವಹಿಸಿದರು ಸುನಿಲ್ ಜೈನ್ ಪದ್ಮಾಂಬ ಕೇಟರಿಂಗ್ ಮುಖ್ಯ ಅಧಿತಿ. ಹಾಗೂ ನಮ್ಮ ಆಹ್ವಾನಕ್ಕೆ ಆಗಮಿಸಿದ ಕ್ಷೇತ್ರದ ಉಪಾಧ್ಯಕ್ಷರು ವಸಂತ ಟೈಲರ್ ಹಾಗೂ ಬೆಳ್ತಂಗಡಿ ವಲಯದ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್ ವಲಯದ ಕೋಶಾಧಿಕಾರಿ ರೇಖಾ ಉಪಸ್ಥಿತಿಯಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ಸದಾನಂದ ಬಳಂಜ ಮಾಡಿದರು ಸ್ವಾಗತವನ್ನು ವಲಯದ ಕಾರ್ಯದರ್ಶಿಯಾದ ಜಗನ್ನಾಥ ಕುಲಾಲ್ ಮತ್ತು ಧನ್ಯವಾದ ಮೋಹನ್ ದಾಸ್ ಅಳದಂಗಡಿ ಮಾಡಿದರು.

