ಅಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ಅಲಯನ್ಸ್ ಉಡುಪಿ ಜಿಲ್ಲೆಯ ಪ್ರಥಮ ಜಿಲ್ಲಾ ಸಮ್ಮೇಳನ – ವಿಜಯಲಕ್ಷ್ಮೀ

0
32

ಉಡುಪಿ : 2025 ರಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಾರಂಭವಾದ ಭಾರತೀಯ ಮೂಲದ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ಅಲಯನ್ಸ್ ಜಿಲ್ಲೆ 275 ಎಸ್ ಇದರ ಪ್ರಥಮ ಜಿಲ್ಲಾ ಸಮ್ಮೇಳನವು ಉಡುಪಿ ಟೌನ್ ಹಾಲ್ ನಲ್ಲಿ ಫೆ. 3 ರಂದು ನಡೆಯಿತು.

ಅಲಯನ್ಸ್ ಜಿಲ್ಲೆ 275 ಇದರ ಜಿಲ್ಲಾ ಗವರ್ನರ್ ಅಲೈ ಸುನಿಲ್ ಸಾಲಿಯಾನ್ ಕಡೆಕಾರ್ ಇವರ ಅಧ್ಯಕ್ಷತೆಯಲ್ಲಿ ಸಮಾವೇಶ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಅಲಯನ್ಸ್ ಸಂಸ್ಥೆಯ ಅಂತರಾಷ್ಟ್ರೀಯ ನಿರ್ದೇಶಕರಾದ ಅಲೈ ನಾಗರಾಜ ಬಾಯಾರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಂತರಾಷ್ಟ್ರೀಯ ಕಮಿಟಿ ಸದಸ್ಯ ಅಲೈ ಕೆ. ಎಂ. ಮುನಿಯಯಪ್ಪ ರವರು ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು.

ಅಲಯನ್ಸ್ ಪ್ರೇಯರನ್ನು ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಕೋಶಾಧಿಕಾರಿ ಅಮೃತ ಹಾಗೂ ನ್ಯಾಷನಲ್ ಪ್ಲೆಜ್ ನ್ನು ಉಡುಪಿ ರಾಯಲ್ ಅಧ್ಯಕ್ಷರಾದ ಡಾ. ಗಾಯತ್ರಿ ಸಂತೋಷ್ ಓದಿ ನೆರವೇರಿಸಿದರು.ಜಿಲ್ಲೆಯ 15 ಅಲಯನ್ಸ್ ಕ್ಲಬ್ ಗಳಿಂದ ಮೆರವಣಿಗೆಯಲ್ಲಿ ಒಂದೊಂದೇ ಕ್ಲಬ್ ತಂಡವು ಚೆಂಡೆ ವಾದನದ ಹಿಮ್ಮೇಳದಲ್ಲಿ ಸಾಗಿ ಬಂದು ಬ್ಯಾನರ್ ಪ್ರದರ್ಶನ ಗೊಂಡಿತು. ವಲಯ ಅಧ್ಯಕ್ಷ ರಾದ ಡಾ. ಸಂತೋಷ್ ಕುಮಾರ್ ಬೈಲೂರು ಆಯಾ ಕ್ಲಬ್ ಗಳ ಸೇವಾ ಚಟುವಟಿಕೆಗಳ ವರದಿ ವಾಚಿಸಿದರು.

ಅಲಯನ್ಸ್ ಕ್ಲಬ್ ಅಂಬಲ್ಪಾಡಿ ಇದರ ನೇತೃತ್ವದಲ್ಲಿ ನಡೆದ ಸಮ್ಮೇಳನದಲ್ಲಿ 2026-2027 ನೇ ಸಾಲಿನ ಜಿಲ್ಲಾ ಗವರ್ನರ್ ಸ್ಥಾನಕ್ಕೆ ಅಲೈ ಸುನಿಲ್ ಕುಮಾರ್ ಶೆಟ್ಟಿ, ಪ್ರಥಮ ಉಪ ಜಿಲ್ಲಾ ಗವರ್ನರ್ ಅಲೈ ಸುಧಾಕರ ಹೆಗ್ಡೆ, ಹಾಗೂ ದ್ವೀತೀಯ ಉಪ ಜಿಲ್ಲಾ ಗವರ್ನರ್ ಸ್ಥಾನಕ್ಕೆ ಡಾ. ಅಶೋಕ್ ಕುಮಾರ್ ವೈ. ಜಿ. ಇವರು ಸ್ಪರ್ದಿಸಿದ್ದು ಚುನಾವಣಾ ಪ್ರಕ್ರಿಯೆ ನಡೆದು ಅವಿರೋಧವಾಗಿ ಆಯ್ಕೆಯಾದರು. ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯಾಗಿ ಜಿಲ್ಲಾ 275 ಎಸ್ ಇದರ ಕಮಿಟಿಗೆ ಸುಮಾರು 20 ಮಂದಿ ವಿವಿಧ ಅಲಯನ್ಸ್ ಕ್ಲಬ್ ಗಳಿಂದ ಸೇರ್ಪಡೆಗೊಂಡರು.ಹಾಗೂ ಕೆಲವು ಮಂದಿ ಗಣ್ಯರು ಅಲಯನ್ಸ್ ಕ್ಲಬ್ಬಿಗೆ ಸೇರುವುದಾಗಿ ಘೋಷಿಸಿದರು.

ನೂತನ ಎಲ್ಲಾ ಜಿಲ್ಲಾ ಗವರ್ನರುಗಳು ಎಲ್ಲರ ಸಹಕಾರ ಬಯಸಿ ಮಾತನಾಡಿದರು.ಗಣ್ಯರಿಗೆ, ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ಕ್ಯಾಬಿನೆಟ್ ಸೆಕ್ರೆಟರಿ ಡಾ. ಜಗದೀಶ್ ಹೊಳ್ಳ,, ಕೋಶಾಧಿಕಾರಿ ರಮಾನಂದ ಶೆಟ್ಟಿಗಾರ್, ಇಂಟರ್ನ್ಯಾಷನಲ್ ಕಮಿಟಿ ಛೇರ್ಮನ್ ಡಾ. ಡಿ. ಶ್ರೀಧರ್ ಸೇನವ, ಜಿಲ್ಲಾ ಸಲಹೆಗಾರರಾದ ಡಾ. ತಲ್ಲೂರ್ ಶಿವರಾಮ ಶೆಟ್ಟಿ, ಮುಖ್ಯ ಸಂಘಟಕರಾದ ಸುದರ್ಶನ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ರಾಯಬಾರಿ ಗೋಪಾಲ್ ಸಿ ಬಂಗೇರ ಸ್ವಾಗತಿಸಿದರು. ಪಿ ಆರ್. ಓ. ಜಯರಾಮ ಆಚಾರ್ಯ ವಂದಿಸಿದರು. ಸುರೇಶ್ ಪೂಜಾರಿ ಮತ್ತು ಪ್ರತಾಪ್ ಕುಮಾರ್ ಉದ್ಯಾವರ ನಿರೂಪಿಸಿದರು.ಸಮಾವೇಶದಲ್ಲಿ ಜಿಲ್ಲೆ ಯಿಂದ ಆಗಮಿಸಿದ ನೂರಾರು ಮಂದಿ ಅಲಯನ್ಸ್ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು.

ಕಾರ್ಯಕ್ರಮದ ಪ್ರಾರಂಭದ ಮೊದಲು ಜಿಲ್ಲೆಯ ಅಲಯನ್ಸ್ ಕ್ಲಬ್ ಗಳಿಂದ ಆಗಮಿಸಿದವರು ಕರೋಕೆ ಹಾಡು ಹಾಡಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here