ಮೂಡುಬಿದಿರೆಯಿಂದ ಉತ್ತರ ಪ್ರದೇಶದ ವರೆಗೆ ಅಂತರ್ ರಾಜ್ಯ ವಿಭಿನ್ನ ಪ್ರೇಮ ಕಥೆ

0
53

ಮೂಡುಬಿದಿರೆ :ತಾಲೂಕಿನ ಪಡುಮಾರ್ನಾಡ್ ಗ್ರಾಮದ ಅಚ್ಚರಕಟ್ಟೆ ನಿವಾಸಿ ಕುಮಾರಿ ರಮ್ಯಾ 18ವರ್ಷದ ಯುವತಿ ಆಗಸ್ಟ್ 28ರ ರಾತ್ರಿ ಪಕ್ಕದ ಮನೆಯಲ್ಲಿ ಮಲಗಲು ಹೋದ ಯುವತಿ ಮರುದಿನ ಬೆಳಿಗ್ಗೆ ನೋಡುವಾಗ ಮನೆಯಲ್ಲಿ ಇಲ್ಲ. ಹುಡುಕಾಡಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್.

ಆಗಸ್ಟ್ 29ರಂದು ಮಿಸ್ಸಿಂಗ್ ಕೇಸ್ ಪ್ರಕರಣ ದಾಖಲಾಗುತ್ತದೆ

ಯಾರ ಜೊತೆಯೂ ಆತ್ಮೀಯತೆ ಇಲ್ಲ. ಪಿಯುಸಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಯುವತಿ ಮನೆ ಮತ್ತು ಹೆತ್ತವರು ಕೊಡಿಸಿದ 2ಮೊಬೈಲ್ಗಳೇ ಪ್ರಪಂಚ. ಹೆತ್ತವರಿಗೆ ಫ್ರಿ ಫೈರ್ ಆನ್ಲೈನ್ ಆಟ ಆಡುತ್ತಾಳೆ. ಅಷ್ಟು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಗಿಫ್ಟ್ ಗಳು ಬರುತ್ತಿತ್ತು, ಪೋಷಕರಿಗೆ ಫ್ರಿ ಫೈರ್ ಆಟದಿಂದ ಬಂದ ಹಣದಿಂದ ಎಂದು ಯುವತಿ ಉತ್ತರ.

ಪ್ರಕರಣ ದಾಖಲಾಗುತ್ತಿದ್ದಂತೆ ಫ್ರಿ ಫೈರ್ ಆಟದ ಬೆನ್ನು ಹತ್ತಿ ಅನಾಮಿಕನ ಹುಡುಕಾಟಕ್ಕೆ ಹೊರಟಾಗ ಹುಡುಗಿಗೆ ಫ್ರಿ ಫೈರ್ ಆಟದ ಕೆಲವೊಂದು ಸ್ನೇಹಿತರ ಚಹರೆ ಸಿಕ್ಕಿರುತ್ತದೆ.
ಸಾರ್ವಜನಿಕ ವಲಯದಲ್ಲಿ ಕೆಲವೊಂದು ಅಂತೆ ಕಂತೆಗಳ ಕಥೆಗಳು ಅನ್ಯ ಸಮುದಾಯದ ಕಡೆಗೆ ತಿರುಗಿದರೂ, ಆರಕ್ಷರ ಕಣ್ಣು ಬಿದ್ದಿದ್ದು ಫ್ರಿ ಫೈರ್ ಆಟದ ಮುಖ್ಯ ಸ್ನೇಹಿತರಾದ ಪೂನೆ, ಬೆಂಗಳೂರು, ಉತ್ತರ ಪ್ರದೇಶದ ಕೊನೆಗೂ ಫ್ರಿ ಫೈರ್ ಆಟದಲ್ಲಿ ಉತ್ತರ ಪ್ರದೇಶದ ಅಮನ್ ವರ್ಮಾ ಜೊತೆ ಅಕ್ಟೋಬರ್ 11ರ ರಾತ್ರಿ ಪೊಲೀಸರು ಪತ್ತೆ ಹಚ್ಚಿ ಹುಡುಗಿಯ ಹೆತ್ತವರೊಂದಿಗೆ ಮಾತನಾಡಿಸಿದ್ದು ಹುಡುಗಿ ನಾನು ಪ್ರಾಯ ಪ್ರಭುದ್ದಳಾಗಿದ್ದು ಅಮನ್ ವರ್ಮಾ ನಾನು ಪರಸ್ಪರ ಪ್ರೀತಿಸುತ್ತಿದ್ದು ಸ್ವ ಇಚ್ಛೆಯಿಂದ ಪಕ್ಕದ ಮನೆಯಿಂದ ತೆರಳಿ ರೈಲಿನಲ್ಲಿ ಪ್ರಯಾಣಿಸಿ ಉತ್ತರ ಪ್ರದೇಶಕ್ಕೆ ಬಂದಿದ್ದೇನೆ. ಮರಳಿ ಬರುವುದಿಲ್ಲ. ನಾವಿಬ್ಬರು ಮದುವೆಯಾಗಲು ನಿರ್ಧರಿಸಿದ್ದೇವೆ. ಎಂದು ಪೊಲೀಸರಿಗೆ ಮತ್ತು ಹೆತ್ತವರಿಗೆ ಹೇಳಿಕೆ ನೀಡಿದ್ದಾಳೆ. ಮುಂದಿನ ಕಾನೂನು ಕ್ರಮವನ್ನು ಹೆತ್ತವರಿಗೆ ನಡೆಸಿಕೊಡುವುದಾಗಿ ಹೆತ್ತವರಿಗೆ ಆರಕ್ಷರು ತಿಳಿಸಿದ್ದಾರೆ.

18ವರ್ಷದ ಹೆತ್ತಕರುಳ ಪ್ರೀತಿಯನ್ನು ದಿಕ್ಕರಿಸಿ ಫ್ರಿ ಫೈರ್ ಆಟದಿಂದ ಪರಿಚಯವಾದ ಉತ್ತರ ಪ್ರದೇಶ ರಾಜ್ಯದ 1ವರ್ಷ ದ ಪ್ರೀತಿಗೆ ಜೈ ಎಂದ ಯುವತಿ

ಮೂಡುಬಿದಿರೆ ಆರಕ್ಷಕರ ತಂಡ ಬಹಳಷ್ಟು ಮುತುವರ್ಜಿಯಿಂದ ಈ ಮಿಸ್ಸಿಂಗ್ ಪ್ರಕರಣವನ್ನು ಪತ್ತೆ ಹಚ್ಚಿದ್ದು ಶ್ಲಾಘನೀಯ…

ಈ ನಡುವೆ ಸಾರ್ವಜನಿಕ ವಲಯದಲ್ಲಿ ಕೆಲವೊಂದು ಮಾನಸಿಕ ಮನಸ್ಸಿನವರು ಇಂತಹ ಸಂದರ್ಭದಲ್ಲಿ ಹೆತ್ತವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕೆ ಹೊರತು ಇಲ್ಲ ಸಲ್ಲದ ಅಂತೆ ಕಂತೆಗಳನ್ನು ಹುಟ್ಟುಹಾಕಿ ಸಮುದಾಯಗಳ ನಡುವೆ ಗೊಂದಲ ಸೃಷ್ಟಿಮಾಡಲು ಯತ್ನಿಸಿದವರಿಗೆ ಮತ್ತು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಹತ್ತಿರದ ಒಂದು ಪರಿಸರದ ಒಂದು ಸಮುದಾಯದ ಯುವಕನೊಂದಿಗೆ ಪರಾರಿಯಾಗಿದ್ದು, ಅವನಿಗೆ ಗುಟ್ಟಲ್ಲೇ ಮದುವೆ ಮಾಡಿ ಕೊಟ್ಟಿದ್ದಾರೆ ಪೊಲೀಸರು ಎಂದು ಹೆತ್ತವರಲ್ಲೇ ತಿಳಿಸಿದ್ದು ಎಷ್ಟು ಸರಿ ಎಂದು ಹೇಳಿದ ಗೃಹಸ್ಥರು ಆತ್ಮಾವಲೋಕನ ಮಾಡಿ ಕೊಳ್ಳ ಬೇಕಿದೆ.. ಯಾವುದೇ ವಿಚಾರವನ್ನು ಸತ್ಯ ಏನೆಂದು ತಿಳಿಯದೆ ಸುಳ್ಳು ಅಪ ಪ್ರಚಾರ ಮಾಡುವುದು ಎಷ್ಟು ಸರಿ.-

ವರದಿ :ಪ್ರವೀಣ್. ಆರ್. ಕೋಟ್ಯಾನ್. ಮಾರ್ನಾಡ್.