ವಿದ್ಯಾರ್ಥಿ ಸೋಶಿಯಲ್ ಎಜುಕೇಶನ್ ಸೊಸೈಟಿ ಯಿಂದ ಅಂಬೇಡ್ಕರ್ 135 ನೇ ಜನ್ಮ ದಿನಾಚರಣೆ

0
18

ವಿದ್ಯಾಸಿರಿ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ, ಪುಸ್ತಕ ವಿತರಣೆ

ವಿವಿಧ ಜಿಲ್ಲಾ ವ್ಯಾಪ್ತಿಗಳನ್ನು ಹೊಂದಿರುವ ವಿದ್ಯಾರ್ಥಿ ಸೋಶಿಯಲ್ ಎಜುಕೇಶನ್ ಸೊಸೈಟಿ ಯವರು ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆಯನ್ನು ಮೂಡುಬಿದಿರೆ ಕನ್ನಡ ಭವನದಲ್ಲಿ ಜೂನ್ 14ರಂದು ಆಚರಿಸಿದರು. ಕುಪ್ಪೆಪದವು ವರಾಹ ಫೌಂಡೇಶನ್ ಅಧ್ಯಕ್ಷ ಗಿರೀಶ್ ಆಳ್ವ ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಾರ್ಪಣೆ ಗೈದು ಸಾಮಾಜಿಕ ಉನ್ನತಿಗಾಗಿ ಹೋರಾಡಿದ ಅಂಬೇಡ್ಕರ್ ಅವರನ್ನು ಸ್ಮರಿಸಿಕೊಂಡರು. ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಸಹಾಯ ನೀಡುತ್ತಿರುವ ಶ್ರೀನಿವಾಸ್ ಅವರ ಶ್ರಮವನ್ನು ಕೊಂಡಾಡಿದರು.

ಮೂಡುಬಿದಿರೆ ಶ್ರೀನಿವಾಸ ನೇತ್ರಾಲಯದ ಮ್ಯಾನೇಜಿಂಗ್ ಡೈರೆಕ್ಟರ್ ಡಾ ನಿವೇದಿತಾ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸನ್ಮಾನ, ಪುಸ್ತಕ ವಿತರಣೆ ಇತ್ಯಾದಿ ಸಾಮಾಜಿಕ ಕಾರ್ಯಗಳಿಗೆ ಸೊಸೈಟಿಯನ್ನು ಮೆಚ್ಚಿಕೊಂಡರು. ಇಂತಹ ಕಾರ್ಯಗಳಿಗೆ ಸದಾ ಪ್ರೋತ್ಸಾಹದ ಭರವಸೆಯನ್ನು ನೀಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರೋಗ್ಯ ತಜ್ಞೆ ಕು ಮೋಕ್ಷಿತ ಯು ಹಾಗೂ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಕು ವೀಣಾ ಅವರಿಗೆ ವಿದ್ಯಾಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕ್ರೀಡಾ ಸಾಧನೆಯನ್ನು ಗೈದ ನಳಿನಾಕ್ಷಿ, ನಂದಕುಮಾರ್, ರಂಜನ್ ,ಗಿನ್ನೆಸ್ ದಾಖಲೆ ಮಾಡಿದ ಕಲಾತಪಸ್ವಿ ವಿನಯ್ ಕುಮಾರ್ ಗೌರವಿಸಲಾಯಿತು.

ವಿವಿಧ ಜಿಲ್ಲೆಯ ಸುಮಾರು 200 ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅವರು ಅಪೇಕ್ಷಿಸಿದಾಗ ಸಹಕರಿಸಲಾಗುತ್ತಿದೆ. ಬಹಳಷ್ಟು ವಿದ್ಯಾರ್ಥಿಗಳಿಗೆ ಅಗತ್ಯ ಇರುವ ಪುಸ್ತಕಗಳನ್ನು ಒದಗಿಸಿಕೊಡಲಾಗುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಎಂ ಎಸ್ ಮಿಜಾರ್ ನುಡಿದರು.

ವೇದಿಕೆಯಲ್ಲಿ ಹಾಂದಿ ವರಾಹ ರುದ್ರೇಶ್ವರ ದೇವಸ್ಥಾನದ ಧರ್ಮದರ್ಶಿ ಚಂದ್ರನಾಥ್ ಅಘೋರಿ, ವಿಟ್ಲದ ಸೇಸಪ್ಪ ಬೆದ್ರಕಾಡು, ಆದಿ ಗ್ರಾಮೀಣ ಸಮಾಜ ಸೇವಾ ಸಂಘದ ಕೃಷ್ಣಪ್ಪ ಜಾವಳಿ, ಸುರೇಶ್ ಆರ್ಡಿ ಕೊಪ್ಪ, ಪಡೀಲ್ ಮಹಾಬಲ ಎಂ., ಗುರುವಪ್ಪ, ಧಾರ್ಮಿಕ ಪರಿಷತ್ ಸದಸ್ಯ ಹರಿಯಪ್ಪ ಮುತ್ತೂರು, ಚಂದಪ್ಪ ಮಾಸ್ಟರ್, ಸೋಮಪ್ಪ, ಸುನಿಲ್, ಹಾಜರಿದ್ದರು.

ಲಿಖಿತ ಶಾಲೆಯ ಸ್ವಾಗತಿಸಿದರು. ಸೌಮ್ಯ ಕುಂದರ್ ಕಾರ್ಯಕ್ರಮ ನಿರ್ವಹಿಸಿದರು. ಶೋಭಾ ರಾಣಿ ಪ್ರಾಸ್ತಾವಿಕ ಮಾತನಾಡಿ ವಂದಿಸಿದರು.

LEAVE A REPLY

Please enter your comment!
Please enter your name here