ಮಂಗಳೂರು: ಎಸ್ ಡಿ ಎಂ ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಾಂಜುರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಉಲ್ಲಾಳ ರಾಣಿ ಅಬ್ಬಕ್ಕ, ಆರ್ ಸಿ ಸಿ ತುಳುನಾಡು ಇವರ ಜಂಟಿ ಆಶ್ರಯದಲ್ಲಿ ಪ್ರಾರ್ಥಮಿಕ ಮತ್ತು ಪ್ರೌಢಶಾಲಾ ವಿಭಾಗದಿಂದ ತಾಲೂಕು ಮಟ್ಟದ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026 ಜೂನ್ 21,2026 ನೇ ರವಿವಾರ ರಂದು SDM ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರಿನಲ್ಲಿ ನಡೆಸಲಾಯಿತು. ಉದ್ಘಾಟನೆಯನ್ನು ದೈಹಿಕ ಶಿಕ್ಷಣ ಪರಿವೀಕ್ಷಕರು, ಮಂಗಳೂರು ದಕ್ಷಿಣ ವಲಯದ ಶ್ರೀ ಜಗದೀಶ್ ಕೆ ಅಲಯನ್ಸ್ ಕ್ಲಬ್ ಮಂಗಳೂರಿನ ಅಧ್ಯಕ್ಷರಾದ ಜಿ ಕೆ ಹರಿಪ್ರಸಾದ ರೈ ಕಾರಮೊಗರು , ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿ, ರೋಟರಿ ಕ್ಲಬ್ಬಿನ ಮಂಗಳೂರು ಸಿಟಿ ಅಧ್ಯಕ್ಷರಾದ ಸಂಜನಾ ಭಾಸ್ಕರ್, ಆರ್ ಸಿ ಸಿ ಯ ಸದಸ್ಯರಾದ ಸನ್ಮಥ ಹೆಗ್ಡೆ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಣಿ ಅಬ್ಬಕ್ಕ ಉಪಾಧ್ಯಕ್ಷರಾದ ಸತೀಶ್ ಭಂಡಾರಿ ಮುಂತಾದವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು ಕಾರ್ಯಕ್ರಮದ ಸ್ವಾಗತವನ್ನು ರಮೇಶ ಆಚಾರ್ಯ ನಿರೂಪಣೆಯನ್ನು ಗಂಗಾಧರ, ವಿಠಲ ವಾಗೋರೆ ವಂದಿಸಿದರು. ಯೋಗ ಪ್ರಾತ್ಯಕ್ಷತೆಯನ್ನು ಸಮದೇಸ್ಷ್ಠರು ಎಸ್ ಡಿ ಆರ್ ಎಫ್ ಪಾಂಡೇಶ್ವರದ ಯೋಗಪಟು ಸುರೇಶ್ ಶೆಟ್ಟಿ ನಡೆಸಿಕೊಟ್ಟರು ಸುಮಾರು 400 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಅವರಿಗೆ ಅಲಯನ್ಸ್ ಕ್ಲಬ್, ಮಂಗಳೂರು ವತಿಯಿಂದ ಮಕ್ಕಳಿಗೆ ಸಿಹಿ ತಿಂಡಿಯನ್ನು ವಿತರಿಸಲಾಯಿತು. ಎಂಬುದಾಗಿ ಸಂಘ- ಸಂಸ್ಥೆಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

