ಹಿಂದೂ ಕಾರ್ಯಕರ್ತರ ಮೇಲೆ ಪೋಲೀಸ್ ದೌರ್ಜನ್ಯ ಆರೋಪ ಜೈಲ್ ಭರೋ ಎಚ್ಚರಿಕೆ

0
91

ಮಂಗಳೂರು ಪತ್ರಿಕಾಗೋಷ್ಠಿಯಲ್ಲಿ ಗುಡುಗಿದ ಹಿಂಜಾವೇ ಮುಖಂಡ ಹಿರಿಯ ವಕೀಲ ಕಿಶೋರ್ ಕುಮಾರ್ ಕೋಡಿಕಲ್

ದಕ್ಷಿಣಕನ್ನಡ ಜಿಲ್ಲೆಯ ಮತ್ತು ಪೋಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಹಿಂದೂ ಸಾಮಾಜಿಕ ಕಾರ್ಯಕರ್ತರ ಮೇಲೆ ರಾಜಕೀಯ ಪ್ರೇರಿತವಾಗಿ ಗಡಿಪಾರು ನೋಟಿಸ್ ಬಾಂಡ್ ನೀಡುವಂತೆ ಒತ್ತಾಯಿಸಿ ಕಿರುಕುಳು ನೀಡಲಾಗುತ್ತಿದ್ದು ಪೋಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಜೈಲ್ ಭರೋ ಚಳುವಳಿ ನಡೆಸಲಾಗುವುದು ಎಂದು ಹಿಂದು ಜಾಗರಣ ವೇದಿಕೆ ಎಚ್ಚರಿಸಿದೆ.

ನಗರದಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಹಿಂಜಾವೇ.ಪ್ರಾಂತ ಕಾರ್ಯಕಾರಣೆ ಸದಸ್ಯ ಹಿರಿಯ ವಕೀಲರಾದ ಕಿಶೋರ್ ಕುಮಾರ್ ಕೋಡಿಕಲ್ ಮಾತನಾಡಿ ಪುತ್ತೂರಿನಲ್ಲಿ ವಿವಿಧ ಪ್ರಕರಣದಲ್ಲಿ ಸಂಘಟನೆಯ ಪ್ರಮುಖರ ಮೇಲೆ ವಿಳಂಬವಾಗಿ ಪ್ರಕರಣ ದಾಖಾಲಿಸಲಾಗಿದೆ.ಸಾಮಾಜೀಕ ಕಾರ್ಯಕರ್ತರಿಗೆ ನೋಟಿಸ್ ನೀಡಿ ರಾತ್ರಿ ವೇಳೆ ಹೆಚ್ಚಿನ ಪೋಲೀಸ್ ಮನೆಗಳಿಗೆ ತೆರಲಿ ಭಯದ ವಾತವರಣ ಸೃಷ್ಟಿಸುತ್ತಿದ್ದರೆ ಎಂದು ಆರೋಪಿಸಿದರು.

ಪೋಲೀಸ್ ಇಲಾಖೆ ಈ ವಿಚಾರಗಳನ್ನು ಪರಿಶೀಲನೆ ನಡೆಸಿ ಕಾನೂನು ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿ ಎಚ್ಚರಿಸಿದರು.ಈ ಸಂದರ್ಭದಲ್ಲಿ ಮಂಗಳೂರು ವಿಭಾಗದ ಹಿಂಜಾವೇ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.